ಕೃಷ್ಣ ಜನ್ಮಾಷ್ಟಮಿಗೆ ರಾಧೆ ಶ್ಯಾಮ ಟೈಟಲ್​ ಟ್ರ್ಯಾಕ್​ ಗಿಫ್ಟ್..​!

ಕೃಷ್ಣ ಜನ್ಮಾಷ್ಟಮಿಗೆ ರಾಧೆ ಶ್ಯಾಮ ಟೈಟಲ್​ ಟ್ರ್ಯಾಕ್​ ಗಿಫ್ಟ್..​!

ಸುವರ್ಣ ವಾಹಿನಿಯಲ್ಲಿ ಇದೀಗ ರಾಧೆ ಶ್ಯಾಮ ಧಾರಾವಾಹಿ ನಿಮ್ಮ ಮುಂದೆ ಬರಲು ಸಜ್ಜಾಗ್ತಾಯಿದೆ. ರಾಧೆ ಶ್ಯಾಮ ಟೈಟಲ್​ ಕೇಳಿದ್ರೆ ಇದೊಂದು ಪೌರಾಣಿಕ ಕಥೆಯುಳ್ಳ ಧಾರಾವಾಹಿ ಎಂಬ ಊಹೆ ಬರುತ್ತೆ.. ಕಾರಣ ಇತ್ತೀಚಿನ ದಿನಗಳಲ್ಲಿ ರಾಧಕೃಷ್ಣ ಹೀಗೇ ಒಂದಿಷ್ಟು ಈ ಜೋಡಿಯ ಕಥೆಗಳು ಹೆಚ್ಚಾಗಿ ಸದ್ದು ಮಾಡ್ತಾಯಿದೆ.

ಆದ್ರೇ ಈ ರಾಧೆ ಶ್ಯಾಮನ ಕಥೆ ತುಂಬಾನೆ ಡಿಫ್ರೆಂಟ್​.. ಇದು ಒಂದು ದಿಟ್ಟ ಹೆಣ್ಣು ಮಗಳ ಸುತ್ತ ಹೆಣೆಯುವ ಕಥೆಯಾಗಿದೆ. ಈ ಧಾರಾವಾಹಿಯ ಪ್ರೋಮೋ ರಿಲೀಸ್​ ಆಗಿದ್ದು ಸಖತ್​ ಸದ್ದು ಮಾಡಿತ್ತು.

blank

ಇದೀಗ ರಾಧೆ ಶ್ಯಾಮ ಧಾರಾವಾಹಿಯ ಟೈಟಲ್​ ಟ್ರ್ಯಾಕ್​ ರಿಲೀಸ್ ಆಗಿದೆ. ಈ ಹಾಡು ತುಂಬಾನೆ ಚೆನ್ನಾಗಿ ಮೂಡಿ ಬಂದಿದೆ. ಧಾರಾವಾಹಿಯ ಶೀರ್ಷಿಕೆ ನೋಡಿದ್ರೆ ಇದು ಪ್ರೇಮ ಕಥೆ ಎಂಬುವುದು ಅರ್ಥವಾಗತ್ತೆ. ಇದೀಗ ಟೈಟಲ್​ ಟ್ರ್ಯಾಕ್​ ಕೇಳಿದ್ರೆ ಇದು ಪಕ್ಕಾ ಒಂದು ಲವ್​ ಸ್ಟೋರಿ ಸೀರಿಯಲ್​ ಅನ್ನೊದು ಕನ್ಫರ್ಮ್​.

ಇನ್ನೂ ಮತ್ತೊಂದು ವಿಶೇಷ ಅಂದ್ರೆ ಕೃಷ್ಣ ಜನ್ಮಷ್ಟಮಿ ಪ್ರಯುಕ್ತ ಈ ಧಾರಾವಾಹಿ ಟೈಟಲ್​ ಟ್ರ್ಯಾಕ್​ನ ರಿಲೀಸ್​ ಮಾಡಿದ್ದಾರೆ. ಧಾರಾವಾಹಿಯಲ್ಲಿ ನಾಯಕಿ ಅಪ್ಪ ಅಮ್ಮನ ಮುದ್ದಿನ ಮಗಳು ಹಾಗೂ ಸರಿ ತಪ್ಪನ್ನು ಮುಖಕ್ಕೆ ಹೊಡಿದಾಗೆ ಹೇಳುವ ಹುಡುಗಿ. ಯಾವುದಕ್ಕೂ ಹೆದರದೆ ಮುನ್ನುಗುವ ಹೆಣ್ಣು ಎಂಬುವುದು ತಿಳಿಯತ್ತೆ.

ರಾಧೆ ಶ್ಯಾಮ ತಂಡ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದು.. ಸೆಪ್ಟೆಂಬರ್​ 6 ರಿಂದ ರಾಧೆ ಶ್ಯಾಮ ನಿಮ್ಮ ಮನೆಗೆ ಬರಲಿದ್ದಾರೆ. ಒಟ್ಟಿನಲ್ಲಿ ಹೊಸ ಕಥೆಯೊಂದಿಗೆ ನಿಮ್ಮನ್ನು ರಂಜಿಸಲು ಸಜ್ಜಾಗಿರುವ ರಾಧೆ ಶ್ಯಾಮ ಟೀಮ್​ಗೆ ನಮ್ಮ ಕಡೆಯಿಂದಲು ಆಲ್​ ದಿ ಬೆಸ್ಟ್.​

Source: newsfirstlive.com Source link