ಗಂಡನ ಮನೆ ಬಿಟ್ಟು ಹೋದ್ರಾ ಶಿಲ್ಪಾ ಶೆಟ್ಟಿ?

ಮುಂಬೈ: ಫಿಟ್ನೆಸ್ ಗುರು ಎಂದೇ ಬಾಲಿವುಡ್‍ನಲ್ಲಿ ಖ್ಯಾತರಾಗಿರುವ ಶಿಲ್ಪಾ ಶೆಟ್ಟಿ ತಮ್ಮ ಗಂಡ ರಾಜ್ ಕುಂದ್ರಾ ಅವರ ಮನೆಯನ್ನು ಬಿಟ್ಟು ಹೋಗಿದ್ದಾರೆ ಎಂಬ ಸುದ್ದಿ ಬಿಟೌನ್ ಅಂಗಳದಲ್ಲಿ ಹರಿದಾಡುತ್ತಿದೆ.

ಶಿಲ್ಪಾ ಪತಿ ಉದ್ಯೋಗಿ ರಾಜ್ ಕುಂದ್ರಾ ನೀಲಿ ಚಿತ್ರಗಳನ್ನು ನಿರ್ಮಿಸುತ್ತಿದ್ದರೂ ಎಂಬ ಆರೋಪದ ಅಡಿಯಲ್ಲಿ ಪೊಲೀಸರು ಜುಲೈ 19 ರಂದು ಅವರನ್ನು ಅರೆಸ್ಟ್ ಮಾಡಿದ್ದರು. ಅವರು ಈಗ ಜಾಮೀನು ಸಿಗದೆ ಹೆಣಗಾಡುತ್ತಿದ್ದಾರೆ. ಅವರ ಪತ್ನಿ ಶಿಲ್ಪಾ ಮಾನಸಿಕವಾಗಿ ಬಹಳ ಕುಗ್ಗಿ ಹೋಗಿದ್ದು, ಯಾವುದೇ ಕಾರ್ಯಕ್ರಮಗಳಿಗೂ ಅವರು ಭಾಗಿಯಾಗುತ್ತಿಲ್ಲ. ಈ ನಡುವೆ ಅವರು ತಮ್ಮ ಪತಿ ಕುಂದ್ರಾ ಅವರ ಮನೆ ಬಿಟ್ಟು ಬೇರೆ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.ಇದನ್ನೂ ಓದಿ:ಚೊಚ್ಚಲ ಬಾಲಿವುಡ್ ಸಿನಿಮಾ ಶೂಟಿಂಗ್ ಮುಗಿದ ಖುಷಿಯಲ್ಲಿ ಕೂಡಗಿನ ಕುವರಿ

ತಮ್ಮ ಪತಿಗೆ ಬಂದಿರುವ ಆರೋಪದಿಂದ ಶಿಲ್ಪಾ ತುಂಬಾ ಅಘಾತಕ್ಕೆ ಒಳಗಾಗಿದ್ದು, ಈ ಕುರಿತು ಅವರು ಯಾವ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲ. ಆದರೆ ಅವರ ಸ್ನೇಹಿತರು ಮತ್ತು ಸಂಬಂಧಿಕರು ಪ್ರತಿಕ್ರಿಯಿಸಿದ್ದು, ಶಿಲ್ಪಾ ತಮ್ಮ ಪತಿಯ ದುಡ್ಡಿನಲ್ಲಿ ಇಲ್ಲಿಯವರೆಗೂ ಬದುಕಿಲ್ಲ. ಅವರು ಸಹ ದುಡಿಯುತ್ತಿದ್ದಾರೆ. ತಮ್ಮ ಮಕ್ಕಳನ್ನು ನೋಡಿಕೊಳ್ಳುವ ಶಕ್ತಿ ಅವರಿಗೆ ಎಂದು ಹೇಳಿರುವ ಬಗ್ಗೆ ವರದಿಯಾಗಿದೆ.ಇದನ್ನೂ ಓದಿ:ಹಾಲಿವುಡ್ ಸಿನ್ಮಾದಲ್ಲಿ ನಟಿಸುವ ಜೊತೆಗೆ ನಿರ್ಮಾಣಕ್ಕೆ ಮುಂದಾದ ಪದ್ಮಾವತಿ

blank

ಹಿಂದಿ ಖಾಸಗಿ ಚಾನೆಲ್‍ನಲ್ಲಿ ತೀರ್ಪುಗಾರರಾಗಿ ಬರುತ್ತಿದ್ದ ಇವರು ಈ ಪ್ರಕರಣದ ನಂತರ 3 ವಾರ ಶೋನಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ಮತ್ತೆ ಶೋಗೆ ಬರುತ್ತಿದ್ದು, ಇವರ ದೃಢ ಮನಸ್ಥಿತಿಯನ್ನು ಅಭಿಮಾನಿಗಳು ಮೆಚ್ಚಿದ್ದಾರೆ. ಆದರೆ ಮೂಲಗಳ ಪ್ರಕಾರ ಅವರಿಗೆ ಬರುತ್ತಿದ್ದ ಆಫರ್ ಗಳು ಕಡಿಮೆಯಾಗುತ್ತಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಅವರು ಅನೇಕ ಜಾಹೀರಾತುಗಳಿಗೆ ರಾಯಭಾರಿ ಆಗಿದ್ದರು. ಈಗ ಅವರಿಗೆ ಬರುತ್ತಿರುವ ಅವಕಾಶಗಳು ಕಡಿಮೆಯಾಗುತ್ತಿದೆ ಎಂದು ತಿಳಿದುಬಂದಿದೆ.ಇದನ್ನೂ ಓದಿ:ವಿಚ್ಛೇದನಕ್ಕೆ ಮುಂದಾದ್ರಾ ಸಮಂತಾ, ನಾಗಚೈತನ್ಯ?

Source: publictv.in Source link