ಇನ್​​​ಸ್ಟಾಗೆ ಎಂಟ್ರಿ ಕೊಟ್ಟ ನಟಿ ಜೋತಿಕಾ -2 ಗಂಟೆಯಲ್ಲಿ ಮಿಲಿಯನ್​ ಫಾಲೋವರ್ಸ್​

ಇನ್​​​ಸ್ಟಾಗೆ ಎಂಟ್ರಿ ಕೊಟ್ಟ ನಟಿ ಜೋತಿಕಾ -2 ಗಂಟೆಯಲ್ಲಿ ಮಿಲಿಯನ್​ ಫಾಲೋವರ್ಸ್​

ಎವರ್​ಗ್ರೀನ್​ ಕಾಲಿವುಡ್​ ನಟಿ ಜ್ಯೋತಿಕಾ ಇಂದು ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಟ್ಟಿದ್ದು, ಇನ್​​​ಸ್ಟಾ ಖಾತೆ ಆರಂಭ ಮಾಡಿದ ಕೆಲವೇ ಗಂಟೆಯಲ್ಲಿ ಒಂದು ಮಿಲಿಯನ್​ ಫಾಲೋವರ್ಸ್​​​ಗಳನ್ನು ಪಡೆಯುವುದರೊಂದಿಗೆ ದಾಖಲೆ ನಿರ್ಮಿಸಿದ್ದಾರೆ.

ಸ್ಟಾರ್ ಹೀರೋ ಸೂರ್ಯ ಅವರನ್ನು ಮದುವೆಯಾಗಿರುವ ಜ್ಯೋತಿಕಾ ಸಾಮಾಜಿಕ ಜಾಲತಾಣದಿಂದ ಇಷ್ಟು ದಿನ ದೂರವೇ ಉಳಿದ್ದರು. ಆದರೆ ತಮ್ಮ ನೆಚ್ಚಿನ ಸಾಮಾಜಿಕ ಜಾಲತಾಣದಲ್ಲಿ ಇಲ್ಲದ ಕಾರಣ ಅವರ ಕುರಿತ ಅಪ್​​ಡೇಟ್ಸ್​ ಪಡೆಯಲು ಅಭಿಮಾನಿಗಳು ಸಾಕಷ್ಟು ಕಾಯುವ ಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ಅವರು ಇನ್​​ಸ್ಟಾ ಖಾತೆ ತೆರೆದು ಶೇರ್​ ಮಾಡಿದ ಮೊದಲ ಪೋಸ್ಟ್​​ಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.

blank

ತಮ್ಮ ಮೊದಲ ಪೋಸ್ಟ್​​ನಲ್ಲಿ ಜಮ್ಮು ಕಾಶ್ಮೀರಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದ ಫೋಟೋಗಳನ್ನು ಹಂಚಿಕೊಂಡು ಶುಭಾರಂಭ ಮಾಡಿದ್ದಾರೆ. ‘ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ನನ್ನ ಲಾಕ್​​ಡೌನ್​​ ಡೈರಿಯಿಂದ ಕೆಲ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಸ್ವಾತಂತ್ರ್ಯ ದಿನಾಚರಣೆಯಂದು ಹಿಮಾಲಯ ಪರ್ವತಗಳಲ್ಲಿ, ಸುಂದರವಾದ ಕಾಶ್ಮೀರ್​ ಗ್ರೇಟ್​ ಲೆಕ್ಸ್​​ ನಲ್ಲಿ 70 ಕಿಮೀ ಟ್ರೆಕ್​, ಅದ್ಭುತ ಸಹಾಸ ತಂಡದೊಂದಿಗೆ ಕೈಗೊಂಡಿದ್ದು, ರಾಹುಲ್​, ಸಚಿನ್​, ರೌಲ್​, ಅಶ್ವಿನ್​, ಮುಸ್ತಾಕ್​​ ಎನ್​ ರಿಯಾಜ್​ ಭಾಯ್​​ ಅವರಿಗೆ ಧನ್ಯವಾದ.. ಭಾರತ ದೇಶದ ಸುಂದರವಾಗಿದೆ.. ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ.

blank

ಜ್ಯೋತಿಕ ಪೋಸ್ಟ್​ ಮಾಡಿದ 2 ಗಂಟೆಯಲ್ಲೇ 1.3 ಮಿಲಿಯನ್​​ ಫಾಲೋವರ್ಸ್​​ ಪಡೆದುಕೊಂಡಿದ್ದು, 447,045 ಲೈಕ್​​ಗಳನ್ನು ಇದುವರೆಗೂ ಮೊದಲ ಪೋಸ್ಟ್​​ಗೆ ಪಡೆದುಕೊಂಡಿದ್ದಾರೆ. ಇತ್ತ ಪತ್ನಿಗೆ ಇನ್​​​ಸ್ಟಾದಲ್ಲಿ ಸ್ವಾಗತ ಕೋರಿರುವ ನಟ ಸೂರ್ಯ, ನಿನ್ನನ್ನು ಇನ್​​ಸ್ಟಾದಲ್ಲಿ ನೋಡಿದಕ್ಕೆ ಥ್ರಿಲ್​ ಆಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

 

View this post on Instagram

 

A post shared by Jyotika (@jyotika)

Source: newsfirstlive.com Source link