ಟೋಕಿಯೊ ಪ್ಯಾರಾಲಿಂಪಿಕ್ಸ್- ಹೈಜಂಪ್‍ನಲ್ಲಿ ಬೆಳ್ಳಿ ಗೆದ್ದ ತಂಗವೇಲು, ಕಂಚು ಶರದ್ ಕುಮಾರ್‌ಗೆ

ಟೋಕಿಯೊ: ಟೋಕಿಯೊ ಪ್ಯಾರಾಲಿಂಪಿಕ್ಸ್​ನ ಎತ್ತರ ಜಿಗಿತ ವಿಭಾಗದಲ್ಲಿ ಮರಿಯಪ್ಪನ್ ತಂಗವೇಲು ಬೆಳ್ಳಿ ಪದಕ ಮತ್ತು ಶರದ್ ಕುಮಾರ್ ಕಂಚಿನ ಪದಕ ಗೆದ್ದಿದ್ದಾರೆ.

ಈ ಮೂಲಕ ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 10 ಕ್ಕೆ ಏರಿದೆ. ಹೈ ಜಂಪ್ ಟಿ 63 ಈವೆಂಟ್‍ನಲ್ಲಿ ತಂಗವೇಲು ದ್ವಿತೀಯ ಸ್ಥಾನ ಅಲಂಕರಿಸುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ರಿಯೋ ಪ್ಯಾರಾಲಿಂಪಿಕ್ಸ್ ಬಳಿಕ ಇದು ತಂಗವೇಲು ಅವರ ಎರಡನೇ ಪದಕ ಎಂಬುದು ವಿಶೇಷವಾಗಿದೆ. ಇದನ್ನೂ ಓದಿ: ಪ್ಯಾರಾಲಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ- ಜಾವೆಲಿನ್ ಎಸೆದು ಚಿನ್ನ ಪಡೆದ ಸುಮಿತ್

ಮರಿಯಪ್ಪನ್ ಮತ್ತು ಶರದ್ ಇಬ್ಬರೂ ತಮ್ಮ ಮೊದಲ ಪ್ರಯತ್ನದಲ್ಲಿ 1.73 ಮೀ ಮತ್ತು 1.77 ಮೀ ಯಶಸ್ವಿಯಾಗಿ ಜಿಗಿದಿದ್ದರು. ಈ ವೇಳೆ ಶರದ್ ಕುಮಾರ್ ಮುಂಚೂಣಿಯಲ್ಲಿದ್ದರು. ಆದಾಗ್ಯೂ, 1.86 ಮೀ ನಲ್ಲಿ ಮೂರು ಪ್ರಯತ್ನಗಳ ನಂತರವೂ ಶರದ್‍ಗೆ ಯಶಸ್ವಿಯಾಗಿ ಜಂಪ್ ಮಾಡಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಕಂಚಿನ ಪದಕದೊಂದಿಗೆ ಚಿನ್ನದ ರೇಸ್ ನಿಂದ ಹೊರಗುಳಿದರು.

ನಂತರ, ಅಮೆರಿಕದ ಗ್ರೇವ್ ಸ್ಯಾಮ್ ಮತ್ತು ಮರಿಯಪ್ಪನ್ ಮಾತ್ರ ಸ್ಪರ್ಧೆಯಲ್ಲಿದ್ದರು. ಇಬ್ಬರೂ 1.86 ಅಂಕದಲ್ಲಿ ಯಶಸ್ವಿ ಜಿಗಿತ ಪೂರೈಸಿದ್ದರು. ನಂತರ ನಡೆದ ಮೂರು ಪ್ರಯತ್ನಗಳಲ್ಲಿ ಮರಿಯಪ್ಪನ್ ವಿಫಲರಾದರು. ಮತ್ತೊಂದೆಡೆ, ಗ್ರೇವ್ ಯಶಸ್ವಿ ಜಿಗಿತದೊಂದಿಗೆ ಚಿನ್ನದ ಪದಕ ಗೆದ್ದುಕೊಂಡರು.

ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತ ಪದಕಗಳ ಭೇಟೆಯನ್ನು ಮುಂದುವರೆಸಿದೆ. ಈ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತ 10 ಪದಕ ಪಡೆದುಕೊಂಡಿದ್ದು, 2 ಚಿನ್ನ, 5 ಬೆಳ್ಳಿ, ಮೂರು ಕಂಚನ್ನು ಭಾರತ ತನ್ನದಾಗಿಸಿಕೊಂಡಿದೆ.

Source: publictv.in Source link