ಸತ್ಯ ಧಾರಾವಾಹಿಗೆ ಹೊಸ ಪಾತ್ರ ಎಂಟ್ರಿ..!

ಸತ್ಯ ಧಾರಾವಾಹಿಗೆ ಹೊಸ ಪಾತ್ರ ಎಂಟ್ರಿ..!

ಸತ್ಯ ಅಂದ್ರೆ ರೌಡಿ.. ತಪ್ಪು ನಡೆದ್ರೆ ಸತ್ಯ ಪಟ್ ಅಂತಾ ಹಾಜರ್​ ಆಗ್ತಾಳೆ.. ಸತ್ಯಳನ್ನಾ ನೋಡಿದ್ರೆ ಇಡಿ ಊರೆ ಗಡಗಡ ನಡುಗತ್ತೆ.. ಇಷ್ಟೆಲ್ಲಾ ಹವಾ ಕ್ರಿಯೇಟ್​ ಮಾಡಿರುವ ಈ ಲೇಡಿ ಬಾಂಡ್​ ಸದ್ಯ ಅಮುಲ್​ ಬೇಬಿ ಜೊತೆ ಲವ್​ನಲ್ಲಿ ಬಿದ್ದಿದ್ದಾಳೆ. ಮಾತ್ರವಲ್ಲಾ ತಾನು ಲವ್​ ಮಾಡ್ತಾಯಿದಿನಿ ಅಂತಾ ಕೂಡ ಒಪ್ಪಿಕೊಂಡಿದ್ದಾಳೆ.

ಇದೀಗ ಧಾರಾವಾಹಿಯಲ್ಲಿ ಸತ್ಯಾ ಹಾಗೂ ಅಮುಲ್​ ಬೇಬಿಯ ಲವ್​ ಟ್ರಾಕ್​ ನಡೀತಾಯಿದೆ.. ಇದರಿಂದಾಗಿ ಪ್ರೇಕ್ಷಕರು ಕೂಡ ಫುಲ್​ ಕ್ಯೂರಿಯೋಸಿಟಿಯಿಂದ ಧಾರಾವಾಹಿಯನ್ನ ನೋಡ್ತಾಯಿದ್ದಾರೆ.

ಈ ಮಧ್ಯ ಸತ್ಯ ಧಾರಾವಾಹಿಯ ನಿರ್ದೇಶಕಿ ಸ್ವಪ್ನ ಕೃಷ್ಣ ಜನರಿಗೆ ಒಂದು ಬ್ರೇಕಿಂಗ್​ ನ್ಯೂಸ್​ ಕೊಟ್ಟಿದ್ದಾರೆ.. ಅದೇನಪ್ಪಾ ಅಂದ್ರೆ ಈ ಧಾರಾವಾಹಿಗೆ ಹೊಸ ಪಾತ್ರ ಒಂದು ಎಂಟ್ರಿ ಆಗ್ತಾಯಿದೆ ಅಂತಾ. ಮತ್ತೆ ಹೊಸ ಕ್ಯಾರೆಕ್ಟರ್​ ಆ? ಯಾರಿರಬಹುದು? ಆ ಪಾತ್ರ ಯಾರ್​ ಮಾಡ್ತಾರೆ ಅಂತಾ ಸಾಕಷ್ಟು ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಸದ್ಯ ಓಡ್ತಾಯಿರ್ಬಹುದು.. ಆ ಎಲ್ಲಾ ಪ್ರಶ್ನೇಗಳಿಗೆ ನಾವು ಉತ್ತರ ನೀಡ್ತೀವಿ.

blank

ಹೌದು, ಸತ್ಯ ಧಾರಾವಾಹಿಯಲ್ಲಿ ನಟ ಸ್ಕಂದ ಅಶೋಕ್​ ಒಂದು ವಿಭಿನ್ನ ಪಾತ್ರದ ಮೂಲಕ ನಿಮ್ಮನ್ನು ರಂಜಿಸಲು ಸಜ್ಜಾಗಿದ್ದಾರೆ. ಅದೊಂದು ಪ್ರಮುಖ ಹಾಗೂ ವಿಭಿನ್ನ ಪಾತ್ರವಾಗಿದ್ದು, ಧಾರಾವಾಹಿಯಲ್ಲಿ ಒಂದು ದೊಡ್ಡ ಟ್ವಿಸ್ಟ್​ಗೆ ಎಡೆ ಮಾಡಿಕೊಡಲಿದೆ. ಇನ್ನೂ ಸತ್ಯ ಟೀಮ್​ ಜೊತೆ ಸ್ಕಂದ ಅವರ ಶೂಟಿಂಗ್ ಶುರುವಾಗಿದ್ದು ಇನ್ನೆನೂ ಕೆಲವು ದಿನಗಳಲ್ಲಿ ಸ್ಕಂದ್​ ಆ ಪಾತ್ರದ ಮೂಲಕ ನಿಮ್ಮನ್ನು ರಂಜಿಸಲಿದ್ದಾರೆ. ಆದ್ರೆ ಸ್ಕಂದ ಪಾತ್ರ ಕೇವಲ ಒಂದಿಷ್ಟು ಎಪಿಸೋಡ್​ಗಳಲ್ಲಿ ಮಾತ್ರ ನೋಡಬಹುದು.. ಯಾಕಂದ್ರೆ ಇದೊಂದು ಗೆಸ್ಟ್​ ರೋಲ್​.

ಸ್ಕಂದ್​ ಸದ್ಯ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗ್ತಾಯಿರುವ ಸರಸು ಧಾರಾವಾಹಿ ಮೂಲಕ ಜನರನ್ನು ಎಂಟರ್​ಟೈನ್​ ಮಾಡ್ತಾಯಿದ್ದಾರೆ.. ಪ್ರೇಕ್ಷಕರು ಕೂಡಾ ಸ್ಕಂದ ಹಾಗೂ ಸುಪ್ರಿತಾ ಜೋಡಿಯನ್ನ ಮೆಚ್ಚಿಕೊಂಡಿದ್ದಾರೆ. ಈ ಮುಂಚೆ ಸ್ಕಂದ ರಾಧಾ ರಮಣ ಧಾರಾವಾಹಿಯಲ್ಲಿ ಬ್ಯುಸ್​ನೆಸ್​ ಮ್ಯಾನ್​ ಆಗಿ ಮಿಂಚಿದ್ರು. ಜನರು ಆ ಪಾತ್ರದಿಂದಲೆ ಸ್ಕಂದ ಅವರನ್ನು ಈಗಲು ಗುರುತಿಸುತ್ತಾರೆ. ಅಷ್ಟರ ಮಟ್ಟಿಗೆ ಹೆಸರು ಮಾಡಿಕೊಟ್ಟಿದೆ ರಾಧಾ ರಮಣ ಧಾರಾವಾಹಿ. ಒಟ್ನಲ್ಲಿ ಸ್ಕಂದ ಅವರ ಹೊಸ ಪ್ರಾಜೆಕ್ಟ್​ಗೆ ಆಲ್​ ದಿ ಬೆಸ್ಟ್​.

Source: newsfirstlive.com Source link