ದೋಹಾದಲ್ಲಿ ಭಾರತ-ತಾಲಿಬಾನಿಗಳ ಮೊದಲ ಔಪಚಾರಿಕ ಮಾತುಕತೆ

– ರಾಯಭಾರಿಯನ್ನ ಭೇಟಿಯಾದ ತಾಲಿಬಾನಿ ನಾಯಕ

ದೋಹಾ: ಭಾರತ ಮತ್ತು ತಾಲಿಬಾನಿಗಳ ನಡುವಿನ ಮೊದಲ ಔಪಚಾರಿಕ ಮಾತುಕತೆ ಇಂದು ದೋಹಾದಲ್ಲಿ ನಡೆದಿದೆ. ಕತಾರ್ ನಲ್ಲಿ ಭಾರತದ ರಾಯಭಾರಿ ದೀಪಕ್ ಮಿತ್ತಲ್ ಅವರನ್ನು ತಾಲಿಬಾನಿ ನಾಯಕ ಶೇರ್ ಮೊಹಮ್ಮದ್ ಅಬ್ಬಾಸ್ ಭೇಟಿಯಾಗಿರುವ ಬಗ್ಗೆ ಸರ್ಕಾರ ಹೇಳಿದೆ.

ಅಬ್ಬಾಸ್ ತಾಲಿಬಾನಿಗಳ ರಾಜಕೀಯ ವಿಭಾಗದ ಮುಖ್ಯಸ್ಥನಾಗಿದ್ದು, ಭಾರತದ ಜೊತೆಗೆ ಹಳೆಯ ಸ್ನೇಹ ಹೊಂದಿರುವ ನಾಯಕ ಎನ್ನಲಾಗಿದೆ. ಇದೀಗ ದೀಪಕ್ ಮಿತ್ತಲ್ ಮತ್ತು ಅಬ್ಬಾಸ್ ಭೇಟಿ ಹಲವು ಚರ್ಚೆಗಳಿಗೆ ಮುನ್ನಡಿಯಾಗಿದೆ. 1980ರಲ್ಲಿ ಅಬ್ಬಾಸ್ ಭಾರತದಲ್ಲಿದ್ದು, ಡೆಹರಾಡೂನ್ ನಲ್ಲಿರುವ ಮಿಲಿಟರಿ ಅಕಾಡೆಮಿಲ್ಲಿ ತರಬೇತಿ ಪಡೆದುಕೊಂಡಿದ್ದನು. ನಂತರ ಅಫ್ಘಾನಿಸ್ತಾನ ಸೇನೆ ಸಹ ಸೇರ್ಪಡೆಯಾಗಿದ್ದನು. ಅಫ್ಘಾನಿಸ್ತಾನ ತೊರೆದ ಬಳಿಕ ತಾಲಿಬಾನಿ ಗ್ಯಾಂಗ್ ಸೇರಿಕೊಂಡಿರುವ ಬಗ್ಗೆ ವರದಿಯಾಗಿದೆ.

ಭೇಟಿಯ ವೇಳೆ ದೀಪಕ್ ಮಿತ್ತಲ್, ಭಾರತ ಪ್ರದೇಶದಲ್ಲಿ ಅಫ್ಘಾನಿಸ್ತಾನ ಉಗ್ರ ಚುಟುವಟಿಕೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಭಾರತದ ಆತಂಕ ನಮಗೆ ಗೊತ್ತಾಗುತ್ತದೆ. ತಾಲಿಬಾನ್ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದು ಅಬ್ಬಾಸ್ ಭರವಸೆ ನೀಡಿರುವ ಬಗ್ಗೆ ಹೇಳಲಾಗುತ್ತಿದೆ. ಇದನ್ನೂ ಓದಿ: ಕಾಬೂಲ್ ತೊರೆಯುವ ಮುನ್ನ 73 ಏರ್​​ಕ್ರಾಫ್ಟ್ ನಿಷ್ಕ್ರಿಯಗೊಳಿಸಿದ ಅಮೆರಿಕ ಸೈನಿಕರು

ಮಾತುಕತೆಯಲ್ಲಿ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ದೇಶಕ್ಕೆ ಹಿಂದಿರುಗಿಸುವ ಕುರಿತು ಸುದೀರ್ಘ ಚರ್ಚೆ ನಡೆದಿದೆ. ಇದೇ ವೇಳೆ ಅಫ್ಘಾನಿಸ್ತಾನದಲ್ಲಿರುವ ಅಲ್ಪಸಂಖ್ಯಾತರು ಭಾರತ ಆಗಮಿಸಲು ಇಚ್ಛಿಸಿದ್ರೆ ನಾವು ಬರಮಾಡಿಕೊಳ್ಳಲು ಸಿದ್ಧರಿದ್ದೇವೆ. ಭಾರತದ ಭೌಗೋಳಿಕ ಪ್ರದೇಶದಲ್ಲಿ ಯಾವುದೇ ಭಯೋತ್ಪಾದಕ ಚಟುವಟಿಕೆ ನಡೆಸಕೂಡದು ಎಂಬ ಎಚ್ಚರಿಕೆಯನ್ನು ಮಿತ್ತಲ್ ನೀಡಿದ್ದಾರೆ. ಇದನ್ನೂ ಓದಿ: ಕಾರಿನಿಂದ ರಾಕೆಟ್ ಉಡಾಯಿಸ್ತಿದ್ದ ಉಗ್ರರು- ಫೋಟೋಗಳು ಔಟ್

Source: publictv.in Source link