BREAKING: ಸೆಪ್ಟೆಂಬರ್ 6 ರಿಂದ 6-8ನೇ ತರಗತಿಗಳು ಪುನರಾರಂಭ; ಕಂಡೀಷನ್ ಅಪ್ಲೇ

BREAKING: ಸೆಪ್ಟೆಂಬರ್ 6 ರಿಂದ 6-8ನೇ ತರಗತಿಗಳು ಪುನರಾರಂಭ; ಕಂಡೀಷನ್ ಅಪ್ಲೇ

ಬೆಂಗಳೂರು: 6-8ನೇ ತರಗತಿಯನ್ನ ಸೆಪ್ಟೆಂಬರ್ 6 ರಿಂದ ಪುನಾರಂಭಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.

ಈ ಬಗ್ಗೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಶೇಕಡಾ 20 ಗಿಂ ಕಡಿಮೆ ಇರುವ ತಾಲೂಕು, ವಲಯಗಳಲ್ಲಿ (ಕೇರಳ ರಾಜ್ಯದೊಡನೆ ಗಡಿ ಹಂಚಿಕೊಂಡಿರುವ ತಾಲೂಕುಗಳನ್ನ ಹೊರತುಪಡಿಸಿ) 9 ಮತ್ತು 10ನೇ ತರಗತಿಗಳ ಜೊತೆಗೆ 6 ರಿಂದ 8ನೇ ತರಗತಿಗಳನ್ನ ಪೂರ್ಣ ಪ್ರಮಾಣದಲ್ಲಿ ತರಗತಿ ಆರಂಭಿಸಲು ನಿರ್ಧರಿಸಲಾಗಿದೆ ಅಂತಾ ತಿಳಿಸಿದೆ.

ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಭೌತಿಕವಾಗಿ ಪ್ರಾರಂಭಿಸಲು ಹಾಗೂ 1 ರಿಂದ 5ನೇ ತರಗತಿಗಳನ್ನು ಪ್ರಾರಂಭಿಸುವ ಬಗ್ಗೆ ಪರಿಸ್ಥಿತಿ ಅವಲೋಕಿಸಿ ನಂತರ ನಿರ್ಧರಿಸಲಾಗುತ್ತದೆ ಅಂತಲೂ ರಾಜ್ಯ ಸರ್ಕಾರ ತಿಳಿಸಿದೆ.

Source: newsfirstlive.com Source link