ತಮಿಳುನಾಡಿಗೆ 7 ಟಿಎಂಸಿ ಸೇರಿ ಬಾಕಿ ಉಳಿಸಿಕೊಂಡ ನೀರು ಬಿಡುಗಡೆಗೆ ಸೂಚನೆ

ತಮಿಳುನಾಡಿಗೆ 7 ಟಿಎಂಸಿ ಸೇರಿ ಬಾಕಿ ಉಳಿಸಿಕೊಂಡ ನೀರು ಬಿಡುಗಡೆಗೆ ಸೂಚನೆ

ಬೆಂಗಳೂರು: ತಮಿಳುನಾಡಿಗೆ ಸೆಪ್ಟೆಂಬರ್​ನಲ್ಲಿ 6 ರಿಂದ 8 ಟಿಎಂಸಿ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ ಹಲ್ದರ್ ಕರ್ನಾಟಕಕ್ಕೆ ಸೂಚನೆ ನೀಡಿದ್ದಾರೆ.

ದೆಹಲಿಯಲ್ಲಿ ಇಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಿತು. ಸದ್ಯ ಕಾವೇರಿ ನೀರಾವರಿ ಭಾಗದಲ್ಲಿ ನಿರೀಕ್ಷೆಯಷ್ಟು ಮಳೆಯಾಗಿಲ್ಲ. ಜಲಾಶಯವೂ ಪೂರ್ತಿಯಾಗಿ ತುಂಬಿಲ್ಲ. ಹಾಗಾಗಿ ಸದ್ಯ ಪೂರ್ತಿಯಾಗಿ ನೀರನ್ನ ಬಿಡೋದು ಕಷ್ಟವಾಗಿದೆ ಅಂತಾ ಕರ್ನಾಟಕದ ಅಧಿಕಾರಿಗಳು ಮಾಹಿತಿ ನೀಡಿದರು.

ಅಧಿಕಾರಿಗಳು ನೀಡಿರೋ ಮಾಹಿತಿಯ ಆಧಾರದ ಮೇಲೆ ಸದ್ಯ 6 ರಿಂದ 7 ಟಿಎಂಸಿ ನೀರು ಬಿಡಬೇಕು. ಮುಂದಿನ ದಿನಗಳಲ್ಲಿ ನೀರಿನ ಒಳಹರಿವು ನೋಡಿಕೊಂಡು ನೀರು ಬಿಡಲು ನಿರ್ದೇಶನ ನೀಡಲಾಗಿದೆ. ಜೊತೆಗೆ ಜೂನ್, ಜುಲೈ, ಆಗಸ್ಟ್​ನಲ್ಲಿ ಬಾಕಿ ಉಳಿಸಿಕೊಂಡ 30.6 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಸೂಚನೆ ನೀಡಲಾಗಿದೆ.

ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ ಹಲ್ದರ್.. ಇಂದು 13ನೇ ಸಭೆ ನಡೆಸಲಾಯಿತು, ಕಾವೇರಿ ಜಲಾನಯನದ ರಾಜ್ಯಗಳು ಭಾಗಿಯಾಗಿದ್ದವು. ಸೌಹಾರ್ದಯುತ ಸಭೆ ನಡೆದಿದೆ. ನೀರು ಹಂಚಿಕೆಯ ಬಗ್ಗೆ ಚರ್ಚೆ ಮಾಡಲಾಗಿದೆ.

57 ಟಿಎಂಸಿ ನೀರು ಬಿಟ್ಟ ಕರ್ನಾಟಕ 

ತಮಿಳುನಾಡು ನೀರು ಬಿಡುಗಡೆಗೆ ಮನವಿ ಮಾಡಿದೆ. ಕರ್ನಾಟಕ ಸೆಪ್ಟೆಂಬರ್​ನಲ್ಲಿ ನೀರು ಬಿಡಲು ಒಪ್ಪಿಕೊಂಡಿದೆ. 86 ಟಿಎಂಸಿ ಆಗಸ್ಟ್ ಅಂತ್ಯದವರೆಗೂ ನೀಡಬೇಕು. 57 ಟಿಎಂಸಿ ಈವರೆಗೂ ನೀಡಿದೆ. ಬಾಕಿ ನೀರು ಬಿಡುಗಡೆ ಮಾಡುವಂತೆ ತಮಿಳುನಾಡು ಮನವಿ ಮಾಡಿದೆ. ಹೀಗಾಗಿ ಬಾಕಿ ನೀರು ಹರಿಸಲು ಕರ್ನಾಟಕಕ್ಕೆ ಸೂಚಿಸಿದ್ದೇನೆ. ಉತ್ತಮ ಮಳೆಯಾದರೆ ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ನೀರು ಹರಿಸಲು ಸೂಚಿಸಿದೆ. ಉತ್ತಮ ಮಳೆಯಾಗುವ ಸಾಧ್ಯತೆಗಳಿದೆ ಎಂದರು. ಸೆಪ್ಟೆಂಬರ್ ತಿಂಗಳಲ್ಲಿ 6 ರಿಂದ 7 ಟಿಎಂಸಿ ಬಿಡುವಂತೆ ಸೂಚನೆ ನೀಡಲಾಗಿದೆ ಎಂದರು.

Source: newsfirstlive.com Source link