‘ವೇದಿಕೆ ಮೇಲೆಯೇ ಶಿಸ್ತು ಇರಬೇಕು’ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಶಿವಕುಮಾರ್​ ಆವಾಜ್

‘ವೇದಿಕೆ ಮೇಲೆಯೇ ಶಿಸ್ತು ಇರಬೇಕು’ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಶಿವಕುಮಾರ್​ ಆವಾಜ್

ಬೆಂಗಳೂರು: ಕಾಂಗ್ರೆಸ್ ಭವನದಲ್ಲಿ ನಡೆದ NSUI ನೂತನ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ ಪದಗ್ರಹಣ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಾರ್ಯಕರ್ತರಿಗೆ ಆವಾಜ್ ಹಾಕಿದ ಘಟನೆ ನಡೆದಿದೆ. ಪದಗ್ರಹಣದ ನಂತರ ಎಲ್ಲರೂ ಪ್ರಮಾಣ ವಚನ ಸ್ವೀಕರಿಸಬೇಕು ಎಂದಾಗಲೂ ಕುಳಿತೇ ಇದ್ದ ಕಾರ್ಯಕರ್ತರಿಗೆ ಡಿ.ಕೆ ಶಿವಕುಮಾರ್ ಆವಾಜ್ ಹಾಕಿದ್ದಾರೆ.

ಪ್ರಮಾಣ ತಗೊಳ್ಳಿ ಅಂತ ಹೇಳಿದ್ರೂ ಸುಮ್ಮನೇ ಕುಳಿತೇ ಇದ್ದೀರಾ? ಮೊದ್ಲು ಎದ್ದು ನಿಂತ್ಕೊಳ್ಳಿ. ಡಿಸಿಪ್ಲೀನ್ ಇರ್ಬೇಕು ಡಿಸಿಪ್ಲೀನ್. ಎದ್ದು ನಿಂತು ಪ್ರಮಾಣ ತಗೊಳ್ಳಿ ಎಲ್ರೂ ಎಂದು ಡಿ.ಕೆ ಶಿವಕುಮಾರ್ ಏರು ಧ್ವನಿಯಲ್ಲಿ ಕೂಗಾಡಿದರು. ಆಗ ಡಿ.ಕೆ ಶಿವಕುಮಾರ್ ಆವಾಜ್ ನಂತರ NSUI ಕಾರ್ಯಕರ್ತರು ಎದ್ದು ಪ್ರಮಾಣ ವಚನ ಸ್ವೀಕರಿಸಿದರು.

ಇದನ್ನೂ ಓದಿ: 2021-22ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ. 20.1ರಷ್ಟು ಪ್ರಗತಿ

Source: newsfirstlive.com Source link