ಕಾಲ ಕೂಡಿ ಬಂದ್ರೆ ನಾನು ಸಿಎಂ ಆಗೋದನ್ನ ಯಾರು ತಪ್ಪಿಸಕ್ಕಾಗಲ್ಲ; ಬಸನಗೌಡ ​ಯತ್ನಾಳ್ ಹೀಗಂದಿದ್ಯಾಕೆ?

ಕಾಲ ಕೂಡಿ ಬಂದ್ರೆ ನಾನು ಸಿಎಂ ಆಗೋದನ್ನ ಯಾರು ತಪ್ಪಿಸಕ್ಕಾಗಲ್ಲ; ಬಸನಗೌಡ ​ಯತ್ನಾಳ್ ಹೀಗಂದಿದ್ಯಾಕೆ?

ವಿಜಯಪುರ: ಕಾಲ ಕೂಡಿ ಬಂದರೆ ನಾನು ಸಿಎಂ ಆಗೋದನ್ನ ಯಾರು ತಪ್ಪಿಸೋಕ್ಕಾಗಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್ ಖಡಕ್​​ ಆಗಿ ಹೇಳಿದ್ದಾರೆ.

ಈ ಸಂಬಂಧ ಮಾತಾಡಿದ ಅವರು, ನನ್ನ ಹಣೆ ಬರಹದಲ್ಲಿ ಸಿಎಂ ಆಗಬೇಕು ಎಂದು ಬರೆದಿದ್ರೆ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಕಾಲ ಯಾರನ್ನು ಕೇಳಿ ಬರೋದಿಲ್ಲ. ಒಂದು ವೇಳೆ ಬಂದರೆ ಯಾರಿಂದಲೂ ತಡೆಯೋಕೆ ಆಗಲ್ಲ. ಸಿಎಂ ರೇಸಲ್ಲಿ ಬಸವರಾಜ್​​ ಬೊಮ್ಮಾಯಿ ಹೆಸರೇ ಇರಲಿಲ್ಲ, ಈಗ ಮುಖ್ಯಮಂತ್ರಿ ಆಗಿಲ್ಲವೇ. ಕಾಲ ಬದಲಾಗುತ್ತೆ, ಒಳ್ಳೆ ಕಾಲ ಬರುತ್ತೇ ಎಂದು ಕಾಯೋದರಲ್ಲಿ ತಪ್ಪೇನಿಲ್ಲ ಎಂದರು.

ಈ ಬಾರಿ ವಿಜಯಪುರಕ್ಕೆ ಅನ್ಯಾಯ ಆಗಲ್ಲ. ನಮ್ಮ ಹೈಕಮಾಂಡ್ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತೆ. ಜಿಲ್ಲೆಯಲ್ಲಿ ಮೂಲ ಬಿಜೆಪಿಗರು ಮಂತ್ರಿ ಆಗ್ತಾರೆ. ನ್ಯಾಯಯುತವಾಗಿ ವಿಜಯಪುರ ಜಿಲ್ಲೆಗೆ ಸಚಿವ ಸ್ಥಾನ ಕೊಡಬೇಕು. ಸಿಂದಗಿ ಉಪಚುನಾವಣೆಗೆ ಮೊದಲೇ ಮಂತ್ರಿ ಸ್ಥಾನ ಕೊಡಬೇಕು ಎಂದು ಸವಾಲ್​​ ಹಾಕಿದರು.

ಯಾರ ಉಪಕಾರಕ್ಕೂ ಸಚಿವ ಸ್ಥಾನ ಕೊಡ್ತಾ ಇಲ್ಲ. ಬಾಗಲಕೋಟೆ, ಶಿವಮೊಗ್ಗಕ್ಕೆ ಯಾಕೆ ಎರಡು ಸಚಿವ ಸ್ಥಾನ ಯಾಕೆ ಕೊಟ್ರೀ? ಕಲಬುರಗಿ, ಚಾಮರಾಜನಗರ, ಮೈಸೂರು, ಯಾದಗಿರಿಗೆ ಯಾಕೆ ಕೊಟ್ಟಿಲ್ಲ. ಇವರೇನು ಬಿಜೆಪಿಗೆ ವೋಟ್​​ ಹಾಕಿಲ್ವಾ? ನಾನು ಮಂತ್ರಿಯಾಗಬಾರದು ಎಂದು ಕೆಲವರಿಗೆ ಇದೆ ಎಂದು ಹೇಳಿದರು.

Source: newsfirstlive.com Source link