ಎಲ್ಲಿಗೋ ಹೊರಟಿದ್ದ ಸಿದ್ದರಾಮಯ್ಯ ದಿಢೀರ್ ರಾಷ್ಟ್ರ ಗೀತೆ ಕೇಳಿ ನಿಂತು ಗೌರವ ಸೂಚಿಸಿದರು

ಎಲ್ಲಿಗೋ ಹೊರಟಿದ್ದ ಸಿದ್ದರಾಮಯ್ಯ ದಿಢೀರ್ ರಾಷ್ಟ್ರ ಗೀತೆ ಕೇಳಿ ನಿಂತು ಗೌರವ ಸೂಚಿಸಿದರು

ಬೆಂಗಳೂರು: ಕಾಂಗ್ರೆಸ್ ಭವನದಲ್ಲಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (NSUI) ನೂತನ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ ಪದಗ್ರಹಣ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಕೊನೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೊರಡುವ ಸಂದರ್ಭದಲ್ಲಿ ರಾಷ್ಟ್ರ ಗೀತೆ ಶುರು ಮಾಡಲಾಯ್ತು.

ಇನ್ನು, ಎಲ್ಲಿಗೋ ಹೋಗಲು ಟೈಮ್ ಆದರೂ ಹೊರಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮಧ್ಯೆಯೇ ನಿಂತು ಮಾಜಿ ಸಿಎಂ ಸಿದ್ದರಾಮಯ್ಯ ರಾಷ್ಟ್ರ ಗೀತೆಯನ್ನು ಗೌರವಿಸಿದ್ದಾರೆ.

ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಮಾಜಿ ಸಿಎಂ ಸಿದ್ದರಾಮಯ್ಯ ಹೊರಡಲು ಸಿದ್ಧರಾದರು. ಒಂದಷ್ಟು ದೂರ ವೇದಿಕೆಯಿಂದ ಕೆಳಗಿಳಿದು ನಡೆದುಕೊಂಡು ಹೋಗಿದ್ದರು. ಈ ವೇಳೆ ಕಾರ್ಯಕ್ರಮದ ಕೊನೆಯ ಘಟ್ಟದಲ್ಲಿ ರಾಷ್ಟ್ರ ಗೀತೆ ಹಾಡಲು ವಿದ್ಯಾರ್ಥಿಗಳು ಶುರು ಮಾಡಿದಾಗ ಮಧ್ಯದಲ್ಲೇ ನಿಂತು ಸಿದ್ದರಾಮಯ್ಯ ಗೌರವಿಸಿದರು. ಸಿದ್ದರಾಮಯ್ಯನವರ ಈ ಕಾರ್ಯಕ್ಕೆ ಕಾರ್ಯಕರ್ತರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಎದುರೇ DKS ಪರ ಘೋಷಣೆ- ಪಕ್ಷದಿಂದಲೇ ತೆಗೆದುಹಾಕ್ತೀನಿ ಅಂತ ಎಚ್ಚರಿಕೆ ಕೊಟ್ಟ ಶಿವಕುಮಾರ್

Source: newsfirstlive.com Source link