‘BODY HEAT’ ಅಗಿಡಲು ಈ ಕೆಲಸ ಮಾಡಿ’ ಎಂದ ಬಾಲಿವುಡ್ ನಟನ ಖ್ಯಾತ ಪತ್ನಿ..!

‘BODY HEAT’ ಅಗಿಡಲು ಈ ಕೆಲಸ ಮಾಡಿ’ ಎಂದ ಬಾಲಿವುಡ್ ನಟನ ಖ್ಯಾತ ಪತ್ನಿ..!

ಬಾಲಿವುಡ್ ಖ್ಯಾತ ನಟ ಮಿಲಿಂದ್ ಸೋಮನ್ಗೆ 55 ವರ್ಷ. ಸೋಮನ್ ಪತ್ನಿ ಅಂಕಿತಾ ಕೊನ್ವರ್ಗೆ ಕೇವಲ 30 ವರ್ಷ ವಯಸ್ಸು. ಇಬ್ಬರ ನಡುವೆ ಬರೋಬ್ಬರಿ 26 ವರ್ಷಗಳ ಅಂತರ ಇದೆ. ಹೀಗಾಗಿಯೇ ಈ ಜೋಡಿ ಯಾವಾಗಲೂ ಸುದ್ದಿಯಲ್ಲಿರುತ್ತದೆ.

ಇತ್ತೀಚೆಗೆ ಅಂಕಿತಾ ಅಂತೂ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟೀವ್. ತಮ್ಮ ಇನ್ಸ್ಟಾಗ್ರಾಂನಲ್ಲಿ ತನ್ನ ಪತಿ ಸೋಮನ್ ಜತೆಗೆ ತೆಗೆಸಿಕೊಂಡ ಹಾಟ್ ಫೋಟೋಸ್ ಪೋಸ್ಟ್ ಮಾಡಿ ಸುದ್ದಿಯಾಗುತ್ತಲೇ ಇರುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೇ 30 ವರ್ಷಕ್ಕೆ ಕಾಲಿಟ್ಟ ಅಂಕಿತಾ ಈಗ ಫುಲ್ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ.

ಈಗ ಏಕಾಂಗಿಯಾಗಿ ಕಾಲ ಕಳೆಯುತ್ತಿರುವ ಅಂಕಿತಾ ತನ್ನ ಇನ್ಸ್ಟಾಗ್ರಾಂನಲ್ಲಿ ತನ್ನದೇ ಶೈಲಿಯಲ್ಲಿ ಮಾಡಿದ ಸೂರ್ಯ ನಮಸ್ಕಾರದ ಫೋಟೋ ಶೇರ್ ಮಾಡಿದ್ದಾರೆ. ಈ ಪೋಸ್ಟ್ನಲ್ಲಿ ನಾನು ಸೂರ್ಯನಿಗಾಗಿ ಕಾಯುತ್ತಿದ್ದೇನೆ. ಇವತ್ತು ಫುಲ್ ರೆಸ್ಟ್ ಮಾಡಿದ್ದೇನೆ. ನನ್ನ ದೇಹ ಅಂದರೆ ನನಗೆ ಯಾವಾಗಲೂ ಕಂಪರ್ಟೆಬಲ್. ನಾನು ವರ್ಕೌಟ್ ಮಾಡುತ್ತೇನೆ. ಇದರಿಂದ ನನಗೆ ಸಂತೋಷ ಆಗುತ್ತದೆ. ನಾನು ಆರೋಗ್ಯಕರವಾಗಿದ್ದೇನೆ. ನನಗೆ ಏನು ಬೇಕೋ ಅದನ್ನೇ ತಿನ್ನುತ್ತೇನೆ. ಬಾಡಿಯನ್ನು ಹೀಟ್ ಆಗಿಡಲು ಇದುವೇ ಮಂತ್ರ ಎಂದು ಬರೆದುಕೊಂಡಿದ್ದಾರೆ.

 

View this post on Instagram

 

A post shared by Ankita Konwar (@ankita_earthy)

ಅಂಕಿತಾ ಮತ್ತು ಮಿಲಿಂದ್ ಹ್ಯಾಪಿ ಆಗಿದ್ದಾರೆ. ಇದಕ್ಕೆ ಸಾಕ್ಷಿಯೇ ಸೋಷಿ ಮೀಡಿಯಾದಲ್ಲಿ ಹಂಚಿಕೊಳ್ಳುವ ಫೋಟೋ ಮತ್ತು ವಿಡಿಯೋಗಳು. ಫಿಟ್ ನೆಸ್ ಬಗ್ಗೆ ಬಹಳ ಕಾಳಜಿವಹಿಸುವ ಈ ಜೋಡಿ ಇತರರಿಗೆ ಮಾದರಿ.

Source: newsfirstlive.com Source link