ಭಾಸ್ಕರ್​ ರಾವ್​ ಫೋನ್ ಟ್ಯಾಪ್ ಕೇಸ್​- ಸಿಬಿಐ ಸಲ್ಲಿಸಿದ್ದ ಬಿ-ರಿಪೋರ್ಟ್​ನಲ್ಲಿ ಏನಿದೆ..?

ಭಾಸ್ಕರ್​ ರಾವ್​ ಫೋನ್ ಟ್ಯಾಪ್ ಕೇಸ್​- ಸಿಬಿಐ ಸಲ್ಲಿಸಿದ್ದ ಬಿ-ರಿಪೋರ್ಟ್​ನಲ್ಲಿ ಏನಿದೆ..?

ಬೆಂಗಳೂರು: ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಟೆಲಿಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಿಬಿಐ ಅಧಿಕಾರಿಗಳು ಬಿ ರಿಪೋರ್ಟ್​ ಸಲ್ಲಿಕೆ ಮಾಡಿದ್ದಾರೆ. ಸಿಟಿ ಸಿವಿಲ್ ಕೋರ್ಟ್​ನ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಕೆ ಮಾಡಲಾಗಿದೆ.

ಸಿಬಿಐ ಸಲ್ಲಿಸಿರುವ ಬಿ-ರಿಪೋರ್ಟ್​ನಲ್ಲಿ ಏನಿದೆ ಅನ್ನೋದ್ರ ಮಾಹಿತಿ ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ. ಸಿಬಿಐ ಕಳೆದ ಎರಡು ವರ್ಷಗಳಿಂದ ಸಿಬಿಐ ಅಧಿಕಾರಿಗಳು ತನಿಖೆ ನಡೆಸಿದ್ದರು. ಈ ಪ್ರಕರಣದಲ್ಲಿ ಐಪಿಸಿ ಮತ್ತು ಭ್ರಷ್ಟಾಚಾರ ಕಾಯ್ದುಗಳು ಅನ್ವಯಿಸುವುದಿಲ್ಲ. ಐಟಿ ಆಕ್ಟ್ ಸೆಕ್ಷನ್ 26 ಮತ್ತು ಇಂಡಿಯನ್ ಟೆಲಿಗ್ರಾಫ್ ಆ್ಯಕ್ಟ್ ಅಡಿಯಲ್ಲಿ ತನಿಖೆಯನ್ನ ನಡೆಸಲಾಗಿದೆ. ಅಂದಿನ ಸಿಸಿಬಿ ಡಿಸಿಪಿ ಕುಲ್ದೀಪ್ ಕುಮಾರ್ ಜೈನ್ ನೀಡಿದ್ದ ದೂರಿನನ್ವಯ ಪ್ರಕರಣವನ್ನ ಸಿಬಿಐಗೆ ವರ್ಗಾವಣೆ ಮಾಡಲಾಗಿತ್ತು.

ಹಿನ್ನಲೆ ಏನು..?
ಮೊದಲು ವಿಲ್ಸನ್‌ ಗಾರ್ಡನ್​ ಠಾಣೆಯಲ್ಲಿ ಇಂಜಾಜ್ ಚಿಟ್ ಫಂಡ್ ವಂಚನೆ ಪ್ರಕರಣ ದಾಖಲಾಗಿತ್ತು. ಕೇಸ್ ತನಿಖೆಯನ್ನ ಅಂದಿನ ಕಮಿಷನರ್ ಟಿ.ಸುನಿಲ್ ಕುಮಾರ್ ಸಿಸಿಬಿಗೆ ವರ್ಗಾವಣೆ ಮಾಡಿದ್ದರು. ತನಿಖೆ ವೇಳೆ ಸಿಸಿಬಿ ಕೆಲ ಆರೋಪಿತರ ಫೋನ್ ಟ್ಯಾಪ್ ಮಾಡಿತ್ತು.

ಸಿಸಿಬಿಯ ಆಡುಗೋಡಿ ಟೆಕ್ನಿಕಲ್ ಸೆಂಟರ್​ನಲ್ಲಿ ಫೋನ್ ಟ್ಯಾಪಿಂಗ್ ನಡೆದಿತ್ತು. ಟ್ಯಾಪಿಂಗ್ ವೇಳೆ ಭಾಸ್ಕರ್ ರಾವ್ ಓರ್ವ ಆರೋಪಿ ಫರಾಜ್ ಅಹಮದ್ ಜೊತೆಗೆ ಮಾತಾನಾಡಿದ್ದ ಆರೋಪ ಕೇಳಿ ಬಂದಿತ್ತು. ಈ ವಿಚಾರವನ್ನು ಇನ್ಸ್​​ಪೆಕ್ಟರ್ ಮಿರ್ಜಾ ಆಲಿ ಡಿಸಿಪಿ ಹಾಗು ಅಲೋಕ್ ಕುಮಾರ್​ಗೆ ತಿಳಿಸಿದ್ರು. ಬಳಿಕ ಅಗಸ್ಟ್ 2 ರಂದು ಮಿರ್ಜಾ ಅಲಿಗೆ ಮಾತನಾಡಿದ್ದಾರೆ ಎನ್ನಲಾಗಿರುವ ಆಡಿಯೋ ತರುವಂತೆ ಸೂಚಿಸಿದ್ರು. ಅಲೋಕ್ ಕುಮಾರ್ ಸೂಚನೆಯಂತೆ ಕಮಿಷನರ್ ಕಚೇರಿಯಲ್ಲಿ ಹೆಚ್.ಸಿ.ಆನಂದ್ ಕುಮಾರ್​​ ಆಡಿಯೋವನ್ನ ನೀಡಿದ್ದರು.

ಮುಂದೇನಾಯ್ತು..?
ಮಧ್ಯಾಹ್ನ 1:30 pm ಸಮಯದಲ್ಲಿ ಅಲೋಕ್ ಕುಮಾರ್​​ಗೆ HC ಆನಂದ್ ಕುಮಾರ್ ನೀಡಿದ್ದರು. ಒಂದು ಸೋನಿ ಪೆನ್ ಡ್ರೈವ್, ಒಂದು ಹೆಚ್​​ಪಿ ಪೆನ್ ಡ್ರೈವ್​ಗೆ ಕಾಪಿ ಮಾಡಲಾಗಿತ್ತು. ಸದ್ಯ ಆ ಪೆನ್ ಡ್ರೈವ್ ಅವ್ನ ಸಿಬಿಐ ಟೀಂ ವಶಕ್ಕೆ ಪಡೆದುಕೊಂಡಿದೆ. ಒಂದು ಪೆನ್ ಡ್ರೈವ್, ಒಂದು ಲ್ಯಾಪ್ ಟಾಪ್ ಮತ್ತು ಹೆಡ್ ಫೋನ್ ನೀಡಲಾಗಿತ್ತು. ಆಡಿಯೋ ಕಾಫಿ ಮಾಡಿದ ಬಳಿಕ ಲ್ಯಾಪ್ ಟಾಪ್ ಮತ್ತು ಹೆಡ್ ಫೋನ್ ಅಲೋಕ್ ಕುಮಾರ್ ವಾಪಸ್ ನೀಡಿದ್ದರು.

blank

ನಂತರ ಹಲವು ಅಧಿಕಾರಿಗಳ ಮೂಲಕ ಅಲೋಕ್ ಕುಮಾರ್ ಅವರು ವಾಟ್ಸ್​ಆ್ಯಪ್​ ಮೂಲಕ ಮೂರು ಆಡಿಯೋಗಳನ್ನು ತರಿಸಿಕೊಂಡಿದ್ದರು. ಈ ನಡುವೆ ಭಾಸ್ಕರ್ ರಾವ್ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಈ ಸಂದರ್ಭದಲ್ಲಿ ಭಾಸ್ಕರ್ ರಾವ್​ಗೆ ಪತ್ರಕರ್ತೆ ಕುಷಾಲಾ ಇ-ಮೇಲ್ ಮಾಡಿದ್ದರು. ಕುಷಾಲಾ ಇಮೇಲ್ ಬಂದ ಬಳಿಕ ತನಿಖೆ ನಡೆಸುವಂತೆ ಭಾಸ್ಕರ್ ರಾವ್ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್​ಗೆ ಆದೇಶ ನೀಡಲಾಗಿತ್ತು.

ಇದನ್ನೂ ಓದಿ: ಫೋನ್ ಕದ್ದಾಲಿಕೆ ಕೇಸ್​; ಸಿಬಿಐ ಬಿ ರಿಪೋರ್ಟ್​ಗೆ ಭಾಸ್ಕರ್​​ ರಾವ್ ಅಸಮಾಧಾನ

ಸಂದೀಪ್ ಪಾಟೀಲ್ ತನಿಖೆ ನಂತರ ಈ ಪ್ರಕರಣವನ್ನ ಡಿಜಿ ಹಾಗೂ ಸರ್ಕಾರದ ಮೂಲಕ ಸಿಬಿಐಗೆ ವರ್ಗಾವಣೆ ಮಾಡಲಾಗಿತ್ತು. ಇಷ್ಟೂ ತನಿಖೆ ವೇಳೆ ಕುಷಾಲಾಗೆ ಆಡಿಯೋ ತಲುಪಿದ್ದು ಹೇಗೆ? ಆ ಬಗ್ಗೆ ಮೂಲ ಯಾರು ಎಂಬುದು ಪತ್ತೆಯಾಗಿಲ್ಲ? ಆದ್ರೆ ಮೇಲ್ ಮಾಡಿದ್ದ ಕಾರಣ ಕುಷಾಲಾಗೆ ಆಡಿಯೋ ಸಿಕ್ಕಿದೆ ಎಂಬುದು ಧೃಡವಾಗಿತ್ತು. ಆದರೆ ಆಡಿಯೋ ಮೂಲವನ್ನು ಪತ್ರಕರ್ತೆ ಕುಷಾಲಾ ಅವರು ತಿಳಿಸಿರಲಿಲ್ಲ. ಹೀಗಾಗಿ ಯಾರು ಆಡಿಯೋ ನೀಡಿದ್ರು ಎಂಬುದು ಸ್ಪಷ್ಟವಾಗಿಲ್ಲ. ಹೀಗಾಗಿ ಆರೋಪಕ್ಕೆ ಸೂಕ್ತ ಸಾಕ್ಷಿಗಳು ಇಲ್ಲ. ಈ ಹಿನ್ನೆಲೆಯಲ್ಲಿ ಕೇಸ್​ಗೆ ಸಿಬಿಐ ಬಿರಿಪೋರ್ಟ್ ಸಲ್ಲಿಕೆ ಮಾಡಿದೆ.

Source: newsfirstlive.com Source link