ಬ್ಲ್ಯಾಕ್​​​ ಮೇಲ್​​​​ ಮಾಡಿ ಮಂತ್ರಿ ಸ್ಥಾನ ಕೇಳೋ ಮಗಾ ನಾನಲ್ಲ; ಯತ್ನಾಳ್​

ಬ್ಲ್ಯಾಕ್​​​ ಮೇಲ್​​​​ ಮಾಡಿ ಮಂತ್ರಿ ಸ್ಥಾನ ಕೇಳೋ ಮಗಾ ನಾನಲ್ಲ; ಯತ್ನಾಳ್​

ವಿಜಯಪುರ: ನನ್ನ ಯೋಗ್ಯತೆ ನೋಡಿ ಮಂತ್ರಿ ಸ್ಥಾನ ನೀಡಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​ ಹೇಳಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತಾಡಿದ ಯತ್ನಾಳ್​​, ಬ್ಲ್ಯಾಕ್​​​ ಮೇಲ್​​​​ ಮಾಡಿ, ಸಿಡಿ ಇಟ್ಕೊಂಡು, ಹಣ ಕೊಟ್ಟು ಮಂತ್ರಿ ಸ್ಥಾನ ಕೇಳೋ ಮಗಾ ನಾನಲ್ಲ ಎಂದಿದ್ದಾರೆ.

ಭಷ್ಟಚಾರದ ಆರೋಪ ಇದ್ದರೂ ಶಶಿಕಲಾ ಜೊಲ್ಲೆಗೆ ಸಚಿವ ಸ್ಥಾನ ನೀಡಿದ್ರು. ಯಾಕೆ ಸಚಿವ ಸ್ಥಾನ ನೀಡಿದ್ರು ಎಂದು ಸಿಎಂ ಬಸವರಾಜ್​​ ಬೊಮ್ಮಾಯಿ ಅವರೇ ಹೇಳಬೇಕು. ನಾನು ಮಂತ್ರಿ ಮಾಡುವವನು ಅಲ್ಲ, ಹೈಕಮಾಂಡ್​​​ ಮೊದಲೇ ಅಲ್ಲ ಎಂದು ಕಿಡಿಕಾರಿದರು.

ನನಗೆ ಮಂತ್ರಿ ಸ್ಥಾನ ಕೊಡಿ ಎಂದು ಯಾವತ್ತೂ ಕೇಳಿಲ್ಲ. ಬ್ಲ್ಯಾಕ್​​​ ಮೇಲ್​​​​ ಮಾಡಿ, ಸಿಡಿ ಇಟ್ಕೊಂಡು ಮಂತ್ರಿ ಸ್ಥಾನ ನಾನು ಕೇಳೋದಿಲ್ಲ. ಹಣ ಕೊಟ್ಟು, ಕಾರು ನೀಡಿ ಮಂತ್ರಿ ಸ್ಥಾನ ಪಡೆಯುವ ಅವಶ್ಯಕತೆಯೂ ಇಲ್ಲ ಎಂದು ಖಡಕ್​​ ಆಗಿ ಹೇಳಿದರು.

ಇದನ್ನೂ ಓದಿ: ಫೋನ್ ಕದ್ದಾಲಿಕೆ ಕೇಸ್​; ಸಿಬಿಐ ಬಿ ರಿಪೋರ್ಟ್​ಗೆ ಭಾಸ್ಕರ್​​ ರಾವ್ ಅಸಮಾಧಾನ

Source: newsfirstlive.com Source link