ಕೊರೋನಾ ಆಂತಕದ ನಡುವೆಯೂ ಸೆ.6ರಿಂದ 6-8ನೇ ತರಗತಿ ಆರಂಭ; ಸರ್ಕಾರದಿಂದ ಸುತ್ತೋಲೆ

ಕೊರೋನಾ ಆಂತಕದ ನಡುವೆಯೂ ಸೆ.6ರಿಂದ 6-8ನೇ ತರಗತಿ ಆರಂಭ; ಸರ್ಕಾರದಿಂದ ಸುತ್ತೋಲೆ

ಮಾರಕ ಕೊರೋನಾ ಮೂರನೇ ಅಲೆ ಆಂತಕದ ನಡುವೆಯೂ ರಾಜ್ಯ ಸರ್ಕಾರ ಶಾಲೆಗಳ ಆರಂಭಕ್ಕೆ ಅನುಮತಿ ನೀಡಿದೆ. ಸೆಪ್ಟೆಂಬರ್​ 6ರಿಂದ ಆರಂಭವಾಗಲಿರುವ ಶಾಲೆಗಳಿಗೆ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ 6 ರಿಂದ 7 ನೇ ತರಗತಿಗಳನ್ನ ನಡೆಸಲು ಸೂಚಿಸಿದೆ. ಮಧ್ಯಾಹ್ನ 2 ರಿಂದ 4.30 ರವರೆಗೆ 8ನೇ ತರಗತಿ ನಡೆಸಲು ಸರ್ಕಾರ ಸೂಚನೆ ನೀಡಿದೆ. ಜೊತೆಗೆ ಶಾಲಾ ಮಕ್ಕಳಿಗೆ ಹಾಜರಾತಿ ಕಡ್ಡಾಯ ಇರುವುದಿಲ್ಲವೆಂದು ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಬ್ಲ್ಯಾಕ್​​​ ಮೇಲ್​​​​ ಮಾಡಿ ಮಂತ್ರಿ ಸ್ಥಾನ ಕೇಳೋ ಮಗಾ ನಾನಲ್ಲ; ಯತ್ನಾಳ್​

Source: newsfirstlive.com Source link