75 ಸಾವಿರದ ಚೆರ್ರಿ ರೆಡ್ ಘರಾರಾ ಡ್ರೆಸ್‍ನಲ್ಲಿ ಮಿಂಚಿದ ಚಂದ್ರಮುಖಿ

ಯಸ್ಸು ಕೇವಲ ಸಂಖ್ಯೆ ಅನ್ನೋದನ್ನ ಪ್ರೂವ್ ಮಾಡಿದರಲ್ಲಿ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಸಹ ಒಬ್ಬರು. ತಮ್ಮ ಆಕರ್ಷಕ ಕಣ್ಣುಗಳಿಂದಲೇ ನೋಡುಗರ ಮಂತ್ರ ಮುಗ್ಧರನ್ನ ಮಾಡುವ ಚೆಲುವೆ ಮಾಧುರಿ ದೀಕ್ಷಿತ್. ಸದ್ಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಡ್ಯಾನ್ಸಿಂಗ್ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿರುವ ಮಾಧುರಿ ದೀಕ್ಷಿತ್ ಕಾರ್ಯಕ್ರಮದ ಆಕರ್ಷಣೆಯ ಕೇಂದ್ರ ಬಿಂದು. ಇನ್ನು ಎಷ್ಟೋ ಜನರು ಮಾಧುರಿ ತುಟಿಯಂಚಿನ ಕಿರುನಗೆಗಾಗಿ ಈ ಶೋ ನೋಡೋದುಂಟು. ಇನ್ನು ಕೆಲವೊಮ್ಮೆ ಶೋನಲ್ಲಿ ಸ್ಪರ್ಧಿಗಳ ಜೊತೆ ಮಾಧುರಿ ಹೆಜ್ಜೆ ಹಾಕಿದ್ರೆ, ನೋಡುಗರ ಹೃದಯದಲ್ಲಿ ಪ್ರೇಮ ಸಿಂಚನ ಆಗೋದರಲ್ಲಿ ಸಂದೇಹವಿಲ್ಲ.

ಈ ವಾರದ ಕಾರ್ಯಕ್ರಮಕ್ಕೆ ಮಾಧುರಿ ದೀಕ್ಷಿತ್ 75 ಸಾವಿರ ರೂ.ಮೌಲ್ಯದ ಚೆರ್ರಿ ರೆಡ್ ಘರಾರಾ ಡ್ರೆಸ್ ನಲ್ಲಿ ಮಿಂಚಿದ್ದರು.

blank

ಈ ಡ್ರೆಸ್ ಪುನಿತ್ ಬಾಲಾನ ಡಿಸೈನ್ ಮಾಡಿದ್ದು, ಅವರ ವೆಬ್‍ಸೈಟ್ ನಲ್ಲಿ ಲಭ್ಯವಿದೆ.

blank

ಡ್ರೆಸ್‍ಗೆ ಮ್ಯಾಚಿಂಗ್ ಗಾಗಿ ಕುಂದನ್ ಜೆವೆಲ್ಲರಿಯ ಹರಳುಗಳ ವಿಶೇಷ ವಿನ್ಯಾಸದ ಕತ್ತಿನ ಸರ ಮತ್ತು ಸಿಂಪರ್ ಕಿವಿಯೊಲೆ ಧರಿಸಿದ್ದ ಮಾಧುರಿ ವಧುವಿನಂತೆ ಕಂಗೊಳಿಸುತ್ತಿದ್ದರು.

blank

ಕಾರ್ಯಕ್ರಮ ಮುಗಿದ ಬಳಿಕ ಹೊರ ಬಂದ ಮಾಧುರಿ ಸೌಂದರ್ಯವನ್ನು ಕ್ಯಾಮೆರಾಗಳು ತಮ್ಮ ಕಣ್ಣಲ್ಲಿ ಭದ್ರ ಮಾಡಿಕೊಂಡವು.

blank

ಇದೇ ಕಾರ್ಯಕ್ರಮದಲ್ಲಿ ಮಾಧುರಿಗೆ ಜೊತೆಯಾಗಿ ಧರ್ಮೇಶ್, ತುಷಾರ್ ಕಾಲಿಯಾ ಸಹ ಜಡ್ಜ್ ಆಗಿದ್ದಾರೆ.

blank

ಇನ್ನು ಹಾಸ್ಯ ಕಲಾವಿದೆ ಭಾರತಿ ಸಿಂಗ್ ಪತಿ ಹರ್ಷ ಜೊತೆ ಶೋನ ನಿರೂಪಣೆ ಮಾಡ್ತಿದ್ದಾರೆ.

blank

ಕನ್ನಡದ ಚಿಕ್ಕಮಗಳೂರಿನ ಡ್ಯಾನ್ಸರ್ ಕಿಶನ್ ಸಹ ಈ ಶೋನಲ್ಲಿ ಭಾಗವಾಗಿದ್ದರು. ಕಳೆದ ಸೀಸನ್ ಕಿಶನ್ ವಿನ್ನರ್ ಆಗಿದ್ರು. ಇದನ್ನೂ ಓದಿ: ರಶ್ಮಿಕಾ ಜೊತೆ ಫೋಟೋಗೆ ಮುಗಿಬಿದ್ದ ಫ್ಯಾನ್ಸ್

blank

Source: publictv.in Source link