ನಾಡಹಬ್ಬ ದಸರಾಗೆ ಮೆರಗು ನೀಡಲು ಬಂಡೀಪುರದಿಂದ 3 ಆನೆಗಳು ಆಯ್ಕೆ

ನಾಡಹಬ್ಬ ದಸರಾಗೆ ಮೆರಗು ನೀಡಲು ಬಂಡೀಪುರದಿಂದ 3 ಆನೆಗಳು ಆಯ್ಕೆ

ಚಾಮರಾಜನಗರ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2021ಕ್ಕೆ ತಯಾರಿ ನಡೆಸಲಾಗುತ್ತಿದೆ. ಇದೀಗ ಬಂಡೀಪುರದಲ್ಲಿ ಮೂರು ಆನೆಗಳನ್ನ ದಸರಾಗೆ ಕರೆದುಕೊಂಡು ಬರಲು ನಿರ್ಧರಿಸಲಾಗಿದೆ.

ಅದರಂತೆ ಇಂದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುತ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ರಾಮಾಪುರ ಆನೆ ಶಿಬಿರಕ್ಕೆ‌ ಮೈಸೂರು ಡಿಸಿಎಫ್ ಕಾರಿಕಾಳನ್ ಭೇಟಿ ನೀಡಿದ್ದರು. ಎರೆಡು ಹೆಣ್ಣಾನೆ ಒಂದು ಗಂಡಾನೆಯನ್ನ ಪ್ರಾಥಮಿಕ ಹಂತವಾಗಿ ಆಯ್ಕೆ ಮಾಡಲಾಗಿದೆ.

blank

ಚೈತ್ರ, ಲಕ್ಷ್ಮಿ ಹಾಗೂ ಪಾರ್ಥಸಾರಥಿ ಮೂರು ಆನೆಗಳನ್ನ ಆಯ್ಕೆ ಮಾಡಲಾಗಿದೆ. ಸೆಪ್ಟೆಂಬರ್ 3 ರಂದು ನಡೆಯುವ ದಸರಾ ಹೈಪವರ್ ಕಮಿಟಿಯಲ್ಲಿ ಈ ಬಗ್ಗೆ ಚರ್ಚೆ ನಡೆದಿತ್ತು, ಅದರಂತೆ ಅಂತಿಮವಾಗಿ ಮೂರು ಆನೆಗಳನ್ನ ಇಲ್ಲಿಂದ ಆಯ್ಕೆ ಮಾಡಲಾಗಿದೆ.

Source: newsfirstlive.com Source link