ಅಮೆರಿಕಾ ಇಲ್ಲದ ಅಫ್ಘಾನಿಸ್ತಾನ -US ಸೇನೆ ತೊರೆದ ಕ್ಷಣದಲ್ಲೇ ಅಫ್ಘಾನ್​​ನಲ್ಲಿ ನಡೆದಿದ್ದೇನು?

ಅಮೆರಿಕಾ ಇಲ್ಲದ ಅಫ್ಘಾನಿಸ್ತಾನ -US ಸೇನೆ ತೊರೆದ ಕ್ಷಣದಲ್ಲೇ ಅಫ್ಘಾನ್​​ನಲ್ಲಿ ನಡೆದಿದ್ದೇನು?

ಅಮೆರಿಕಾ ಸೇನೆ ಅಫ್ಘಾನಿಸ್ತಾನದಿಂದ ಕೊನೆಗೂ ಕಾಲ್ಕಿತ್ತಿದೆ. ಗೆಲುವು ಸೋಲಿನ ಲೆಕ್ಕಚಾರಕ್ಕಿಂತ ಹೆಚ್ಚಾಗಿ ಈ ನಿರ್ಧಾರದಿಂದಾಗಿ ಇಂದು ಸಾಕಷ್ಟು ಉತ್ತರಿಸಬೇಕಾದ ಸ್ಥಿತಿಗೆ ಅಮೆರಿಕಾ ತಲುಪಿದೆ. ಈ ನಡುವೆ ಅಮೆರಿಕ ಇಲ್ಲದ ಅಫ್ಘಾನಿಸ್ತಾನ.. ಒಂದೇ ದಿನದಲ್ಲಿ ಭಯಾನಕ ಅನುಭವಗಳಿಗೆ ಸಾಕ್ಷಿಯಾಗಿದೆ. ಹಾಗಿದ್ದರೆ ಇಂದು ಏನಾಯ್ತು?

ಅಫ್ಘಾನಿಸ್ತಾನವನ್ನು ಬರಿಯಲ್​ ಗ್ರೌಂಡ್ ಆಫ್​ ಎಂಪರರ್ಸ್ ಅಂತಾರೆ.. ಅಂದ್ರೆ ಚಕ್ರವರ್ತಿಗಳ ಸಮಾಧಿ ಸ್ಥಳ. ಯಾಕಂದ್ರೆ ಇತಿಹಾಸದಿಂದಲೂ ದೊಡ್ಡ ದೊಡ್ಡ ಸಮ್ರಾಟರು, ರಾಜರು, ದೇಶಗಳು ಈ ದೇಶದ ಮೇಲೆ ದಾಳಿ ಮಾಡಿ ಸೋತು ಹೋಗಿದ್ದಾರೆ. ಇದಕ್ಕೆ 80ರ ಕಾಲದ ಸೂಪರ್ ಪವರ್ ಆಗಿದ್ದ ಅಖಂಡ ರಷ್ಯಾನೂ ಹೊರತಲ್ಲ.. ಈಗ ಅಮೆರಿಕ ಸಹ ಅಲ್ಲಿ ಸೋತು ಮಂಡಿಯೂರಿದಂತಾಗಿದೆ. ಹೀಗಂತ ನಾವು ಹೇಳುತ್ತಿಲ್ಲ.. ಇದನ್ನ ಇಂದು ತಾಲಿಬಾನ್​​​ನ ವಕ್ತಾರರೇ ಘೋಷಿಸಿದ್ದಾರೆ. ಇವತ್ತು ಅಮೆರಿಕ ಅಫ್ಘಾನ್​ ನೆಲದಲ್ಲಿ ಸೋತು ಪಲಾಯನ ಮಾಡಿದೆ. ಇದು ಜಗತ್ತಿಗೇ ಒಂದು ಸಂದೇಶ ಅಂತಾ ತಾಲಿಬಾನ್​ ಹೇಳಿದೆ. ಹಾಗಿದ್ದರೆ.. ಇಂದು ಏನಾಯ್ತು? ಅಮೆರಿಕಾ ಇಲ್ಲದ ಅಫ್ಘಾನಿಸ್ತಾನ ಏನಾಗಿದೆ?

blank

ಇದನ್ನೂ ಓದಿ: ಭಾರತದ ರಾಯಭಾರಿ ಭೇಟಿಯಾದ ತಾಲಿಬಾನ್​​​ ನಾಯಕ; ಸ್ಟಾನಿಕ್‌ಜೈ ಇಲ್ಲಿಗೂ ಏನು ನಂಟು ಗೊತ್ತಾ..?

ಬರೋಬ್ಬರಿ 20 ವರ್ಷಗಳು. ಸುಮಾರು 210 ಲಕ್ಷ ಕೋಟಿ ರೂಪಾಯಿ ವ್ಯಯ.. ಸುಮಾರು 2600 ಸೈನಿಕರ ಬಲಿದಾನ.. ತನ್ನದು ಮಾತ್ರವಲ್ಲ ತನ್ನ ಮಿತ್ರ ಪಡೆಗಳಾದ ಇಂಗ್ಲೆಂಡ್​ ನ ಸುಮಾರು 600 ಸೈನಿಕರ ರಕ್ತ ತರ್ಪಣ.. ಇಷ್ಟೆಲ್ಲ ಆಗಿದ್ದರೂ.. ಮತ್ತೆ 2001ಕ್ಕೆ ಅಫ್ಘಾನಿಸ್ತಾನ ಏನಾಗಿತ್ತೋ? ಅಂಥದ್ದೇ ಸ್ಥಿತಿಗೆ ಮತ್ತೆ ಮರಳುವಂತೆ ಅಮೆರಿಕಾ ಮಾಡಿ ಬಿಟ್ಟಿದೆ.. ಉಗ್ರರ ಕೈಗೆ ಸುಂದರ ದೇಶವನ್ನ ಕೊಟ್ಟು ಹೊರಟು ಹೋಗಿದೆ.

ಹೌದು.. ಅದು ಸೆಪ್ಟೆಂಬರ್ 11, 2001 ರ ಸಮಯ. ಆಗ ಅಮೆರಿಕದ ಅವಳಿಗೋಪುರದ ಮೇಲೆ ತಾಲಿಬಾನ್​ ಆಶ್ರಯದಲ್ಲಿದ್ದ ಅಲ್​ಖೈದಾ ಉಗ್ರರು ವಿಮಾನ ನುಗ್ಗಿಸಿ ಬಿಡ್ತಾರೆ. ಅಫ್ಘಾನಿಸ್ತಾನದಲ್ಲೇ ಕುಳಿತಿದ್ದ ಲಾಡೆನ್​, ಅಮೆರಿಕಾವನ್ನೇ ನಡುಗಿಸಿ ಬಿಡ್ತಾನೆ. ಈ ದಾಳಿಯಲ್ಲಿ ಸುಮಾರು 25 ಸಾವಿರ ಜನ ಗಾಯಗೊಳ್ತಾರೆ. ಸುಮಾರು 2700 ಜನ ಅಮಾಯಕರು ಸಾವನ್ನಪ್ಪಿ ಬಿಡ್ತಾರೆ. ಈ ಘಟನೆ ನಡೆಯುತ್ತಲೇ ಕೆರಳಿದ ಅಮೆರಿಕಾ ತನ್ನ ಮಿತ್ರ ಪಡೆಗಳೊಂದಿಗೆ ಅಫ್ಘಾನಿಸ್ತಾನಕ್ಕೆ ನುಗ್ಗಿ ಬಿಡುತ್ತೆ. ಲಾಡೆನ್​ಗೆ ಇರಲು ಅವಕಾಶ ಕಲ್ಪಿಸಿದ್ದ ತಾಲಿಬಾನ್ ಕೇವಲ 4 ದಿನದಲ್ಲೇ ಅಲ್ಲಿಂದ ಕಾಲ್ಕಿತ್ತು ಬಿಲ ಸೇರಿಕೊಂಡು ಬಿಡುತ್ತೆ.. ಆಗ ಇಡೀ ಜಗತ್ತೇ ಅಮೆರಿಕಕ್ಕೆ ಜೈ ಜೈ ಅಂತಿರುತ್ತೆ.. ಆದ್ರೆ.. 20 ವರ್ಷಗಳಲ್ಲಿ ಆ ದೇಶ ಮಾಡಿದ್ದು ಏನು ಅಂತ ತಿಳಿದ ಜಗತ್ತು ಇಂದು ಜೋ ಬೈಡನ್ ಅಧ್ಯಕ್ಷನಾಗಿರೋ ಅಮೆರಿಕಾವನ್ನ ನೋಡಿ ಮುಸಿ ಮುಸಿ ನಗುತ್ತಿದ್ದರೆ, ತಾಲಿಬಾನ್​ ಗೆಲುವಿನ ಕೇಕೆ ಹಾಕುತ್ತಿದೆ..!

ಅಮೆರಿಕ ಸೇನೆ ಕಾಲ್ಕೀಳುತ್ತಿದ್ದಂತೆಯೇ ರಾಕ್ಷಸ ಸಂಭ್ರಮ
ಗಾಳಿಯಲ್ಲಿ ಸಾವಿರ ಸಾವಿರ ಗುಡು ಹಾರಿಸಿ ರಣಕೇಕೆ
ಅಮೆರಿಕವನ್ನೇ ಸೋಲಿಸಿದೆವು ಎಂದು ಬೀಗಿದ ತಾಲಿಬಾನ್

ಇದನ್ನೂ ಓದಿ: ಕತಾರ್​​​ನಲ್ಲಿ ಭಾರತದ ರಾಯಭಾರಿ ಡಾ. ದೀಪಕ್ ಮಿತ್ತಲ್ ಭೇಟಿಯಾದ ತಾಲಿಬಾನ್​​​ ನಾಯಕ ಸ್ಟಾನಿಕ್‌ಜೈ

blank

ಕೇಳಿದ್ರಲ್ಲ.. ಎಲ್ಲೆಲ್ಲೂ ಗಹಗಹಿಸುತ್ತಿರುವ ಗುಂಡಿನ ನಗು.. ರಕ್ಕಸ ಆನಂದಲ್ಲಿ ತೇಲುತ್ತಿರುವ ಬಂದೂಕುಗಳು.. ಕರುಣೆಯ ಲವಶೇಶವೂ ಇಲ್ಲದ ಕಣ್ಣುಗಳಲ್ಲಿ.. ಆರ್ತನಾದ ಹೊಮ್ಮಿಸುವಂಥ ರಣಭೀಕರು ಕೇಕೆ.. ನಂಬಿ.. ಇದು ಸಂಭ್ರಮ.. ಹೌದು ಇದೇ ಸಂಭ್ರಮ.. ಇದು ಗೆಲುವಿನ ಕೇಕೆ.. ರಣಕೇಕೆ.. ತಾಲಿಬಾನಿಗಳು ಎನ್ನೇನು ಮಾಡಬಲ್ಲರು??! ಸಂಗೀತಗಾರರನ್ನು ಕೊಂದು ಹಾಕಿದವರು ಹಾಡು ಹಾಡಿ.. ಕುಣಿದು ಕುಪ್ಪಳಿಸಿ ಸಂಭ್ರಮಿಸಿಯಾರೇ? ಹಾಸ್ಯಗಾರನನ್ನೇ ನಿರ್ದಾಕ್ಷಿಣ್ಯವಾಗಿ ಹತ್ಯೆ ಮಾಡಿದವರು. ಹೃದಯತುಂಬಿ ನಕ್ಕಾರೇ..? ಆದರೂ ಇದು ಅಮೆರಿಕಾದ ಯಡವಟ್ಟಿನ ಫಲ. ತಾಲಿಬಾನಿಗಳ ವಿಜಯದ ಕೇಕೆ!

ಸೋಮವಾರ ಮಧ್ಯರಾತ್ರಿ ಅಮೆರಿಕಾದ ಕೊನೆಯ ಯೋಧ ವಿಮಾನ ಏರುತ್ತಲೇ.. ಅಫ್ಘಾನ್ ರಾಜಧಾನಿ ಕಾಬೂನ್‌ನ ಆಗಸವನ್ನ ತಾಲಿಬಾನಿಗಳು ಗುಂಡುಗಳು ಸೀಳಿ ಹಾಕಿದ್ದವು..ಇದರ ಭೀಕರತೆಗೆ ಕಗ್ಗತ್ತಲ ರಾತ್ರಿಯೇ ಒಂದು ಕ್ಷಣ ಬೆಚ್ಚಿ ಬೀಳುವಂತಾಗಿತ್ತು.. ಕಾಬೂಲ್‌ನ ಗಲ್ಲಿ ಗಲ್ಲಿಯಲ್ಲಿಯೂ ತಾಲಿಬಾನ್ಉಗ್ರರು ಹಾರಿಸಿದ ಗುಂಡಿನದ ಮದ್ದಿನ ವಾಸನೆ ಮನೆ ಮನೆಗೂ ಆವರಿಸಿ. ಕರಾಳ ಭವಿಷ್ಯದ ಟೀಸರ್ ತೋರಿಸಿದಂತೆ ಆಗಿಬಿಟ್ಟಿದೆ. ಅವರ ರಣ ಕೇಕೆಗೆ ಅಫ್ಘಾನ್‌ ಪ್ರಜೆಗಳು ಬೆಚ್ಚಿ ಬಿದ್ದಿದ್ದು, ದೇಶತೊರೆಯಲು ಇದ್ದ ಏಕೈಕ ಅವಕಾಶವೂ ಇಲ್ಲದಂತಾಗಿ ಶೂನ್ಯದಲ್ಲೇ ರಾತ್ರಿಕಳೆದುಬಿಟ್ಟಿದ್ದಾರೆ.

ವಿಮಾನ ನಿಲ್ದಾಣದ ರನ್‌ವೇಗೆ ನುಗ್ಗಿದ ತಾಲಿಬಾನ್‌ ಮುಖಂಡರು
ರನ್‌ವೇ ನಲ್ಲಿ ನಡೆದಾಡಿ, ನಿಂತಿರೋ ವಿಮಾನವೇರಿ ಸಂಭ್ರಮ

ಕಾಬೂನ್‌ನ ವಿಮಾನ ನಿಲ್ದಾಣದ ರನ್‌ವೇನಲ್ಲಿ ಕಳೆದ 15 ದಿನಗಳಿಂದ ಅಮೆರಿಕ, ಬ್ರಿಟನ್, ರಷ್ಯಾ, ಭಾರತ… ಸೇರಿದಂತೆ ವಿವಿಧ ದೇಶಗಳ ಮಿಲಿಟರಿ ವಿಮಾನಗಳೇ ಕಾಣಿಸಿಕೊಳ್ತಾ ಇದ್ವು. ತಾಲಿಬಾನ್ಉಗ್ರಕ ಕ್ರೌರ್ಯಕ್ಕೆ ಹೆದರಿದ ಅದೆಷ್ಟೊ ಅಫ್ಘಾನ್‌ ಪ್ರಜೆಗಳು ವಿಮಾನ ಏರಿ ಹೋಗ್ತಾ ಇದ್ರು. ಆದ್ರೆ, ಆಗಸ್ಟ್ 30 ರಂದು ಮಧ್ಯ ರಾತ್ರಿ ಅಮೆರಿಕ ಸೇನೆಯ ಕಟ್ಟೆಕಡೆಯ ಸೈನಿಕ ಕೂಡ ಇಲ್ಲಿಂದ ತೆರೆಳಿದ್ದಾನೆ. ಆ ಕ್ಷಣವೇ ಅಂದ್ರೆ ಮಧ್ಯರಾತ್ರಿಯ ವೇಳೆ ವಿಮಾನ ನಿಲ್ದಾಣಕ್ಕೆ ನುಗ್ಗಿದ ತಾಲಿಬಾನ್ ಮುಖಂಡರು ರನ್‌ವೇ ನಲ್ಲಿ ನಡೆದಾಡಿದ್ದಾರೆ. ನಿಂತಿರೋ ವಿಮಾನವೇರಿ ಸಂಭ್ರಮಿಸಿದ್ದಾರೆ. ಈ ಮೂಲಕ ಕಾಬೂಲ್‌ ವಿಮಾನ ನಿಲ್ದಾಣ ಕೂಡ ತಮ್ಮ ವಶವಾಯ್ತು ಅಂತ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ: ಪಂಜ್​​ಶೀರ್​​ ಮೇಲೆ ದಾಳಿ; 9-10 ತಾಲಿಬಾನ್​​ ಉಗ್ರರನ್ನು ಹತ್ಯೆಗೈದ ವಿರೋಧಿ ಪಡೆ

ನಿಗದಿಗಿಂತ 24 ಗಂಟೆ ಮೊದಲೇ ಕಾಬೂಲ್‌ ತೊರೆದ ಅಮೆರಿಕ ಸೇನೆ
ವಿಮಾನ ಏರುತ್ತಿರೋ ಅಮೆರಿಕದ ಕಟ್ಟ ಕಡೆಯ ಯೋಧ

blank

ಆಗಸ್ಟ್14 ಮತ್ತು 15 ರ ಸಮಯದಲ್ಲಿ ತಾಲಿಬಾನ್ಉಗ್ರರು ಅಫ್ಘಾನ್‌ ರಾಜಧಾನಿ ಕಾಬೂಲ್‌ಗೆ ನುಗ್ಗುತ್ತಾರೆ. ತಾಲಿಬಾನ್ ಉಗ್ರರ ಕ್ರೌರ್ಯಕ್ಕೆ ಹೆದರಿ ಅಫ್ಘಾನ್‌ ಪ್ರಜೆಗಳು, ಅಫ್ಘಾನ್ನಲ್ಲಿದ್ದ ವಿದೇಶ ಪ್ರಜೆಗಳು ಪಲಾಯನಕ್ಕಾಗಿ ಕಾಬೂಲ್‌ ವಿಮಾನ ನಿಲ್ದಾಣಕ್ಕೆ ನುಗ್ಗುತ್ತಾರೆ. ಕಾಬೂನ ವಿಮಾನ ನಿಲ್ದಾಣವನ್ನು ಮಾತ್ರ ಅಮೆರಿಕ ಸೇನೆಯ ವಶದಲ್ಲಿರುತ್ತದೆ. ಇದೇ ನಿಲ್ದಾಣದಿಂದ ಅಮೆರಿಕ, ಬ್ರಿಟನ್, ಸೇರಿದಂತೆ ನಾನಾ ದೇಶಗಳು ಆಗಸ್ಟ್15 ರಿಂದ ಏರ್ಲಿಫ್ಟ್ ಆರಂಭಿಸುತ್ತಾರೆ. ನಿಗದಿಯಂತೆ ಆಗಸ್ಟ್ 31ಕ್ಕೆ ಅಮೆರಿಕ ಸೇನೆ ಕಾಬೂಲ್ ವಿಮಾನ ನಿಲ್ದಾಣ ತೊರೆಯಬೇಕಿತ್ತು. ಆದ್ರೆ, 24 ಗಂಟೆಯ ಮೊದಲೇ ಅಂದ್ರೆ ಆಗಸ್ಟ್30 ರಂದು ಮಧ್ಯ ರಾತ್ರಿಯೇ ವಿಮಾನ ನಿಲ್ದಾಣ ತೊರೆದಿದೆ.

ಹಾಗೇ ಕಾಬೂಲ್‌ ವಿಮಾನ ನಿಲ್ದಾಣ ತೊರೆಯುತ್ತಿರೋ ಬಗ್ಗೆ ಅಮೆರಿಕ ರಕ್ಷಣಾ ಸಚಿವಾಲಯ ಫೋಟೋ ವೊಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಯೋಧನೊಬ್ಬ ಅಮೆರಿಕದ ಸಿ-17 ವಿಮಾನವನ್ನು ಏರುತ್ತಿರುವ ದೃಶ್ಯವಿದೆ. ಅಫ್ಘಾನ್‌ ತೊರೆಯುತ್ತಿರುವ ಅಮೆರಿಕ ಕಟ್ಟಕಡೆಯ ಯೋಧ ಅಂತ ರಕ್ಷಣಾ ಸಚಿವಾಲಯ ಟ್ವೀಟ್ ನಲ್ಲಿ ತಿಳಿಸಿದೆ. ಈ ಟ್ವೀಟ್ ಭಾರೀ ವೈರಲ್ ಆಗಿದೆ. ಜೊತೆಗೆ ಅಮೆರಿಕ ನಡೆಯ ಬಗ್ಗೆ ಭಾರೀ ವಿರೋಧವೂ ವ್ಯಕ್ತವಾಗಿದೆ.

ಇದನ್ನೂ ಓದಿ: ಅಮೆರಿಕ ಸೇನೆಗೆ ಸಹಾಯ ಮಾಡಿದ್ದಕ್ಕೆ ತಾಲಿಬಾನಿಗಳಿಂದ ಕ್ರೂರ ಶಿಕ್ಷೆ.. ಆಗಸದಲ್ಲೇ ನೇಣಿಗೇರಿಸಿದ ಪಾಪಿಗಳು

ಅಮೆರಿಕ ಸೋಲಿಸಿದ್ದೇವೆ ಅಂದ ತಾಲಿಬಾನ್‌ ಮುಖಂಡ
ಈ ಗೆಲುವು ತಾಲಿಬಾನಿಗಳಿಗೆ ಸೇರಿದ್ದು ಅಂದ ಜಬಿಯುಲ್ಲಾ

ಅಮೆರಿಕ ಸೇನೆ ವಾಪಸ್ಆಗುತ್ತಿದ್ದಂತೆ ತಾಲಿಬಾನ್ ಮುಖಂಡರು ಸ್ವಾತಂತ್ರ್ಯ ಘೋಷಣೆ ಮಾಡಿಕೊಂಡಿದ್ದಾರೆ. ಅದರಲ್ಲಿಯೂ ತಾಲಿಬಾನ್‌ ವಕ್ತಾರ ಜಬಿಯುಲ್ಲಾ ಮುಜಾಹಿದ್‌ ಮಾತನಾಡಿ, ಕಾಬೂಲ್‌ನಿಂದ ಅಮೆರಿಕ ಸೇನಾ ಪಡೆ ವಾಪಸ್‌ಹೋಗಿದೆ. ಇದು ನಮಗೆ ಸ್ವಾತಂತ್ರ್ಯ ಸಿಕ್ಕಿದಂತಾಗಿದೆ. ಅಮೆರಿಕ ತನ್ನ ಗುರಿ ಸಾಧಿಸಲು ಸಾಧ್ಯವಾಗಲಿಲ್ಲ. ನಮ್ಮೊಂದಿಗೆ ಅವರು ಸೋತಿದ್ದಾರೆ. ಈ ಗೆಲುವು ತಾಲಿಬಾನ್‌ ಗಳದ್ದಾಗಿದೆ. ಆದಾಗ್ಯೋ ಅಮೆರಿಕ ಜೊತೆ ನಾವು ಉತ್ತಮ ಸಂಬಂಧ ಹೊಂದಲು ಬಯಸುತ್ತೇವೆ ಅಂತ ತಿಳಿಸಿದ್ದಾನೆ.

ತಾಲಿಬಾನ್‌ ವಶಕ್ಕೆ ಸಿಗದ ಏಕೈಕ ಪ್ರಾಂತ್ಯ ಪಂಜ್‌ಶೀರ್‌
ಪಂಜ್‌ಶೀರ್‌ ವಶಕ್ಕೆ ಹೋರಾಟ ಆರಂಭಿಸಿರೋ ತಾಲಿಬಾನ್

blank

ಇಷ್ಟು ದಿನಗಳ ಕಾಲ ಅಮೆರಿಕ ವಶದಲ್ಲಿದ್ದ ಕಾಬೂಲ್ ವಿಮಾನ ನಿಲ್ದಾಣ ಕೂಡ ತಾಲಿಬಾನ್ ಉಗ್ರರ ಕೈಸೇರಿದೆ. ಹೀಗಾಗಿ ಇಡೀ ಅಫ್ಘಾನ್​ನಲ್ಲಿ ತಾಲಿಬಾನ್ ಉಗ್ರರ ಕೈಸೇರದ ಪ್ರದೇಶ ಅಂದ್ರೆ ಅದು ಪಂಜ್‌ಶೀರ್‌ ಪ್ರದೇಶ ಮಾತ್ರ. ಇಲ್ಲಿಯ ಜನ ತಾಲಿಬಾನ್ ಉಗ್ರರಿಗೆ ಸೆಡ್ಡು ಹೊಡೆದು ನಿಂತಿದ್ದಾರೆ. ಆದ್ರೆ, ತಾಲಿಬಾನ್ ಉಗ್ರರು ಅಗತ್ಯ ಸರಬರಾಜಿಗೆ ರಸ್ತೆ ಬಂದ್‌ ಮಾಡುವ ಮೂಲಕ, ಇಂಟರ್ನೆಟ್‌ ಬಂದ್‌ ಮಾಡೋ ಮೂಲಕ ಪಂಜ್‌ಶೀರ್‌ ಪ್ರದೇಶ ವಶಕ್ಕೆ ಯತ್ನಿಸುತ್ತಿದ್ದಾರೆ. ಅಷ್ಟೇ ಅಲ್ಲ, ಶಸ್ತ್ರ ಸಜ್ಜಿತ ತಾಲಿಬಾನ್ ಉಗ್ರರನ್ನು ನುಗ್ಗಿಸುತ್ತಿದ್ದಾರೆ. ಕಣಿವೆ ಪ್ರದೇಶದ ಪಂಜ್‌ಶೀರ್‌ ಯೋಧರು ತಕ್ಕ ಉತ್ತರ ನೀಡುತ್ತಿದ್ದಾರೆ. ಮುಂದೆ ಅನಾಗಬಹುದು ಅನ್ನೋ ಕುತೂಹಲ ಹೆಚ್ಚಿಸಿದೆ.

ಇದನ್ನೂ ಓದಿ:ಆಹಾರವಿಲ್ಲ, ನೀರೂ ಇಲ್ಲ; ಕಾಬೂಲ್​ನಲ್ಲಿ ಸೇನಾ ಶ್ವಾನಗಳನ್ನ ಪಂಜರದಲ್ಲಿಟ್ಟು ಹೋದ ಅಮೆರಿಕನ್ ಸೈನಿಕರು

ಯುದ್ಧೋಪಾದಿ ಉತ್ಸಾಹದಲ್ಲಿ ಅಫ್ಘಾನ್‌ಗೆ ನುಗ್ಗಿದ ಅಮೆರಿಕ ಸೇನೆ ಸೋತು ಸುಣ್ಣವಾಗಿದೆ. ಒಂದು ಬಲಿಷ್ಠ ರಾಷ್ಟ್ರವಾಗಿ ಈ ರೀತಿ ಮಾಡಿರೋದು ಸಮಂಜಸವಲ್ಲ ಅನ್ನೋ ಟೀಕೆ ವ್ಯಕ್ತವಾಗುತ್ತಿದೆ. ಇನ್ನು ಉಗ್ರರ ಕಪಿಮುಷ್ಟಿಗೆ ಸಿಲುಕಿರೋ ಅಫ್ಘಾನ್‌ ಮುಂದಿನ ಕಥೆ ಏನು ಅನ್ನೋದೆ ಚಿಂತಾಜನಕವಾಗಿ ಬಿಟ್ಟಿದೆ.

Source: newsfirstlive.com Source link