‘ಸರಸು’ ಧಾರಾವಾಹಿ ತಂಡದಿಂದ ಅಭಿಮಾನಿಗಳಿಗೆ ಬಂತು ಶಾಕಿಂಗ್​ ಸುದ್ದಿ..!

‘ಸರಸು’ ಧಾರಾವಾಹಿ ತಂಡದಿಂದ ಅಭಿಮಾನಿಗಳಿಗೆ ಬಂತು ಶಾಕಿಂಗ್​ ಸುದ್ದಿ..!

ನವೆಂಬರ್​ನಲ್ಲಿ ಪ್ರೇಕ್ಷಕರ ಮನೆಗೆ ಲಗ್ಗೆ ಇಟ್ಟಿದ್ದ ಸರಸು ಧಾರಾವಾಹಿ ಮೊನ್ನೆಯಷ್ಟೇ 200 ಎಪಿಸೋಡ್​ಗಳನ್ನ ಕಂಪ್ಲೀಟ್​ ಮಾಡಿದ ಖುಷಿಯಲ್ಲಿತ್ತು. ಆದರೆ ಈಗ ಸರಸು ಟೀಮ್​ನಿಂದ ಶಾಕಿಂಗ್​ ಸುದ್ದಿಯೊಂದು ಹೊರಬಂದಿದೆ.

ಇದನ್ನೂ ಓದಿ: ಅಪ್ಪ ಯಾರು ಅನ್ನೋದೇ ಗೊತ್ತಿಲ್ಲ, ಸಾಯೋ ಮುಂಚೆ ಅಪ್ಪ ಅಂತ ಕರೀಬೇಕು -ಕಣ್ಣೀರಿಟ್ಟ ವೈಷ್ಣವಿ

ಸ್ಕಂದ ಅಶೋಕ್​ ಹಾಗೂ ಸುಪ್ರೀತಾ ನಾರಾಯಣ್​ ಲೀಡ್​ ರೋಲ್​ನಲ್ಲಿದ್ದ ಸರಸು ಧಾರಾವಾಹಿ ಕಾರಣಾಂತರಗಳಿಂದ ಮುಕ್ತಾಯಗೊಂಡಿದ್ದು, ಈ ಬಗ್ಗೆ ಸ್ಕಂದ ಹಾಗೂ ಸುಪ್ರೀತಾ ತಮ್ಮ ಸೋಷಿಯಲ್​ ಮಿಡಿಯಾ ಪೇಜ್​ಗಳಲ್ಲಿ ಹಂಚಿಕೊಂಡು ಬೇಸರ ವ್ಯಕ್ತಪಡೆಸಿದ್ದಾರೆ.

ಇದನ್ನೂ ಓದಿ: ‘ಹಿಟ್ಲರ್​ ಕಲ್ಯಾಣ’ ಸೀರಿಯಲ್​ನ ದೇವ್​ ಯಾರು ಗೊತ್ತಾ..?

ಹೌದು, ಸರಸು ಎಂಬ ಹುಡುಗಿಯ ಸುತ್ತ ನಡೆಯುವ ಕಥೆಯಲ್ಲಿ ಲವ್​, ಫ್ಯಾಮೀಲಿ ಸೆಂಟಿಮೆಂಟ್​, ತಾಯಿ ಮಗನ ಬಾಂಧವ್ಯ ಹೀಗೆ ಎಲ್ಲಾ ರೀತಿಯ ಮಸಾಲ ಇತ್ತು. ಮುಖ್ಯವಾಗಿ ವೀಣಾ ಸುಂದರ್​, ಅಭಿಜೀತ್​ ಹೀಗೆ ದೊಡ್ಡ ಕಲಾವಿದರ ಬಳಗ ಹೊಂದಿದ್ದ ಸರಸು ಪ್ರೇಕ್ಷಕರ ಪ್ರೀತಿಗೂ ಕೂಡ ಪಾತ್ರವಾಗಿತ್ತು.

ಇದನ್ನೂ ಓದಿ: ಮುಗ್ಧೆಯಾಗಿ ‘ಹಿಟ್ಲರ್​ ಕಲ್ಯಾಣ’ಗೆ ಎಂಟ್ರಿ ಕೊಟ್ಟ ಸೌಮ್ಯಾ ಭಟ್​..!

ಕಿರುತೆರೆಯಲ್ಲಿ ಸಾಕಷ್ಟು ಕಾಂಪಿಟೇಷನ್​ ಇದ್ದು, ರೇಟಿಂಗ್​ ಲೆಕ್ಕದಲ್ಲಿ ಸರಸು ಸೀರಿಯಲ್​ ಆಮೆಗತಿಯಲ್ಲಿ ಇತ್ತು. ಈ ಹಿಂದೆ ಲಾಕ್​ಡೌನ್​ ಟೈಮ್​ನಲ್ಲಿ ಬ್ಯಾಂಕಿಂಗ್​ ಕಡಿಮೆ ಇದ್ದ ಕಾರಣ ಸರಸು ಧಾರಾವಾಹಿಯನ್ನ ಅರ್ದಕ್ಕೆ ನಿಲ್ಲಿಸಲಾಗಿತ್ತು. ಮತ್ತೆ ಸುಧಾರಿಸಿಕೊಂಡು ಸಾಗುತ್ತಿದ್ದ ಸರಸು ಟಿಆರ್​ಪಿ ಲೆಕ್ಕಾಚಾರದಲ್ಲಿ ಗೆಲ್ಲುವಲ್ಲಿ ವಿಫಲವಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಇದೇ ಕಾರಣಕ್ಕಾಗಿ ಅಗಸ್ಟ್​ 28 ರಂದು ಸೀರಿಯಲ್​ನ್ನ ವೈಂಡ್​ಅಪ್​ ಮಾಡಲಾಗಿದೆ ಎನ್ನಲಾಗ್ತಿದೆ.

ಒಟ್ನಲ್ಲಿ ಇಷ್ಟು ದಿನ ವೀಕ್ಷಕರ ಮನೆ ಮಾತಾಗಿದ್ದ ಸ್ಕಂದ ಈಗಾಗಲೇ ಹೊಸ ಪ್ರಾಜಕ್ಟ್​ ಸತ್ಯಾ ಟೀಮ್​ಗೆ ಎಂಟ್ರಿ ಕೊಟ್ಟಿದ್ದು, ಈ ಬಗ್ಗೆ ಈಗಾಗಲೇ ನಾವು ಮಾಹಿತಿ ನೀಡಿದ್ವಿ. ಇನ್ನೂ ಸುಪ್ರೀತಾ ಹಾಗೂ ಸರಸು ತಂಡದ ಮುಂದಿನ ಪ್ರಾಜಕ್ಟ್​ಗೆ ಆಲ್​ ದಿ ಬೆಸ್ಟ್​.

ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿಗೆ ರಾಧೆ ಶ್ಯಾಮ ಟೈಟಲ್​ ಟ್ರ್ಯಾಕ್​ ಗಿಫ್ಟ್..​!

Source: newsfirstlive.com Source link