ಸದ್ದಿಲ್ಲದೇ ಕರಾವಳಿಯಲ್ಲಿ ಬಾಲ ಬಿಚ್ಚಿದ್ರಾ ಉಗ್ರರು? ಏನ್ ನಡೀತಿದೆ ಕರಾಳಿ ಜಿಲ್ಲೆಯಲ್ಲಿ?

ಸದ್ದಿಲ್ಲದೇ ಕರಾವಳಿಯಲ್ಲಿ ಬಾಲ ಬಿಚ್ಚಿದ್ರಾ ಉಗ್ರರು? ಏನ್ ನಡೀತಿದೆ ಕರಾಳಿ ಜಿಲ್ಲೆಯಲ್ಲಿ?

ಅತ್ತ ಅಫ್ಘಾನ್​​ನಲ್ಲಿ ತಾಲಿಬಾನಿಗಳ ಅಟ್ಟಹಾಸ ಜೋರಾಗಿದ್ದರೆ, ಇತ್ತ ಸದ್ದಿಲ್ಲದೆ ಇನ್ನುಳಿದ ಉಗ್ರ ಸಂಘಟನೆಗಳು ಆಕ್ಟೀವ್ ಆಗ್ತಾಯಿದೆ. ಕರಾವಳಿ ಭಾಗದಲ್ಲಿ ಭಯೋತ್ಪಾದಕರು ಮತ್ತೆ ಬಾಲ ಬಿಚ್ಚಿದ್ರಾ ಅನ್ನೋ ಅನುಮಾನ ಮೂಡಿದೆ. ಅದಕ್ಕೆ ಪುಷ್ಠಿ ನೀಡುವಂತೆ ಈಗಾಗಲೇ ಭಾರತಕ್ಕೆ ಎಚ್ಚರಿಕೆಯನ್ನೂ ಸಹ ನೀಡಲಾಗಿದೆ. ಹಾಗಾದ್ರೆ, ಕರಾವಳಿ ಭಾಗದಲ್ಲಿ ಕಂಟಕಪ್ರಾಯರು ನುಸುಳಿದ್ದಾರಾ? ಸ್ಲೀಪರ್ ಸೆಲ್​ಗಳು ಆಕ್ಟೀವ್ ಆಗಿದ್ಯಾ? ಹೈ ಅಲರ್ಟ್ ಅನಿವಾರ್ಯವೇಕೆ?

blank

ಇದನ್ನೂ ಓದಿ: ಭಾರತದ ರಾಯಭಾರಿ ಭೇಟಿಯಾದ ತಾಲಿಬಾನ್​​​ ನಾಯಕ; ಸ್ಟಾನಿಕ್‌ಜೈ ಇಲ್ಲಿಗೂ ಏನು ನಂಟು ಗೊತ್ತಾ..?

ಕರಾವಳಿ ಅಂದಾಗ ನೆನಪಿಗೆ ಬರೋದೇ ಭೋರ್ಗರೆದು ಬರುವ ಅಲೆಗಳು. ಮುಳುಗುತ್ತಿರುವ ಸೂರ್ಯನು ತನ್ನ ಕಾಯಕ ಮುಗಿಸಿ ಮರಳುವಾಗ ಕಿನಾರೆ ದಂಡೆಯ ಮೇಲೆ ಕುಳಿತಿರುವ ಜನರಿಗೆ ಹೊಸತರಹದ ಆನಂದ ಕೊಡ್ತವೆ. ಇಂತಹ ಪ್ರಶಾಂತವಾದ ವಾತಾವರಣದಲ್ಲಿ ಆಗೊಮ್ಮೆ ಈಗೊಮ್ಮೆ, ಜೋರಾಗಿ ಸೈರನ್ ಹೊಡೆದುಕೊಂಡು ಕಡಲ ಬೋಟ್​ಗಳು ಅತ್ತಿಂದ ಇತ್ತ, ಇತ್ತಿಂದ ಅತ್ತ ಪಾಸ್ ಆಗುತ್ತಿರುತ್ತೆ. ದೂರದ ದೇಶಗಳಿಂದ ಸರಕುಗಳನ್ನ ಹೊತ್ತು ಸಾಗುವ ದೊಡ್ಡ ದೊಡ್ಡ ಬೋಟ್​ಗಳ ದೃಶ್ಯಗಳು ಕಾಣ ಸಿಗುತ್ತಿರುತ್ತವೆ. ಇದೆಲ್ಲದಕ್ಕಿಂತ ಮಿಗಿಲಾಗಿ ಅಲ್ಲಲ್ಲಿ ಮೀನುಗಳನ್ನ ಹಿಡಿಯುವ ದೋಣಿಗಳನ್ನ ಸಹ ನೋಡಬಹುದು. ಇಂತಹ ಜಾಗದಲ್ಲಿಯೇ ಮೀನಿನಂತೆ ಉಗ್ರರು ಕೂಡ ನುಸುಳಿ ಬಿಡ್ತಾರೆ. 2008ರ ಮುಂಬೈ ತಾಜ್​ ಹೋಟೆಲ್​ನಲ್ಲಿ ಬಾಂಬ್ ಸ್ಫೋಟ ಮಾಡಿದ್ದ ಅಜ್ಮಲ್ ಕಸಬ್ ಕೂಡ ಮುಂಬೈ ಕರಾವಳಿಯ ಮೂಲಕವೇ ಎಂಟ್ರಿ ಕೊಟ್ಟಿದ್ದ. ಇದೀಗ ಲಂಕಾದ ಶಂಕಿತ ಉಗ್ರರ ಗುಂಪೊಂದು ದೇಶದ ಕರಾವಳಿ ಮೂಲಕ ಎಂಟ್ರಿ ಕೊಟ್ಟಿರುವ ಕುರಿತು ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದು, ಕರಾವಳಿಯಾದ್ಯಂತ ಹೈ-ಅಲರ್ಟ್ ಘೋಷಣೆ ಮಾಡಲಾಗಿದೆ.

ಶ್ರೀಲಂಕಾ ಬಾಂಬ್ ಸ್ಫೋಟ ಬಳಿಕ ಬಾಲ ಬಿಚ್ಚಿದ ಉಗ್ರರು
ಕೊಲಂಬೋದಿಂದ ಕರಾಚಿಗೆ ಹಾರುತ್ತಿರುವ ಭಯೋತ್ಪಾದಕರು?

2019ರಲ್ಲಿ ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟದಲ್ಲಿ ರಾಜ್ಯದ ಎಂಟು ಜನರು ಸೇರಿದಂತೆ ನೂರಾರು ಜನರು ಉಸಿರು ಚೆಲ್ಲಿದ್ರು. ಈ ದಾಳಿಯು ಲಂಕಾದಲ್ಲಿ ಹಲವು ಯುವಕರ ಮನದಲ್ಲಿ ಉಗ್ರ ಮನಸ್ಥಿತಿಯ ಬೀಜವು ಮೊಳಕೆಯೊಡೆಯುವಂತೆ ಮಾಡಿತ್ತು. ಪರಿಣಾಮ ಹಲವು ಯುವಕರು ಲಂಕಾದ ಕೊಲಂಬೋದಿಂದ ಪಾಕಿಸ್ತಾನದ ಕರಾಚಿಗೆ ಹಾರಿ, ಅಲ್ಲಿ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತೊದ್ದಾರೆ.

ತಮಿಳುನಾಡು ತಲುಪಿದ 12 ಜನರ ಶಂಕಿತರ ಗ್ಯಾಂಗ್
ಮೀನುಗಾರಿಕಾ ದೋಣಿಗಳ ಮೂಲಕ ತಮಿಳುನಾಡು ಎಂಟ್ರಿ

ಲಂಕಾದಲ್ಲಿ ನೆಲೆವೂರಿದ್ದ ಉಗ್ರ ಚಟುವಟಿಕೆಗಳಿಗೆ ಕೆಲ ತಿಂಗಳುಗಳ ಕಾಲ ಬ್ರೇಕ್ ಬಿದ್ದಿತ್ತು. ಆದ್ರೆ ಯಾವಾಗ ಅಫ್ಘಾನ್​ನಲ್ಲಿ ತಾಲಿಬಾನ್​ ಉಗ್ರರ ಕೈ ಮೇಲಾಗುತ್ತೊ, ಲಂಕಾದಲ್ಲಿ ಚದುರಿಹೋಗಿದ್ದ ಉಗ್ರರು ಮತ್ತೆ ಚಿಗುರಿಕೊಂಡಿದ್ದಾರೆ. ಹಂತ ಹಂತವಾಗಿ ಲಂಕಾದಿಂದ ಯುವಕರು ಪಾಕಿಸ್ತಾನದ ಕಡೆ ಮುಖ ಮಾಡುತ್ತಿದ್ದಾರೆ. ಅದರ ಮುಂದವರೆದ ಭಾಗ ಎಂಬಂತೆ, ಶ್ರೀಲಂಕಾದ ಪೆಸಲಾಯ್ ಹಾಗು ವೆಥಲಾಯ್ ಪ್ರದೇಶದಿಂದ 12 ಜನ ಶಂಕಿತರು, ಮೂರು ತಂಡಗಳಾಗಿ ಮೀನುಗಾರಿಕಾ ದೋಣಿಗಳ ಮೂಲಕ ತಮಿಳು ನಾಡು ಪ್ರವೇಶಿಸಿರುವ ಕುರಿತು ಭಾರತೀಯ ಗುಪ್ತಚರ ಇಲಾಖೆಗೆ ಮಾಹಿತಿ ಸಿಕ್ಕಿದೆ. ಈ ಶಂಕಿತರು ಮುಂದೆ ಕೇರಳ ಹಾಗೂ ಕರ್ನಾಟಕದ ಕರಾವಳಿ ಭಾಗಕ್ಕೆ ಎಂಟ್ರಿ ಕೊಡುವ ಸಾಧ್ಯತೆ ಇರುವ ಕಾರಣ ಕರಾವಳಿಯಾದ್ಯಂತ ಹೈ-ಅಲರ್ಟ್​ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: ಕತಾರ್​​​ನಲ್ಲಿ ಭಾರತದ ರಾಯಭಾರಿ ಡಾ. ದೀಪಕ್ ಮಿತ್ತಲ್ ಭೇಟಿಯಾದ ತಾಲಿಬಾನ್​​​ ನಾಯಕ ಸ್ಟಾನಿಕ್‌ಜೈ

blank

ಕರಾವಳಿಯಲ್ಲಿ ಹೈ-ಅಲರ್ಟ್​​​
ತಮಿಳುನಾಡಿನಿಂದ ಕೇರಳಕ್ಕೆ ತಲುಪಿರುವ ಶಂಕಿತರು
ಪಾಕಿಸ್ತಾನಕ್ಕೆ ತೆರಳಲು ಕರಾವಳಿ ಭಾಗಕ್ಕೆ ಬಂದಿರುವ ಉಗ್ರರು

ಶ್ರೀಲಂಕಾದ ಪೆಸಲಾಯ್ ಹಾಗು ವೆಥಲಾಯ್ ಪ್ರದೇಶದಿಂದ 12 ಜನ ಶಂಕಿತರ ಗ್ಯಾಂಗ್,ಮೀನುಗಾರಿಕ ದೋಣಿಯ ಮೂಲಕ ತಮಿಳುನಾಡಿಗೆ ಎಂಟ್ರಿ ಕೊಟ್ಟಿದೆ. ಅಲ್ಲಿಂದ ಈ ಶಂಕಿತರ ಗ್ಯಾಂಗ್ ಕೇರಳ ಅಥವಾ ಕರಾವಳಿ ಭಾಗಕ್ಕೆ ಎಂಟ್ರಿ ಕೊಡುವ ಸಾಧ್ಯತೆ ಇದೆ. ಪಾಕಿಸ್ತಾನಕ್ಕೆ ಹಾರಲು ಸಿದ್ಧವಾಗಿರುವ ಈ ಗ್ಯಾಂಗ್ ಕೇರಳ ಅಥವಾ ರಾಜ್ಯದ ಕರವಾಳಿ ತಲುಪಿ, ನಂತರ ಸಮುದ್ರ ಮಾರ್ಗದ ಮೂಲಕವೇ ಪಾಕಿಸ್ತಾನಕ್ಕೆ ಹೋಗುವ ಪ್ಲಾನ್ ಹಾಕ್ಕೊಂಡಿದ್ದಾರೆ. ಇದೇ ಕಾರಣಕ್ಕೆ ಕೇರಳ ಹಾಗೂ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಹೈ ಅಲರ್ಟ್​​ ಘೋಷಣೇ ಮಾಡಲಾಗಿದೆ. ಈ ಕುರಿತು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಕೇರಳದ ಅಲಪ್ಪುಳ ಬಂದರು ಅಥವಾ ಕರ್ನಾಟಕ ಕರಾವಳಿಯ ಬಂದರು ಮೂಲಕ ಮೀನುಗಾರಿಕಾ ಬೋಟ್ ನಲ್ಲಿ ಶಂಕಿತರು ಇಂಟರ್ ನ್ಯಾಷನಲ್ ವಾಟರ್ ಗೆ ತೆರಳುವ ಮಾಹಿತಿ ಇದೆ. ಅಲ್ಲಿಂದ್ದ ಉಗ್ರರನ್ನ ಬರಮಾಡಿಕೊಂಡು ಪಾಕಿಸ್ತಾನದ ಕರಾಚಿ ಬಂದರ್ ಗೆ ಕೊಂಡೊಯ್ಯಲು ಇಂಟರ್ ನ್ಯಾಷನಲ್ ವಾಟರ್ ನಲ್ಲಿ ಈಗಾಗಲೆ ಪಾಕ್ ಬೋಟ್​ ಕೂಡ ಸಜ್ಜಾಗಿ ನಿಂತಿರುವ ಕುರಿತು ಗುಪ್ತಚರ ಇಲಾಖೆ ಮಾಹಿತಿ ರವಾನೆ ಮಾಡಿದೆ. ಇದೇ ಕಾರಣಕ್ಕೆ ಕರಾವಳಿ ಭಾಗದಲ್ಲಿ ಅಲರ್ಟ್​ ಆಗಿರುವಂತೆ ಸೂಚನೆ ನೀಡಲಾಗಿದೆ.

ಉಗ್ರರ ನುಸುಳವಿಕೆಯ ಕಾರಣ, ಕರಾವಳಿ ಭಾಗದಲ್ಲಿ ಹದ್ದಿನ ಕಣ್ಣಿಡುವಂತೆ, ಕೋಸ್ಟಲ್ ಗಾರ್ಡ್​ ಕರಾವಳಿ ಕಾವಲು ಪಡೆಗೆ ಸೂಚನೆ ನೀಡಲಾಗಿದೆ. ಕರಾವಳಿ ಕಾವಲು ಪಡೆಯ ಅಧಿಕಾರಿಗಳು ಕಡಲ ತಡಿಯಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಟ್ಟಿದ್ದು, ಕಡಲ ತೀರದ ಚಟುವಟಿಕೆ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.

ಇದನ್ನೂ ಓದಿ: ಪಂಜ್​​ಶೀರ್​​ ಮೇಲೆ ದಾಳಿ; 9-10 ತಾಲಿಬಾನ್​​ ಉಗ್ರರನ್ನು ಹತ್ಯೆಗೈದ ವಿರೋಧಿ ಪಡೆ

blank

ಶಂಕಿತರಿಗಾಗಿ ಕರಾವಳಿಯಲ್ಲಿ ತಲಾಶ್​
ಶಂಕಿತರ ಕಳ್ಳ ಹೆಜ್ಜೆ ಹಿನ್ನೆಲೆ ಕರಾವಳಿ ಭಾಗದಲ್ಲಿ ಕೋಸ್ಟ್ ಗಾರ್ಡ್ ಹಾಗು ಕರಾವಳಿ ಕಾವಲು ಪಡೆ ಗಸ್ತು ತಿರುಗುತ್ತಿದೆ. ಶಂಕಿತ ಉಗ್ರರು ಸ್ಥಳೀಯ ಮೀನುಗಾರರ ಸೋಗಿನಲ್ಲಿ ಎಂಟ್ರಿ ಕೊಡುವ ಸಾಧ್ಯತೆ ಹೆಚ್ಚಿರುವುದರಿಂದ, ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡುವಂತೆ ಸ್ಥಳೀಯ ಮೀನುಗಾರರಿಗೆ ಕೋಸ್ಟರ್​ ಅಧಿಕಾರಿಗಳು ತಿಳಿಸಿದ್ದಾರೆ. ಶಂಕಿತರು ಏನಾದ್ರು ಕರಾವಳಿ ಏರಿಯಾಗಳಲ್ಲಿ ತಂಗಿರುವ ಸಾಧ್ಯತೆ ಇದ್ದು, ಇದೇ ಕಾರಣಕ್ಕೆ ಕರಾವಳಿ ಭಾಗದ ಹೋಂ ಸ್ಟೆ, ರೆಸಾರ್ಟ್, ಲಾಡ್ಜ್ ಗಳಲ್ಲಿ ಕೇರಳ ಹಾಗು ಕರ್ನಾಟಕದ ಕರಾವಳಿ ಕಾವಲು ಪಡೆಯ ಪೊಲೀಸರು ಶಂಕಿತ ಉಗ್ರರಿಗಾಗಿ ತಲಾಷ್ ನಡೆಸುತ್ತಿದ್ದಾರೆ. ಶಂಕಿತರ ಗ್ಯಾಂಗ್, ಸೀ ರೂಟ್ ಬಳಸಿ ಭಾರತದ ಕರಾವಳಿ ಮೂಲಕ ಒಳ ಪ್ರವೇಶಿಸಿ ,ತಮಿಳುನಾಡಿನಿಂದ ಕೇರಳ ಅಥವಾ ರಾಜ್ಯದ ಕರಾವಳಿ ಭಾಗದ ಮೂಲಕ ಪಾಕ್​ಗೆ ಹೋಗಲು ಪ್ಲಾನ್ ಹಾಕ್ಕೊಂಡಿದ್ದಾರೆ ಎನ್ನಲಾಗಿದೆ.

ದಕ್ಷಿಣ ಭಾರತದ ಸ್ಲೀಪರ್ ಸೆಲ್​​​​ಗಳನ್ನು ಬಳಸುವ ಸಾಧ್ಯತೆ
ಸ್ಲೀಪರ್ ಸೆಲ್ಸ್​ ಌಕ್ಟೀವ್ ಮಾಡಿರುವ ಭಯೋತ್ಪಾದಕರು

ಯಾವಾಗ ಅಫ್ಘಾನ್ನಲ್ಲಿ ಉಗ್ರರ ಕೈ ಮೇಲಾಗತೊಡಗಿತೋ , ಅವಾಗ್ಲೆ ಇತರೆ ಸಣ್ಣ ಪುಟ್ಟ ಉಗ್ರ ಸಂಘಟನೆಗಳಿಗೂ ರೆಕ್ಕೆ ಪುಕ್ಕ ಬಂದತ್ತಾಗಿದೆ. ಇದೇ ಕಾರಣಕ್ಕೆ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಸಂಘಟನೆಯ ಮುಖಂಡರು, ಕೇರಳ ಸೇರಿದಂತೆ ಕರ್ನಾಟಕ ಕರಾವಳಿಯಲ್ಲಿ ಸ್ಲೀಪರ್ ಸೆಲ್ ಗಳನ್ನು ಆಕ್ಟಿವ್ ಮಾಡಿರುವ ಸಾಧ್ಯತೆ ಇದೆ. ಇದೇ ಸ್ಲೀಪರ್​ ಸೆಲ್​ಗಳನ್ನ ಮುಂದಿಟ್ಟುಕೊಂಡು ಉಗ್ರರು ಮತ್ತಷ್ಟು ವಿಧ್ವಂಸಕ ಕೃತ್ಯ ಎಸಗಲು ಪ್ಲಾನ್ ಹಾಕ್ಕೊಂಡಿದ್ದಾರೆ ಎನ್ನಲಾಗಿದೆ.

ಯಾವ ಕ್ಷಣದಲ್ಲಿ ಬೇಕಾದ್ರೂ ಉಗ್ರರು ನುಸುಳುವ ಸಾಧ್ಯತೆ ಇರುವುದರಿಂದ ಕರಾವಳಿಯಲ್ಲಿ ಹದ್ದಿನ ಕಣ್ಣು ಇಡಲಾಗಿದೆ. ಈಗಾಗಲೇ ಕರಾವಳಿಯ ಕೆಲ ಯುವಕರಿಗೆ ಉಗ್ರರ ಲಿಂಕ್ ಕುರಿತು ಇತ್ತೀಚಿಗಷ್ಟೇ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಪಾಕ್​ ಉಗ್ರರ ನೆಟ್​ವರ್ಕ್​ ಹೊಂದಿದ್ದ ಕೆಲ ಉಗ್ರರು ಈ ಹಿಂದೆ ಭಟ್ಕಳದಲ್ಲಿ ನೆಲೆ ವೂರಿದ್ರೂ. ಇದೇ ಕಾರಣಕ್ಕೆ ಇದೀಗ ಕರಾವಳಿಯಲ್ಲಿ ಉಗ್ರ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ.

NIA ದಾಳಿ ಬಳಿಕ ಸ್ಯಾಟ್​​​​ಲೈಟ್ ಫೋನ್​​ಗಳು ಸೈಲೆಂಟ್
ಸ್ಯಾಟ್​​​​ಲೈಟ್ ಫೋನ್​ಗಳಿಗೆ ಇತ್ತು ಟೆರರ್ ಲಿಂಕ್

ನಿಷೇಧಿತ ಸ್ಯಾಟಲೈಟ್ ಫೋನ್​ಗಳನ್ನ ಬಳಸಿ ಭಟ್ಕಳ ಮೂಲದ ಉಗ್ರರು ಈ ಹಿಂದೆ ಟೆರರಿಸ್ಟ್​​ ನೆಟ್​ವರ್ಕ್​​ ಬೆಳೆಸುತ್ತಿದ್ದರು. ಸ್ಯಾಟ್​​​ಲೈಟ್ ಫೋನ್​ಗಳು ಕರಾವಳಿಯಲ್ಲಿ ಸದ್ದು ಮಾಡಿತ್ತು. ನಿಷೇಧಿತ ತುರಾಯಿ ಫೋನ್​​ಗಳು ಅರಣ್ಯ ಪ್ರದೇಶದಲ್ಲಿ ವರ್ಷಗಳ ಹಿಂದೆ ಸಕ್ರೀಯವಾಗಿರುವುದನ್ನ ಗುಪ್ತಚರ ಇಲಾಖೆಯ ಅಧಿಕಾರಿಗಳು ದೃಢಪಡಿಸಿದ್ರು. ವರ್ಷಗಳ ಹಿಂದೆ ದಕ್ಷಿಣ ಕನ್ನಡದ ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನ ಕೆಲ ಅರಣ್ಯ ಪ್ರದೇಶಗಳಲ್ಲಿ ಇದೇ ತುರಾಯಿ ಫೋನ್​ಗಳು ಆ್ಯಕ್ಟೀವ್ ಆಗಿತ್ತು. ಸ್ಯಾಟಲೈಟ್ ಫೋನ್ ಆ್ಯಕ್ಟೀವ್​​ ಆಗಿರುವುದಕ್ಕೂ ಟೆರರಿಸ್ಟ್​ಗಳು ಅಲೆರ್ಟ್​​ ಆಗಿರುವುದಕ್ಕೂ ಡೈರೆಕ್ಟ್ ಲಿಂಕ್ ಇರಬಹುದೆಂದು ಶಂಕೆ ವ್ಯಕ್ತಪಡಿಸಿದ್ರು. ಇದೇ ಕಾರಣಕ್ಕೆ ಇದೀಗ ಉಗ್ರ ಚಟುವಟಿಕೆಗಳ ಮೇಲೂ ಕಣ್ಗಾವಲು ಇಡಲಾಗಿದೆ.
ಒಟ್ಟಿನಲ್ಲಿ ಅಫ್ಘಾನ್ ತಾಲಿಬಾನ್​ ಉಗ್ರರ ವಶವಾಗಿರುವುದರಿಂದ ಇತರೆ ಸಣ್ಣ ಪುಟ್ಟ ಉಗ್ರ ಸಂಘಟನೆಗಳಿಗೂ ಇದೀಗ ರೆಕ್ಕೆ ಪುಕ್ಕ ಬಂದತ್ತಾಗಿದೆ. ಇದೇ ಕಾರಣಕ್ಕೆ ವಿವಿಧ ದೇಶಗಳಲ್ಲಿ ಕೂಡ ಉಗ್ರ ಚಟುವಟಿಕೆ ನಿಧಾನವಾಗಿ ಮೊಳಕೆಯೊಡೆಯುತ್ತಿದೆ. ಇದೀಗ ಲಂಕಾದಲ್ಲೂ ಉಗ್ರ ಸಂಘನೆಯ ಕಡೆ ಯುವಕರು ಒಲವು ತೋರುತ್ತಿದ್ದುರುವುದು ಪಾಕ್​​ಗೆ ಸಂತೋಷವಾದ್ರೆ, ಇತರೆ ದೇಶಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಇದನ್ನೂ ಓದಿ: ಅಮೆರಿಕ ಸೇನೆಗೆ ಸಹಾಯ ಮಾಡಿದ್ದಕ್ಕೆ ತಾಲಿಬಾನಿಗಳಿಂದ ಕ್ರೂರ ಶಿಕ್ಷೆ.. ಆಗಸದಲ್ಲೇ ನೇಣಿಗೇರಿಸಿದ ಪಾಪಿಗಳು

ಒಂದು ಕಡೆ ಪಾಕಿಸ್ತಾನ, ಮತ್ತೊಂದು ಕಡೆ ಅಫ್ಘಾನಿಸ್ತಾನ.. ಮಗದೊಂದು ಕಡೆ ಉಪಟಳ ನೀಡುತ್ತಿರುವ ಚೀನಾ. ಹೀಗೆ ನೆರೆಯ ರಾಷ್ಟ್ರಗಳ ಉಪಟಳದಿಂದ ಭಾರತಕ್ಕೆ ಈಗಾಗಲೇ ಹಲವು ಸವಾಲುಗಳು ಎದುರಾಗಿವೆ. ಒಂದು ವೇಳೆ ಶ್ರೀಲಂಕಾದಲ್ಲೂ ಕೂಡ ಉಗ್ರ ಮನಸ್ಥಿತಿ ಮತ್ತಷ್ಟು ವಿಸ್ತರಣೆಗೊಂಡ್ರೆ, ಭಾರತಕ್ಕೆ ಮತ್ತೊಂದು ತಲೆನೋವು ಎದುರಾಗುವುದು ಪಕ್ಕ. ಇದನ್ನ ಬೇರು ಸಮೇತ ಕಿತ್ತು ಹಾಕದಿದ್ರೆ ಮತ್ತೊಂದು ಅಪಾಯ ಮಾತ್ರ ಕಟ್ಟಿಟ್ಟ ಬುತ್ತಿ.

ಇದನ್ನೂ ಓದಿ:ಆಹಾರವಿಲ್ಲ, ನೀರೂ ಇಲ್ಲ; ಕಾಬೂಲ್​ನಲ್ಲಿ ಸೇನಾ ಶ್ವಾನಗಳನ್ನ ಪಂಜರದಲ್ಲಿಟ್ಟು ಹೋದ ಅಮೆರಿಕನ್ ಸೈನಿಕರು

Source: newsfirstlive.com Source link