ರಾಧೆ ಶ್ಯಾಮ ಧಾರಾವಾಹಿಯ ರಾಧೆ ಯಾರು ಗೊತ್ತಾ..?

ರಾಧೆ ಶ್ಯಾಮ ಧಾರಾವಾಹಿಯ ರಾಧೆ ಯಾರು ಗೊತ್ತಾ..?

ಹೊಸ ಧಾರಾವಾಹಿ ರಾಧೆ ಶ್ಯಾಮ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲು ಸಜ್ಜಾಗಿದೆ. ಈ ಧಾರಾವಾಹಿಯ ಬ್ಯೂಟಿಫುಲ್​ ಟೈಟಲ್​ ಟ್ರ್ಯಾಕ್​ ನಿನ್ನೆಯಷ್ಟೆ ರಿಲೀಸ್​ ಆಗಿದ್ದು, ಕೃಷ್ಣ ಜನ್ಮಾಷ್ಟಮಿಗೆ ಒಂದೊಳ್ಳೆಯ ಗಿಫ್ಟ್​ ಸಿಕ್ಕಿದೆ.

ಟೈಟಲ್​ ಸಾಂಗ್​ ಮೂಲಕ ಸದ್ದು ಮಾಡುತ್ತಿರುವ ರಾಧೆ ಶ್ಯಾಮನ ಕಥಾ ನಾಯಕಿ ರಾಧೆ ಮುದ್ದು ಮುಖದ ತನ್ವಿ ರಾವ್​.. ತನ್ವಿ ರಾವ್​ ಈ ಮುಂಚೆ ಆಕೃತಿ ಧಾರಾವಾಹಿಯಲ್ಲಿ ಲೀಡ್​ ರೋಲ್​ನಲ್ಲಿ ಕಾಣಿಸಿಕೊಂಡಿದ್ರು. ಅಲ್ಲಿ ದಿವ್ಯಾ ಎಂಬ ಮುಗ್ಧ ಹುಡುಗಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದರು ತನ್ವಿ.. ಅಕೃತಿ ಸೀರಿಯಲ್​ ಬೇಗನೆ ವೈಂಡಪ್​ ಆಯ್ತು.. ಬಳಿಕ ಕನ್ನಡದಲ್ಲಿ ಯಾವುದೆ ಪ್ರಾಜೆಕ್ಟ್​ಗಳಿಗೆ ಗ್ರೀನ್​ ಸಿಗ್ನಲ್​ ಕೊಡದೆ ಸದ್ಯ ರಾಧೆಯಾಗಿ ತನ್ವಿ ಮಿಂಚಲು ರೆಡಿಯಾಗಿದ್ದಾಳೆ..

blank

ತನ್ವಿ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದ್ದು, ರಾಧೆಯೊಬ್ಬಳು ದಿಟ್ಟ ಹೆಣ್ಣು ಮಗಳು.. ಅವಳು ಸಮಾಜಕ್ಕಾಗಿ ಸೇವೆ ಮಾಡುವಂತ ಹುಡುಗಿ, ಎಂತ ಸಂದರ್ಭವನ್ನು ಲೆಕ್ಕಿಸದೆ, ನ್ಯಾಯಕ್ಕಾಗಿ ನಿಲ್ಲಿವು ಸ್ಟ್ರಾಂಗ್​ ಹುಡುಗಿ. ಎಲ್ಲಿ ಕರ್ಪಷನ್​ ನೆಡೆಯುತ್ತೊ ಅಲ್ಲಿ ರಾಧೆ ಹಾಜರ್​..

ಇಂತಹ ರಾಧೆ ಮದುವೆಯಾದ ಬಳಿಕ ಅವಳ ಜೀವನ ಒಂದು ದೊಡ್ಡ ತಿರುವು ಪಡೆದುಕೊಳ್ಳುತ್ತದೆ. ಗಂಡ ಆದವನು, ತಾನು ತನ್ನ ಫ್ಯಾಮಿಲಿ ಹಾಗೂ ತನ್ನ ಬ್ಯುಸ್​ನೆಸ್​ ಅಂತಾ ಇರುವ ಹುಡುಗ, ತನ್ನವರನ್ನು ಬಿಟ್ಟು ಬೇರೆಲ್ಲು ತಲೆ ಹಾಕಲ್ಲ.. ರಾಧೆಯ ಕಂಪ್ಲೀಟ್​ ಅಪೋಸಿಟ್​ ಗುಣದವನು.. ಇದು ಧಾರಾವಾಹಿಯ ಮುಖ್ಯ ತಿರಿವು..

blank

ಇದೊಂದು ಪಕ್ಕಾ ಪ್ಯಾಮಿಲಿ ಡ್ರಾಮ ಸೀರಿಯಲ್​ ಆಗಿದ್ದು, ಸದ್ಯ ರಾಧೆಶ್ಯಾಮ ತಂಡ ಶೂಟಿಂಗ್​ನಲ್ಲಿ ಬ್ಯುಸಿಯಾಗಿದೆ. ಸೆಪ್ಟೆಂಬರ್​ 6 ರಿಂದ ರಾಧೆ ಶ್ಯಾಮ ನಿಮ್ಮ ಮನೆಗೆ ಬರಲಿದ್ದಾರೆ. ಒಟ್ನಲ್ಲಿ ಹೊಸ ಕಥೆಯೊಂದಿಗೆ ನಿಮ್ಮನ್ನು ರಂಜಿಸಲು ಸಜ್ಜಾಗಿರುವ ರಾಧೆ ತನ್ವಿ ರಾವ್​ ಹಾಗೂ ರಾಧೆ ಶ್ಯಾಮ್​ ಟೀಮ್​ಗೆ ನಮ್ಮ ಕಡೆಯಿಂದಲು ಆಲ್​ ದಿ ಬೆಸ್ಟ್​..

Source: newsfirstlive.com Source link