ಮಂಡ್ಯದಲ್ಲಿ ಮನೆ ನಿರ್ಮಾಣಕ್ಕೆ ಮುಂದಾದ ಸುಮಲತಾ -ಇಂದು ಗುದ್ದಲಿ ಪೂಜೆ

ಮಂಡ್ಯದಲ್ಲಿ ಮನೆ ನಿರ್ಮಾಣಕ್ಕೆ ಮುಂದಾದ ಸುಮಲತಾ -ಇಂದು ಗುದ್ದಲಿ ಪೂಜೆ

ಮಂಡ್ಯ: ಜಿಲ್ಲೆಯಲ್ಲಿ ಸ್ವಂತ ಮನೆ ನಿರ್ಮಾಣಕ್ಕೆ‌ ಮುಂದಾಗಿರುವ ಸಂಸದೆ‌ ಸುಮಲತಾ ಅಂಬರೀಶ್, ಇಂದು ಮಂಡ್ಯ ಪ್ರವಾಸವನ್ನ ಕೈಗೊಳ್ಳಲಿದ್ದಾರೆ.

ಲೋಕಸಭಾ ಚುನಾವಣೆ ಗೆದ್ದ ಬಳಿಕ ಮಂಡ್ಯದಲ್ಲಿ ಮನೆ ನಿರ್ಮಾಣ ಮಾಡಿ, ಇಲ್ಲೇ ಇರುತ್ತೇನೆ ಅಂತಾ ಸುಮಲತಾ ಹೇಳಿದ್ರು. ಇದೀಗ ಮನೆ ನಿರ್ಮಾಣಕ್ಕೆ ಮೊದಲ ಹೆಜ್ಜೆ ಇಟ್ಟಿದ್ದಾರೆ. ಸದ್ಯ ಮಂಡ್ಯದ ಹನಕೆರೆ ಬಳಿ ಮನೆ ನಿರ್ಮಾಣಕ್ಕೆ ಮುಂದಾಗಿರುವ ಸಂಸದೆ, ಇಂದು ಬೆಳಗ್ಗೆ 10 ಗಂಟೆಗೆ ಗುದ್ದಲಿ ಪೂಜೆ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದಾರೆ. ಇನ್ನು ಮನೆ ಗುದ್ದಲಿ ಪೂಜೆಯ ಕಾರ್ಯಕ್ರಮದಲ್ಲಿ, ಅಭಿಷೇಕ್ ಅಂಬರೀಶ್, ನಟರಾದ ದರ್ಶನ್, ಯಶ್, ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೂಡ ಭಾಗಿಯಾಗಲಿದ್ದಾರೆ.

Source: newsfirstlive.com Source link