ಬಾರದ ಲೋಕಕ್ಕೆ ಪಯಣಿಸಿದ ಹೆಂಡತಿ ಆಸೆ ಈಡೇರಿಸಿದ ಗಂಡ; ಈ ಕಥೆ ಕೇಳಿದ್ರೆ ಎಂಥವರಿಗೂ ಸಹ ಕರುಳು ಚುರುಕ್ ಎನ್ನುತ್ತೆ!

ಬಾರದ ಲೋಕಕ್ಕೆ ಪಯಣಿಸಿದ ಹೆಂಡತಿ ಆಸೆ ಈಡೇರಿಸಿದ ಗಂಡ; ಈ ಕಥೆ ಕೇಳಿದ್ರೆ ಎಂಥವರಿಗೂ ಸಹ ಕರುಳು ಚುರುಕ್ ಎನ್ನುತ್ತೆ!

ಕೆಲವು ಸಂಂಬಂಧಗಳೇ ಅಷ್ಟು ಒಮ್ಮೆ ಬಿಗಿಯಾಯ್ತು ಎಂದರೆ ಸಾಯುವತನಕ ಗಟ್ಟಿಯಾಗಿರುತ್ತದೆ. ಸುಖ, ದುಃಖ, ನೋವು, ನಲಿವು ಏನೇ ಬಂದರೂ ನಾವು ಹಂಚಿಕೊಳ್ಳುವುದು ಕೆಲವರ ಬಳಿ ಮಾತ್ರ. ಇಂತಹ ಸಂಬಂಧಗಳಿಗೆ ಯಾವುದೇ ಮಿತಿಗಳು ಇರುವುದಿಲ್ಲ. ಇವುಗಳ ಪೈಕಿ ಗಂಡ ಮತ್ತು ಹೆಂಡತಿಯ ಸಂಬಂಧವೂ ಅಷ್ಟೇ ಗಟ್ಟಿ. ನಾವು ಅತಿಯಾಗಿ ಪ್ರೀತಿಸುವ ಯಾರೇ ಬಾರದ ಲೋಕಕ್ಕೆ ಹೋದರೆ ಆಗುವ ನೋವು ಅಷ್ಟಿಷ್ಟಲ್ಲ. ಇಂತಹುದ್ದೇ ಒಂದು ನೋವಿನ ಕಥೆ ಇದೆ. ಈ ಕಥೆ ಕೇಳಿದ ಕೂಡಲೇ ಎದೆ ಭಾರವಾಗುತ್ತದೆ. ನಮಗೇ ಗೊತ್ತಿಲ್ಲದೆಯೇ ಕಣ್ಣೀರು ಸುರಿಯುತ್ತವೆ.

ಇವರ ಹೆಸರು ಜೇಮ್ಸ್ ಅಲ್ವಾರೆಜ್. ಜೇಮ್ಸ್ ಪತ್ನಿ ಯೆಸೇನಿಯಾ ಅಗಿಲಾರ್. ಒಂದು ವರ್ಷದ ಹಿಂದೆ ಜೇಮ್ಸ್ ತನ್ನ ಹೆಂಡತಿ ಜತೆಗೆ ಮೆಟರ್ನಿಟಿ ಫೋಟೋಶೂಟ್ ಮಾಡಿಸಿದ್ದರು. ಮೆಟರ್ನಿಟಿ ಫೋಟೋಶೂಟ್ ಬಳಿಕ ಒಂದು ಮಗು ಕೂಡ ಆಯ್ತು. ಆದರೆ. ಮಗುವನ್ನು ನೋಡಲು ತಾಯಿಯೇ ಇರಲಿಲ್ಲ.

 

View this post on Instagram

 

A post shared by James Alvarez (@__jamesalvarez)

ಹೌದು, ಜೇಮ್ಸ್ ಪತ್ನಿ ಯೆಸೇನಿಯಾ ಅಗಿಲಾರ್ ವರ್ಷದ ಹಿಂದೆ 35 ವಾರಗಳ ತುಂಬು ಗರ್ಭಿಣಿಯಾಗಿದ್ದರು. ಇವರು ವಾಕಿಂಗ್ಗೆ ಹೋಗಿದ್ದಾಗ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಆಗ ತುಂಬು ಗರ್ಭಿಣಿಯಾಗಿದ್ದ ಇವರಿಗೆ ಮಗುವನ್ನು ಉಳಿಸಲು ಶಸ್ತ್ರಚಿಕಿತ್ಸೆ ಮಾಡಬೇಕಾಯ್ತು. ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ತಾಯಿ ಬಾರದ ಲೋಕಕ್ಕೆ ಪಯಣಿಸಿದ್ದರು.

ಜೇಮ್ಸ್ ಮಗುವಿಗೆ ಒಂದು ವರ್ಷ. ಕಳೆದ ವರ್ಷವೇ ಮಗ ಆದ ಮೇಲೆ ಇನ್ನೊಂದು ಫೋಟೋ ಶೂಟ್ ಮಾಡಿಸಬೇಕು ಎಂದಿದ್ದರು. ಇದು ಜೇಮ್ಸ್ ಪತ್ನಿ ಯೆಸೇನಿಯಾ ಅಗಿಲಾರ್ ಆಸೆಯಾಗಿತ್ತು. ಈಗ ಹೆಂಡತಿ ಬದುಕಿದ್ದಾಗ ಎಲ್ಲಿ ಮೆಟರ್ನಿಟಿ ಫೋಟೋಶೂಟ್ ಮಾಡಿಸಿದ್ದರೋ ಅಲ್ಲೇ ಈಗ ಮಗಳ ಮೊದಲ ಹುಟ್ಟುಹಬ್ಬದ ಪ್ರಯುಕ್ತ ಮತ್ತೆ ಫೋಟೋಶೂಟ್ ಮಾಡಿಸಿದ್ದಾರೆ. ಈ ಮೂಲಕ ಪತ್ನಿಗೆ ಗೌರವ ಸಲ್ಲಿಸಿದ್ದಾರೆ ಜೇಮ್ಸ್.

 

View this post on Instagram

 

A post shared by James Alvarez (@__jamesalvarez)

ಮೆಟರ್ನಿಟಿ ಫೋಟೋಶೂಟ್ ವೇಳೆ ಯೆಸೇನಿಯಾ ಧರಿಸಿದ್ದ ಬಣ್ಣದ ಬಟ್ಟೆಯನ್ನೇ ಪುತ್ರಿಗೆ ತೊಡಿಸಿ ಜೇಮ್ಸ್ ವಿಶೇಷ ರೀತಿಯ ಗೌರವ ಸಲ್ಲಿಸಿದ್ದಾರೆ. ಇವರ ಈ ಪ್ರೀತಿಯನ್ನು ಕಂಡಾಗ ನಿಜಕ್ಕೂ ಹೃದಯ ಕರಗುತ್ತದೆ. ಈ ಫೋಟೋಗಳನ್ನು ಜೇಮ್ಸ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಭಾರೀ ವೈರಲ್ ಆಗಿದೆ. ನಿನ್ನ ಅಗಲಿಕೆ ಅಪಾರ ನೋವು ತಂದಿದೆ, ಮಗಳಿಗೆ ಉತ್ತಮ ತಂದೆಯಾಗಲು ಪ್ರಯತ್ನಿಸುತ್ತೇನೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

Source: newsfirstlive.com Source link