ತಾಲಿಬಾನ್​ ನಾಯಕನೊಂದಿಗೆ ಭಾರತದ ಮೊದಲ ಸಭೆ -ಕೇಂದ್ರದ ವಿರುದ್ಧ ವಿಪಕ್ಷಗಳ ಟೀಕಾಸ್ತ್ರ

ತಾಲಿಬಾನ್​ ನಾಯಕನೊಂದಿಗೆ ಭಾರತದ ಮೊದಲ ಸಭೆ -ಕೇಂದ್ರದ ವಿರುದ್ಧ ವಿಪಕ್ಷಗಳ ಟೀಕಾಸ್ತ್ರ

ಅಫ್ಘಾನ್​ನಲ್ಲಿ ಹೊಸ ಆಡಳಿತದ ರಚನೆಯ ಸಿದ್ಧತೆಯಲ್ಲಿರುವ ತಾಲಿಬಾನ್​​ ಜೊತೆ ಭಾರತ ನಿನ್ನೆ ಮೊದಲ ಸಭೆ ನಡೆಸಿದೆ. ಅಫ್ಘಾನ್​ನ ದೋಹಾ ನಗರದಲ್ಲಿ ತಾಲಿಬಾನ್ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆದಿತ್ತು. ಆದ್ರೆ ಈ ಭೇಟಿ ರಾಜಕೀಯ ತಿರುವು ಪಡೆದುಕೊಂಡಿದೆ. ಪೊಲಿಟಿಕಲ್ ವಾಕ್ಸಮರಕ್ಕೂ ಕಾರಣವಾಗಗಿದೆ. ಶೇಮ್​ಫುಲ್​ ಸರೆಂಡರ್​ ಅಂತಾ ವಿಪಕ್ಷಗಳು ಕಿಡಿಕಾರಿವೆ.

ನುಡಿದ ಮಾತಿನಂತೆ ಅಫ್ಘಾನ್​ನಿಂದ ಅಮೆರಿಕಾ ಸೇನೆ ವಾಪಾಸ್ಸಾಗಿದೆ. ಅಮೆರಿಕಾ ನಿರ್ಗಮನದ ಬಳಿಕ ತಾಲಿಬಾನ್​ ಹೊಸ ಆಡಳಿತದ ತಯಾರಿ ಜೋರಾಗಿದೆ.. ಸದ್ಯ ತಾಲಿಬಾನ್​ ಅಂತರಾಷ್ಟ್ರಿಯ ಮಟ್ಟದಲ್ಲಿ ಉತ್ತಮ ಸಂಬಂಧ ಬೆಳೆಸೋ ಚಿಂತನೆಯಲ್ಲಿದೆ.. ಈ ನಿಟ್ಟಿನಲ್ಲಿ ತಾಲಿಬಾನ್​ ಕಾರ್ಯೋನ್ಮುಖವಾಗಿದ್ದು ಹಲವು ದೇಶಗಳ ಜೊತೆ ಚರ್ಚೆ ನಡೆಸ್ತಿದೆ.

blank

ಇದನ್ನೂ ಓದಿ: ಕತಾರ್​​​ನಲ್ಲಿ ಭಾರತದ ರಾಯಭಾರಿ ಡಾ. ದೀಪಕ್ ಮಿತ್ತಲ್ ಭೇಟಿಯಾದ ತಾಲಿಬಾನ್​​​ ನಾಯಕ ಸ್ಟಾನಿಕ್‌ಜೈ

ಹೀಗೆ ಹೊಸ ಸರ್ಕಾರ ರಚೆನೆಯ ತಯಾರಿಯಲ್ಲಿರುವ ತಾಲಿಬಾನ್​ ಜೊತೆ ನೆನ್ನೆ ಮೊದಲ ಬಾರಿಗೆ ಭಾರತ ಸಭೆ ನಡೆಸಿದೆ. ಅಫ್ಘಾನ್​ನ ದೋಹಾ ನಗರದಲ್ಲಿ ತಾಲಿಬಾನ್ ಪ್ರತಿನಿಧಿಗಳೊಂದಿಗೆ ಭಾರತದ ವಿದೇಶಾಂಗ ಇಲಾಖೆಯ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ತಾಲಿಬಾನ್​ ನಾಯಕ ಶೇರ್ ಮಹಮದ್ ಸ್ಟಾನಿಕ್ ಜೈ ಹಾಗೂ ಕತಾರ್​ನಲ್ಲಿರೋ ಭಾರತದ ರಾಯಭಾರಿ ಡಾ. ದೀಪಕ್​ ಮಿತ್ತಲ್​ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ದೇಶದ ರಕ್ಷಣೆ, ಶಿಕ್ಷಣ, ಪ್ರವಾಸೋದ್ಯಮದ ಬಗ್ಗೆ ಮಾತುಕತೆ ನಡೆಸಿರೋದಾಗಿ ಸರ್ಕಾರದಿಂದ ಮಾಹಿತಿ ಲಭ್ಯವಾಗಿದೆ.. ಆದ್ರೆ, ಇದೇ ಭೇಟಿ, ಮಾತುಕತೆ ರಾಜಕೀಯ ವಾಕ್ಸಮರಕ್ಕೆ ದಾರಿ ಮಾಡಿಕೊಟ್ಟಂತಿದೆ. ಈ ಮಾತುಕತೆಗೆ ವಿಪಕ್ಷಗಳು ಕೆಂಡ ಕಾರಿವೆ.. ಶೇಮ್​ ಫುಲ್​ ಸರೆಂಡರ್​ ಅಂತಾ ಸರ್ಕಾರದ ವಿರುದ್ಧ ವ್ಯಕ್ತಪಡಿಸಿದೆ.

ಕೇಂದ್ರದ ವಿರುದ್ಧ ಶಿವಸೇನಾ ನಾಯಕಿ ಪ್ರಿಯಾಂಕ ಚತುರ್ವೇದಿ ವಾಗ್ದಾಳಿ
ಭಾರತ, ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ ಸ್ಥಾನದಲ್ಲಿದೆ. ಕಳೆದ ವಾರ ಅಫ್ಘಾನಿಸ್ತಾನದಲ್ಲಿ ನಡೆದಿದ್ದ ಭಯೋತ್ಪಾದಕ ಚಟುವಟಿಕೆಗಳ ಸಂಬಂಧಿಸಿದಂತೆ ಉಲ್ಲೇಖಿಸಿ ಸ್ಟೇಟ್​ಮೆಂಟ್​ ರಿಲೀಸ್​ ಮಾಡಲಾಗಿತ್ತು. ಈ ವೇಳೆ ತಾಲಿಬಾನಿಗಳನ್ನ ಉಗ್ರರು ಅಂತಾ ಉಲ್ಲೇಖಿಸಲಾಗಿರಲಿಲ್ಲ. ಇದೀಗ ಅದೇ ಸಂಘಟನೆ ಜೊತೆಗೆ ಮಾತುಕತೆ ನಡೆಸಲಾಗಿದೆ ಅಂತಾ ಶಿವ ಸೇನಾ ನಾಯಕಿ ಪ್ರಿಯಾಂಕ ಚತುರ್ವೇದಿ ಕಿಡಿಕಾರಿದ್ದಾರೆ. ಅಲ್ಲದೇ ಶೇಮ್​ಫುಲ್ ಸರಂಡರ್​ ಅಂತಾ ಹ್ಯಾಷ್​ ಟ್ಯಾಗ್ ಮಾಡೋ ಮೂಲಕ ಟ್ವೀಟ್​ ಬಾಣ ಹೂಡಿದ್ದಾರೆ.

ಇದನ್ನೂ ಓದಿ: ಭಾರತದ ರಾಯಭಾರಿ ಭೇಟಿಯಾದ ತಾಲಿಬಾನ್​​​ ನಾಯಕ; ಸ್ಟಾನಿಕ್‌ಜೈ ಇಲ್ಲಿಗೂ ಏನು ನಂಟು ಗೊತ್ತಾ..?

ಸುಮ್ಮನಿರೋದು ಉತ್ತಮ ಅಂತಾ ಎಐಎಂಐಎಂ ಮುಖ್ಯಸ್ಥ ವ್ಯಂಗ್ಯ
ಇನ್ನು, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡ ಈ ಭೇಟಿಯನ್ನ ಖಂಡಿಸಿದ್ದಾರೆ. ಈ ಮಾತುಕತೆಗಳು ತಾಲಿಬಾನ್ ಗುರುತಿಸುವಿಕೆಗೆ ಕಾರಣವಾಗುತ್ತಾ? ನೀವು ತಾಲಿಬಾನಿಗಳನ್ನ ಯುಎಪಿಎ ಭಯೋತ್ಪಾದಕ ಪಟ್ಟಿಯಲ್ಲಿ ಸೇರಿಸುತ್ತೀರಾ? ಅಂತಾ ಕೇಂದ್ರ ಸರ್ಕಾರಕ್ಕೆ ಪ್ರಶ್ನೆಗಳನ್ನೂ ಓವೈಸಿ ಕೇಳಿದ್ದಾರೆ. ಸಲಹೆಯನ್ನೂ ಕೊಟ್ಟಿರೋ ಓವೈಸಿ, ನನ್ನನ್ನ ಕೇಳೋದಾದ್ರೆ, ಎಲ್ಲರನ್ನೂ ತಾಲಿಬಾನ್​ ಅಂತಾ ಕರೆಯಯೋದನ್ನ ನಿಲ್ಲಿಸಿ, ಸುಮ್ಮನಿರೋದು ಉತ್ತಮ ಅಂತಾ ವ್ಯಂಗ್ಯವಾಡಿದ್ದಾರೆ.

ಸದ್ಯ ಕೇಂದ್ರ ಸರ್ಕಾರ ಭಾರತದ ರಕ್ಷಣೆ ಹಾಗೂ ಭಾರತೀಯರ ಸುರಕ್ಷತೆ ದೃಷ್ಟಿಯಿಂದ ತಾಲಿಬಾನ್​ ಜೊತೆ ಸಭೆ ನಡೆಸಿದೆ. ಸದ್ಯ ಇದು ರಾಜಕೀಯ ತಿರುವು ಪಡೆದುಕೊಂಡಿದ್ದು ವಿಪಕ್ಷಗಳ ಟೀಕೆಗೆ ಕಾರಣವಾಗಿದೆ. ಭಾರತ ತಾಲಿಬಾನ್​ ಜೊತೆ ಸಭೆ ನಡೆಸಿದ್ದು ಅಪರಾಧವೆಂಬಂತೆ ಬಣ್ಣಿಸುತ್ತಿವೆ.

Source: newsfirstlive.com Source link