ಚಿತ್ರದುರ್ಗ; ಬಟ್ಟೆ ವ್ಯಾಪಾರಿ ಶೂಟೌಟ್ ಪ್ರಕರಣ -ರಾಜಸ್ಥಾನ ಮೂಲದ ಇಬ್ಬರು ಆರೋಪಿಗಳ ಬಂಧನ

ಚಿತ್ರದುರ್ಗ; ಬಟ್ಟೆ ವ್ಯಾಪಾರಿ ಶೂಟೌಟ್ ಪ್ರಕರಣ -ರಾಜಸ್ಥಾನ ಮೂಲದ ಇಬ್ಬರು ಆರೋಪಿಗಳ ಬಂಧನ

ಚಿತ್ರದುರ್ಗ: ಇತ್ತೀಚೆಗೆ ನಡೆದ ಜಿಲ್ಲೆಯ ಹೊಳಲ್ಕೆರೆ ಶೂಟೌಟ್​ ಪ್ರಕರಣಕ್ಕೆ ಸಂಬಂಧಿಸಿ ರಾಜಸ್ಥಾನ ಮೂಲದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನದ ನೋಸರ್ ಬದಲಿಯಾ ಗ್ರಾಮದ ಸಂಜೀತ್ ಸಿಂಗ್, ಬರ್ನಾ ಗ್ರಾಮದ ಫೃಥ್ವಿರಾಜ್ ಸಿಂಗ್ ಬಂಧನಕ್ಕೊಳಗಾದ ಆರೋಪಿಗಳು. ಆಗಸ್ಟ್ 17 ರ ರಾತ್ರಿ ಹೊಳಲ್ಕೆರೆ ಪಟ್ಟಣದ ಪ್ರಿಯದರ್ಶಿನಿ ಬಟ್ಟೆ ಅಂಗಡಿಗೆ ಬಟ್ಟೆ ಕೊಳ್ಳುವ ನೆಪದಲ್ಲಿ ಬಂದಿದ್ದ ಆರೋಪಿಗಳು, ಅಂಗಡಿಯ ಮಾಲೀಕ ಮೂಲ್​ ಸಿಂಗ್​ನ ಮೇಲೆ ಗುಂಡಿನ ದಾಳಿ ಮಾಡಿ ಹತ್ಯೆಗೈದಿದ್ದರು.

blank

ಇದನ್ನೂ ಓದಿ: ಕೋಟೆನಾಡಿನಲ್ಲಿ ಸದ್ದು ಮಾಡಿದ ಪಿಸ್ತೂಲ್ -ಬಟ್ಟೆ ಕೊಳ್ಳುವ ನೆಪದಲ್ಲಿ ವ್ಯಾಪಾರಿಯ ಹತ್ಯೆ

ಹಳೇ ವೈಷಮ್ಯ ಹಿನ್ನೆಲೆ ಬಟ್ಟೆ ಮಾಲೀಕನ ಕೊಲೆ ಮಾಡಲಾಗಿದೆಎನ್ನಲಾಗುತ್ತಿದ್ದು, ಮೃತ ಮೂಲ್​ ಸಿಂಗ್​ 2018 ರಲ್ಲಿ ಕಲ್ಯಾಣ್ ಸಿಂಗ್ ಎಂಬ ಚಿನ್ನದ ವ್ಯಾಪಾರಿಯನ್ನ ಕೊಲೆ ಮಾಡಿಸಿದ್ದ ಎಂಬ ಆರೋಪ ಕೇಳಿ ಬಂದಿದೆ. ಆ ದ್ವೇಷದ ಹಿನ್ನೆಲೆ ಈಗ ಕಲ್ಯಾಣ್ ಸಿಂಗ್ ಪುತ್ರ ಸಂಜೀತ್ ಸಿಂಗ್, ತನ್ನ ಸಹಚರನ ಜೊತೆ ಸೇರಿ ಮೂಲ್ ಸಿಂಗ್ ನ ಕೊಲೆ ಮಾಡಿ ರಾಜಸ್ಥಾನಕ್ಕೆ ಪರಾರಿಯಾಗಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಹೆದ್ದಾರಿಯಲ್ಲಿ ಭೀಕರ ಅಪಘಾತ; ಧಗಧಗನೆ ಹೊತ್ತಿ ಉರಿಯಿತು ಬೈಕ್..!

Source: newsfirstlive.com Source link