ಭಾರತ-ಇಂಗ್ಲೆಂಡ್ 4ನೇ ಟೆಸ್ಟ್​ ಪಂದ್ಯದಕ್ಕೆ ಕೌಟ್​ಡೌನ್ -ಕೆನ್ನಿಂಗ್ಟನ್​​ನಲ್ಲಿ ಪುಟಿದೇಳುತ್ತಾ ಟೀಮ್ ಇಂಡಿಯಾ?

ಭಾರತ-ಇಂಗ್ಲೆಂಡ್ 4ನೇ ಟೆಸ್ಟ್​ ಪಂದ್ಯದಕ್ಕೆ ಕೌಟ್​ಡೌನ್ -ಕೆನ್ನಿಂಗ್ಟನ್​​ನಲ್ಲಿ ಪುಟಿದೇಳುತ್ತಾ ಟೀಮ್ ಇಂಡಿಯಾ?

ಲೀಡ್ಸ್​ನಲ್ಲಿ ಹೀನಾಯವಾಗಿ ಸೋತ ಟೀಮ್ ಇಂಡಿಯಾ, ಕೆನ್ನಿಂಗ್ಟನ್​ ಓವಲ್ ನಲ್ಲಿ ಪುಟಿದೇಳುತ್ತಾ..? ಕಳೆಪೆ ಬ್ಯಾಟಿಂಗ್, ಬೌಲಿಂಗ್​ನಲ್ಲಿ ಸಂಘಟಿತ ಹೋರಾಟ ನಡೆಸದ ವಿರಾಟ್ ಪಡೆ, ಈ ಎಲ್ಲಾ ಸವಾಲುಗಳನ್ನ ಮೆಟ್ಟಿನಿಲ್ಲುತ್ತಾ..? ಎಂಬ ಕುತೂಹಲ ಭಾರತ ಅಭಿಮಾನಿಗಳಲ್ಲಿ ಮೂಡಿದೆ.

ಭಾರತ-ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ, ವೇದಿಕೆ ಸಜ್ಜಾಗಿದೆ. ಲೀಡ್ಸ್​ನಲ್ಲಿ ಇನ್ನಿಂಗ್ಸ್​ ಹಾಗೂ 76 ರನ್​ಗಳ ಹೀನಾಯ ಸೋಲು ಕಂಡ ಟೀಮ್ ಇಂಡಿಯಾಕ್ಕೆ, ಲಂಡನ್​ನಲ್ಲಿ ಪುಟಿದೇಳಬೇಕಾದ ಸವಾಲು ಎದುರಾಗಿದೆ. ಅದ್ರಲ್ಲೂ ಬ್ಯಾಟಿಂಗ್, ಬೌಲಿಂಗ್​​ ವಿಭಾಗದಲ್ಲಿ ಸಂಪೂರ್ಣ ವೈಫಲ್ಯ ಕಂಡಿರುವ ಟೀಮ್ ಇಂಡಿಯಾ, ಕಮ್​​ಬ್ಯಾಕ್ ಮಾಡುತ್ತಾ ಎಂಬ ಪ್ರಶ್ನೆ ಎದಿದ್ದೆ.

blank

ಹೌದು..! ಇಂಗ್ಲೆಂಡ್ ತಂಡದ ಕೆಲ ಮಾಜಿ ಕ್ರಿಕೆಟಿಗರು, ಟೀಮ್ ಇಂಡಿಯಾ ಸೋಲಿನ ಬಗ್ಗೆ ತಮ್ಮದೇ ರೀತಿಯಲ್ಲಿ ವ್ಯಾಖ್ಯಾನ ಮಾಡ್ತಿದ್ದಾರೆ. ಅದ್ರಲ್ಲೂ ಇಂಗ್ಲೆಂಡ್​ನ ಮಾಜಿ ಕ್ಯಾಪ್ಟನ್ ಮೈಕಲ್ ವಾನ್, ಒಂದೆಜ್ಜೆ ಮುಂದೆ ಹೋಗಿ, ಟೀಮ್ ಇಂಡಿಯಾ ಆಟಗಾರರು ಕೆಲಸಕ್ಕೆ ಬಾರದವರೆಂದೇ ಉದ್ಘಾರ ತೆಗೆದಿದ್ದಾರೆ. ಇದೆಲ್ಲದಕ್ಕೂ ಕೆನ್ನಿಂಗ್ಟನ್ ಓವಲ್​​ನಲ್ಲಿ ಟೀಮ್ ಇಂಡಿಯಾ ಗೆಲ್ಲುವ ಮೂಲಕ ಉತ್ತರ ನೀಡಲು ಮುಂದಾಗಿದೆ.

ಆಸಿಸ್ ಸರಣಿಯಲ್ಲಿ ಭಾರತ ಅನುಭವಿಸಿತ್ತು ಅಪಮಾನ!
ನಿಮಗೆಲ್ಲಾ ಬಾರ್ಡರ್​ ಗವಾಸ್ಕರ್ ಟೆಸ್ಟ್ ಸರಣಿ ನೆನೆಪಿರಬೇಕು. ಅಡಿಲೇಡ್​ ಟೆಸ್ಟ್​ನಲ್ಲಿ 36 ರನ್​ಗೆ ಆಲೌಟ್​ ಆಗಿದ್ದಾಗ ಟೀಮ್ ಇಂಡಿಯಾವನ್ನ, ಇಡೀ ವಿಶ್ವವೇ ಟೀಕಿಸಿತ್ತು. ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಪಡೆಗೆ ವೈಟ್​​​ವಾಶ್​ ಮುಖಭಂಗ ಗ್ಯಾರಂಟಿ ಅಂತಾನೇ ಭವಿಷ್ಯಗಳನ್ನ ನುಡಿದಿದ್ದರು. ಆದ್ರೆ ಅದೇ ಅಪಮಾನವನ್ನ ಮೆಟ್ಟಿಲಾಗಿಸಿಕೊಂಡಿದ್ದ ಟೀಮ್ ಇಂಡಿಯಾ, ನಂತರ ಆಸಿಸ್​​ನಲ್ಲಿ ಸೃಷ್ಟಿಸಿದ್ದು ಇತಿಹಾಸ.

blank

ಕೆನ್ನಿಂಗ್ಟನ್​ನಲ್ಲಿ ಪುಟಿದೆದ್ದು ಬರೆಯುತ್ತಾ ಇತಿಹಾಸ!
ಹೌದು, ಟೀಮ್ ಇಂಡಿಯಾ ಒಂದೇ ಒಂದು ಸೋಲಿಗೆ ಅಂಜುವ ತಂಡವಲ್ಲ. ಕೆಳಗೆ ಬಿದ್ದಷ್ಟು ಮತ್ತಷ್ಟು ಪುಟಿದೇಳುತ್ತೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್, ಆಸ್ಟ್ರೇಲಿಯಾ ಟೆಸ್ಟ್ ಸರಣಿಯೇ ಆಗಿದೆ. ಸದ್ಯ ಇಂಗ್ಲೆಂಡ್​ನ ಕೆನ್ನಿಂಗ್ಟ ಓವಲ್​ನಲ್ಲಿ ಟೀಮ್ ಇಂಡಿಯಾ ಗೆದ್ದ ಅಂಕಿಅಂಶಗಳು ಇಲ್ಲದಿದ್ದರೂ, ಓವಲ್​ನಲ್ಲಿ ಕೆ.ಎಲ್.ರಾಹಲ್, ರಿಷಭ್ ಪಂತ್​ರ ಶತಕ, ಹಿಟ್​ಮ್ಯಾನ್ ರೋಹಿತ್​ ಶರ್ಮಾ, ನಾಯಕ ವಿರಾಟ್, ಪೂಜಾರ ಕಳೆದ ಪಂದ್ಯದಲ್ಲಿ ನೀಡಿದ ಪ್ರದರ್ಶನ, ತಂಡಕ್ಕೆ ಆತ್ಮವಿಶ್ವಾಸ ಮೂಡಿಸಿದೆ. ಇದಕ್ಕೆಲ್ಲಾ ಮಿಗಿಲಾಗಿ ಹೋರಾಟ ಮಾಡಬೇಕೆಂಬ ಛಲ ಟೀಮ್ ಇಂಡಿಯಾದಲ್ಲಿದೆ. ಇದೇ ಹೋರಾಟದ ಛಲವೇ, ತಂಡವನ್ನ ಪುಟಿದೇಳುವಂತೆ ಮಾಡೋದ್ರಲ್ಲಿ ಅನುಮಾನವೇ ಇಲ್ಲ.

Source: newsfirstlive.com Source link