ಏಕಾಏಕಿ ರಸ್ತೆ ಕುಸಿತವಾಗಿ ಟಿಪ್ಪರ್ ಪಾಲ್ಟಿ -ಅದೃಷ್ಟವಶಾತ್ ತಪ್ಪಿದ ಅನಾಹುತ

ಏಕಾಏಕಿ ರಸ್ತೆ ಕುಸಿತವಾಗಿ ಟಿಪ್ಪರ್ ಪಾಲ್ಟಿ -ಅದೃಷ್ಟವಶಾತ್ ತಪ್ಪಿದ ಅನಾಹುತ

ಬೆಂಗಳೂರು: ಕಳಪೆ ರಸ್ತೆ ಕಾಮಗಾರಿಯಿಂದ ಟಿಪ್ಪರ್ ಲಾರಿಯ ಚಕ್ರ ನಡುರಸ್ತೆಯಲ್ಲೇ ಭೂಮಿಯೊಳಗೆ ಕುಸಿದ ಪರಿಣಾಮ ಲಾರಿ ಪಾಲ್ಟಿಯಾಗಿರುವ ಘಟನೆ ನಗರದ ರಿಚ್ಮಂಡ್ ರಸ್ತೆಯ ವುಡ್​ಲ್ಯಾಂಡ್ ಹೋಟೆಲ್​ ಬಳಿ ನಡೆದಿದೆ.

ಸಂಪಂಗಿ ರಾಮನಗರದ ಸೆಂಚುರಿ ಅಪಾರ್ಟ್​​ಮೆಂಟ್ಗೆ ಡಸ್ಟ್ ಸಾಗಿಸುತ್ತಿದ್ದ ಟಿಪ್ಪರ್ ಲಾರಿ ರಸ್ತೆ ಕುಸಿದ ಪರಿಣಾಮ ಪಾಲ್ಟಿಯಾಗಿದ್ದು, ಅದೃಷ್ಟವಶಾತ್ ಟಿಪ್ಪರ್ ಗಾಡಿಯಲ್ಲಿದ್ದವರು ಪ್ರಾಣಾಪಾಯದಿಂದ ಪರಾಗಿದ್ದಾರೆ.

blank

ಇಂದು ಬೆಳಗ್ಗೆ ಚಾಲಕ ರಸ್ತೆಯಲ್ಲಿ ಟಿಪ್ಪರ್ ನಿಲ್ಲಿಸಿ ಸ್ಥಳೀಯರಿಂದ ಅಡ್ರೆಸ್​ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಮುಂದಾಗಿದ್ದು ಈ ವೇಳೆ ಟಿಪ್ಪರ್ ಭಾರಕ್ಕೆ ರಸ್ತೆ ಕುಸಿದು ಲಾರಿ ಪಲ್ಟಿಯಾಗಿದೆ. ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು, ಕಳಪೆ ಕಾಮಗಾರಿಯಿಂದ ರಸ್ತೆ ಕುಸಿದಿದೆ ಅಂತ ಆರೋಪ ಮಾಡಿದ್ದಾರೆ. ಸದ್ಯ ಟಿಪ್ಪರ್​ಅನ್ನು ಕ್ರೇನ್ ಮೂಲಕ ಹೊರಗಳೆದು ಸ್ಥಳದಿಂದ ತೆರವು ಮಾಡಲಾಗಿದೆ. ವಿಲ್ಸನ್ ಗಾರ್ಡನ್ ಪೊಲೀಸರು ತೆರವು ನಡೆಸಿದ್ದಾರೆ.

blank

Source: newsfirstlive.com Source link