ಕೊರೊನಾ ನಿಯಮ ಉಲ್ಲಂಘಿಸಿ ಶಾಸಕ ರಾಜುಗೌಡ ತವರೂರಲ್ಲಿ ಅದ್ಧೂರಿ ಜಾತ್ರೆ

ಕೊರೊನಾ ನಿಯಮ ಉಲ್ಲಂಘಿಸಿ ಶಾಸಕ ರಾಜುಗೌಡ ತವರೂರಲ್ಲಿ ಅದ್ಧೂರಿ ಜಾತ್ರೆ

ಯಾದಗಿರಿ: ಜಿಲ್ಲಾಡಳಿತದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೊಡದೆ, ಕೋವಿಡ್​ ನಿಯಮ ಗಾಳಿಗೆ ತೂರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಅದ್ಧೂರಿ ಜಾತ್ರೆ ಮಾಡಲಾಗಿದೆ.

blank

ರಾಜ್ಯದಲ್ಲಿ ಕೋವಿಡ್​ ಹಿನ್ನೆಲೆಯಲ್ಲಿ ಜಾತ್ರೆಗಳಿಗೆ ಅನುಮತಿ ಇಲ್ಲದಿದ್ರು, ಬಿಜೆಪಿ ಶಾಸಕ ರಾಜುಗೌಡ ತವರಲ್ಲೇ ಸಾವಿರಾರು ಜನ ಸೇರಿ ವೇಣುಗೋಪಾಲ ಸ್ವಾಮಿ ಜಾತ್ರೆ ನಡೆಸಿದ್ದಾರೆ. ಅದ್ಧೂರಿಯಾಗಿ ನಡೆದ ಈ ಜಾತ್ರೆಯಲ್ಲಿ ಜನ ಸಾಗರೋಪಾದಿಯಲ್ಲಿ ಹರಿದು ಬಂದಿದ್ದು, ಕೊರೊನಾ ಮೂರನೇ ಅಲೇ ಆತಂಕವಿದ್ದರು ಡೋಂಟ್​ಕೇರ್​ ಎಂದಿದ್ದಾರೆ.

blank

ಇದನ್ನೂ ಓದಿ:  ಅಮಾನವೀಯ ಕೃತ್ಯದ ಆರೋಪ; ಗಂಡ ಮಾಡಿದ ಸಾಲಕ್ಕೆ ಹೆಂಡತಿ ಒತ್ತೆಯಾಳಾಗಿ ಇಟ್ಟುಕೊಂಡ ಫೈನಾನ್ಸರ್

ಇನ್ನು ಜಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ರು ಕೂಡ ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆ ಕಣ್ಣುಮುಚ್ಚಿ ಕುಳಿತಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಯಾದಗಿರಿ ಜಿಲ್ಲಾಡಳಿತ ಕಟ್ಟುನಿಟ್ಟುನ ಕ್ರಮ ಕೈಗೊಂಡು, ಎಲ್ಲಾ ರೀತಿಯ ಕಾರ್ಯಚಟುವಟಿಕೆಗಳ ಜೊತೆಗೆ ಧಾರ್ಮಿಕ ಕಾರ್ಯಕ್ಕೆ ಸಹ ನಿಷೇಧವಿದೆ. ಹೀಗಿದ್ದರೂ ಸಹ ಯಾದಗಿರಿಗೆ ಮಾತ್ರ ಜಾತ್ರೆ ಕಂಟಕ ನಿಲ್ಲುತ್ತಿಲ್ಲ.

blank

 

Source: newsfirstlive.com Source link