ಕಾರು ಅಪಘಾತಕ್ಕೂ ಮುನ್ನ ಮದ್ಯ ಖರೀದಿಸಿದ್ದ ಇಶಿತಾ, ಬಿಂದು

ಬೆಂಗಳೂರು: ಮದ್ಯ ಸೇವಿಸಿ ಕಾರು ಚಲಾಯಿಸಿದ್ದರಿಂದ ಅಪಘಾತ ನಡೆದಿರಬಹುದು ಎಂಬ ಪೊಲೀಸರ ಅನುಮಾನಕ್ಕೆ ಈಗ ಒಂದೊಂದೆ ಸಾಕ್ಷ್ಯಗಳು ಲಭ್ಯವಾಗುತ್ತಿದೆ.

ನೈಟ್ ಕರ್ಫ್ಯೂ ಆರಂಭಕ್ಕೂ ಮೊದಲು ಇಷಿತಾ ಮತ್ತು ಬಿಂದು ಕೋರಮಂಗಲದ ಮದ್ಯದ ಅಂಗಡಿಯಿಂದ ಮದ್ಯ ಖರೀದಿ ಮಾಡಿದ್ದಾರೆ. ಇಬ್ಬರು ಮದ್ಯ ಖರೀದಿಸಿ ಅದನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು ಹೊರಟಿರುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ರಾತ್ರಿ  8: 19ಕ್ಕೆ ಕೋರಮಂಗಲ ೫ನೇ ಕ್ರಾಸ್‌ನಲ್ಲಿರುವ ಜೋಲೊ ಪಿಜಿಯಿಂದ ಇಶಿತಾಮತ್ತು ಬಿಂದು ಹೊರಡಿದ್ದಾರೆ. ಈ ವೇಳೆ 8:39ಕ್ಕೆ ಪಿಜಿಯಿಂದ ಸೋನಿ ವರ್ಲ್ಡ್ ಹೋಗುವ ರಸ್ತೆಗೆ ಬಂದಿದ್ದಾರೆ.ಇದನ್ನೂ ಓದಿ : ಫೋನ್ ಟ್ಯಾಪಿಂಗ್‍ನಲ್ಲಿ ಐಪಿಎಸ್ ಅಧಿಕಾರಿಗಳ ಫೈಟ್

blank

ಇವರು ಪಿಜಿಯಿಂದ ಸುಮಾರು  200 ಮೀಟರ್ ದೂರದವರೆಗೂ ನಡೆದುಕೊಂಡೆ ಹೋಗಿರುವ ದೃಶ್ಯ ಸೆರೆಯಾಗಿದೆ. 5 ಕ್ರಾಸ್ ರಸ್ತೆ ಮುಗಿಯುತ್ತಿದ್ದಂತೆ ಎಡಕ್ಕೆ ಟರ್ನ್ ತೆಗೆದುಕೊಂಡಿದ್ದಾರೆ. ಅಲ್ಲಿಂದ ಸೀದಾ ಹೈಫೈ ಮದ್ಯದ ಅಂಗಡಿಗೆ ಹೋಗಿದ್ದಾರೆ.ಇದನ್ನೂ ಓದಿ :ಮಿಡ್‍ನೈಟ್ ಪಾರ್ಟಿ ಮಾಡಿ ಜಾಲಿ ರೈಡ್? – ಜೊಮಾಟೊ ಡೆಲಿವರಿ ಬಾಯ್ ಜಸ್ಟ್ ಮಿಸ್

blank

ರಾತ್ರಿ 8: 40 ರಿಂದ 8: 44ರ ವರೆಗೂ ಮದ್ಯದ ಅಂಗಡಿಯಲ್ಲಿ ಮದ್ಯ ಖರೀದಿಸಿದ್ದು, ಅದನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು ಹೊರಟಿದ್ದಾರೆ. ಅಲ್ಲೇ ಪಕ್ಕದಲ್ಲಿದ್ದ ಒಂದು ಪಬ್‌ನೊಳಗೂ ಹೋಗಿದ್ದಾರೆ. ಆದರೆ ಪಬ್ ಒಳಗಡೆ ನವೀಕರಣ ಆಗುತ್ತಿದ್ದ ಕಾರಣ ವಾಪಸ್ ಬಂದಿದ್ದಾರೆ.ಇದನ್ನೂ ಓದಿ :85 ಗಂಟೆಯಲ್ಲಿ ಮೈಸೂರಿನ ಅತ್ಯಾಚಾರ ಪ್ರಕರಣ ಭೇದಿಸಿದ ಪೊಲೀಸರಿಗೆ ನನ್ನ ಕೃತಜ್ಞತೆ: ಅರಗ ಜ್ಞಾನೇಂದ್ರ

blank

ಇಷಿತಾ ಮತ್ತು ಬಿಂದು ಅಲ್ಲಿಂದ ಸೋನಿ ವರ್ಲ್ಡ್ ಮಾರ್ಗವಾಗಿ ಹೊರಟಿದ್ದಾರೆ. ಅದೇ ರಸ್ತೆಯಲ್ಲಿನ ಅಂಗಡಿಗಳಲ್ಲಿದ್ದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಅಲ್ಲಿಂದ ಕರುಣಾ ಸಾಗರ್ ಬಂದು ಇವರನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ.

Source: publictv.in Source link