ಓವಲ್​​​ನಲ್ಲಿ ಕಣಕ್ಕಿಳಿಯೋಕೆ ಅಶ್ವಿನ್ ರೆಡಿ -ಗೆದ್ದು ಬೀಗುತ್ತಿರುವ ಅತಿಥೇಯರಿಗೆ ಶುರುವಾಯ್ತಾ ಟೆನ್ಶನ್?

ಓವಲ್​​​ನಲ್ಲಿ ಕಣಕ್ಕಿಳಿಯೋಕೆ ಅಶ್ವಿನ್ ರೆಡಿ -ಗೆದ್ದು ಬೀಗುತ್ತಿರುವ ಅತಿಥೇಯರಿಗೆ ಶುರುವಾಯ್ತಾ ಟೆನ್ಶನ್?

ಲೀಡ್ಸ್​ನಲ್ಲಿ ಭಾರೀ ಅಂತರದಿಂದ ಗೆದ್ದ ಇಂಗ್ಲೆಂಡ್, ಕೆನ್ನಿಂಗ್ಟನ್​ ಓವಲ್​ನಲ್ಲೂ ಗೆಲ್ಲೋದು ನಾವೇ ಅನ್ನೋ ಹುಮ್ಮಸ್ಸಿನಲ್ಲಿ ಬೀಗ್ತಿದೆ. ಟೀಮ್ ಇಂಡಿಯಾದ ದಾಖಲೆಗಳನ್ನ ನೋಡಿ ಇಂಗ್ಲೆಂಡ್​​ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ. ಆದ್ರೆ ಆ ಒಂದೇ ಒಂದು ಕಾರಣಕ್ಕೆ ರೂಟ್​​ ಪಡೆಗೆ ನಡುಕ ಶುರುವಾಗಿದೆ.. ಅದ್ಯಾಕೆ ಅಂತೀರಾ.. ಈ ಸ್ಟೋರಿ ಓದಿ..

ಲೀಡ್ಸ್​ ಟೆಸ್ಟ್​ ಬಳಿಕ ಕೆನ್ನಿಂಗ್ಟನ್ ಓವಲ್​​ನತ್ತ ಎಲ್ಲರ ಚಿತ್ತ ನೆಟ್ಟಿದೆ. 3ನೇ ಟೆಸ್ಟ್​ನಲ್ಲಿ ಟೀಮ್ ಇಂಡಿಯಾವನ್ನ ಮಣಿಸಿದ ಇಂಗ್ಲೆಂಡ್, ಈಗ ಓವಲ್​​ನಲ್ಲೂ ಗೆದ್ದೇ ತೀರುತ್ತೇವೆಂಬ ಅತಿಯಾದ ಆತ್ಮವಿಶ್ವಾಸದಲ್ಲಿತ್ತು. ಇದಕ್ಕೆಲ್ಲಾ ಕಾರಣ..! ಓವಲ್​ನಲ್ಲಿ ಟೀಮ್ ಇಂಡಿಯಾ ಗೆಲುವಿನ ಅಂಕಿಅಂಶಗಳು.

ಹೌದು..! 1971ರ ಬಳಿಕ ಓವಲ್​​ನಲ್ಲಿ ಟೀಮ್ ಇಂಡಿಯಾ ಒಂದೇ ಒಂದು ಪಂದ್ಯದಲ್ಲಿ ಗೆಲುವು ದಾಖಲಿಸಿಲ್ಲ. ಇದು ಇಂಗ್ಲೆಂಡ್​ ತಂಡಕ್ಕೆ ಖುಷಿಯ ವಿಚಾರ. ಆದ್ರೆ ಇದೇ ಪಿಚ್​ನಲ್ಲಿ ಟೀಮ್ ಇಂಡಿಯಾ ಪ್ರಯೋಗಿಸಲಿರುವ ಒಂದು ಅಸ್ತ್ರ, ಆತಿಥೇಯರನ್ನ ಚಿಂತೆಗೆ ದೂಡುವಂತೆ ಮಾಡಿದೆ. ಆ ಅಸ್ತ್ರ ಬೇಱವುದು ಅಲ್ಲ.. ಆಫ್ ಸ್ಪಿನ್ನರ್ ಅಶ್ವಿನ್..

ಕೆನ್ನಿಂಗ್ಟನ್ ಕದನಕ್ಕೆ ಆರ್​​. ಅಶ್ವಿನ್ ರೆಡಿ..!
ಕಳೆದ ಮೂರು ಟೆಸ್ಟ್​ಗಳಿಂದ ಬೆಂಚ್​ ಕಾಯ್ತಿದ್ದ ಆಫ್​ ಸ್ಪಿನ್ನರ್​ ಅಶ್ವಿನ್, ಕೆನ್ನಿಂಗ್ಟನ್ ಓವೆಲ್ ಕದನದಲ್ಲಿ ಕಣಕ್ಕಿಳಿಯೋದು ಪಕ್ಕಾ ಆಗಿದೆ. ಇದಕ್ಕೆ ಕಾರಣ, ಒಂದೆಡೆ ಜಡೇಜಾ ವೈಫಲ್ಯ, ಮತ್ತೊಂದೆಡೆ ಇದೇ ಪಿಚ್​​ನಲ್ಲಿ ಆರ್​​.ಅಶ್ವಿನ್ ಮಾಡಿರುವ ಮ್ಯಾಜಿಕ್​.

ಯೆಸ್..! ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಸರ್ರೆ ಪರ ಕೌಂಟಿ ಪಂದ್ಯವನ್ನಾಡಿದ್ದ ಅಶ್ವಿನ್, ಸೊಮರ್​ಸೆಟ್ ವಿರುದ್ಧ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್​ ನೀಡಿದ್ದಾರೆ. ಈ ಪಂದ್ಯದಲ್ಲಿ ವಿಕೆಟ್ ಟೇಕಿಂಗ್ ಸ್ಪೆಲ್ ಮಾಡಿದ್ದ ಅಶ್ವಿನ್, ಬರೋಬ್ಬರಿ 7 ವಿಕೆಟ್ ಉರುಳಿಸಿದ್ದಾರೆ. ಈ ಪೈಕಿ ಎರಡನೇ ಇನ್ನಿಂಗ್ಸ್​ನಲ್ಲಿ 6 ವಿಕೆಟ್ ಪಡೆದು, ಮಿಂಚಿದ್ದಾರೆ.

ಓವಲ್​​ನಲ್ಲಿ ಅತಿಥೇಯರ ಪರದಾಟ ಗ್ಯಾರಂಟಿ..?
ಒಂದೆಡೆ ಗೆಲುವಿನ ಉತ್ಸಾಹದಲ್ಲಿರುವ ಜೋ ರೂಟ್​ ಪಡೆ, ಓವಲ್ ಟೆಸ್ಟ್​ ಗೆದ್ದು ಸರಣಿ ಮುನ್ನಡೆ ಸಾಧಿಸುವ ಲೆಕ್ಕಚಾರದಲ್ಲಿದೆ. ಆದ್ರೆ ಓವಲ್​ ಪಿಚ್, ಸ್ವದೇಶಿ ಇಂಗ್ಲೆಂಡ್​ ತಂಡಕ್ಕೆ​​ ತಿರುಮಂತ್ರವೇ ಆಗಲಿದೆ ಅಂತಾನೇ ಎಕ್ಸ್​ಪರ್ಟ್​ಗಳು ಹೇಳಿದ್ದಾರೆ. ಇದಕ್ಕೆ ಕಾರಣ, ಈ ಪಿಚ್​ನಲ್ಲಾಡಿದ ಕೌಂಟಿ ಪಂದ್ಯಗಳಲ್ಲಿ, ವೇಗಿಗಳಿಗಿಂತ ಸ್ಪಿನ್ನರ್​ಗಳೇ ಮೈಲುಗೈ ಸಾಧಿಸಿರೋದು. ಇದು ಟೀಮ್ ಇಂಡಿಯಾ ಪಾಲಿಗೆ ವರದಾನ ಅಂತಾನೇ ಹೇಳಲಾಗ್ತಿದೆ. ಮುಖ್ಯವಾಗಿ ಓವಲ್‌ನ ಪಿಚ್‌ ಮೂರನೇ ದಿನದಿಂದಲೇ ತಿರುವು ಪಡೆಯಲಿದೆ. ಇದು ಇಂಗ್ಲೆಂಡ್​ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಇದೆಲ್ಲಾದಕ್ಕೂ ಮಿಗಿಲಾಗಿ, ಇದೇ ಅಂಗಣದಲ್ಲಿ ಸರ್ರೆ ಪರ ಆಡಿದ ಅನುಭವ ಅಶ್ವಿನ್​ಗಿದೆ. ಆದ್ರಲ್ಲೂ ಎದುರಾಳಿ ತಂಡದ ಪ್ರಮುಖ ಆಟಗಾರರ ವಿಕ್ನೇಸ್ ಅರಿತಿರುವ ಅಶ್ವಿನ್, ಕಂಟಕರಾಗೋದು ಗ್ಯಾರಂಟಿ. ಮುಖ್ಯವಾಗಿ ಐವರು ಲೆಫ್ಟ್​ಹ್ಯಾಂಡ್​​ ಬ್ಯಾಟ್ಸ್​ಮನ್​ಗಳನ್ನ ಹೊಂದಿರುವ ಇಂಗ್ಲೆಂಡ್​​​​ಗೆ, ಆಶ್ವಿನ್ ಆಗಮನ ನಿಜಕ್ಕೂ ಇಕ್ಕಟಿಗೆ ಸಿಲುಕಿಸೋದ್ರಲ್ಲಿ ಅನುಮಾನ ಇಲ್ಲ!

Source: newsfirstlive.com Source link