ಶಾಶ್ವತ ಸೂರು ಕಲ್ಪಿಸುವಂತೆ ಆಗ್ರಹಿಸಿ ಮಹಿಳೆಯರಿಂದ 6 ಕಿ.ಮೀ. ದೀರ್ಘದಂಡ ನಮಸ್ಕಾರ!

ಶಾಶ್ವತ ಸೂರು ಕಲ್ಪಿಸುವಂತೆ ಆಗ್ರಹಿಸಿ ಮಹಿಳೆಯರಿಂದ 6 ಕಿ.ಮೀ. ದೀರ್ಘದಂಡ ನಮಸ್ಕಾರ!

ವಿಜಯಪುರ: ಶಾಶ್ವತ ಸೂರು ಕಲ್ಪಿಸುವಂತೆ ಆಗ್ರಹಿಸಿ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದ ದಲಿತ ಕುಟುಂಬದ ಮಹಿಳೆಯರು ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ಪ್ರತಿಭಟನೆ ಕೈಗೊಂಡಿದ್ದಾರೆ.

ಕಳೆದ 30 ವರ್ಷಗಳಿಂದ ಬೇರೆಯವರ ಜಾಗದಲ್ಲಿ ಜೋಪಡಿ ನಿರ್ಮಿಸಿಕೊಂಡು ಬದುಕು ಸಾಗಿಸುತ್ತಿರುವ ಸುಮಾರು 15 ಕ್ಕೂ ಹೆಚ್ಚು ಕುಟುಂಬಗಳು, ಶಾಶ್ವತ ಸೂರು ಕಲ್ಪಿಸುವಂತೆ ಆಗ್ರಹಿಸಿ ಅಮರಣಾಂತ ಧರಣಿ ಕುಳಿತಿವೆ.

blank

ಇದನ್ನೂ ಓದಿ: ಫೋನ್ ಕದ್ದಾಲಿಕೆ ಕೇಸ್​; ಸಿಬಿಐ ಬಿ ರಿಪೋರ್ಟ್​ಗೆ ಭಾಸ್ಕರ್​​ ರಾವ್ ಅಸಮಾಧಾನ

blank

ಜಾಗವೂ ಇಲ್ಲ, ಮನೆಗಳೂ ಇಲ್ಲ, ಅಧಿಕಾರಿಗಳ ನಿರ್ಲಕ್ಷಕ್ಕೆ ರೋಸಿ ಹೋದ ಕುಟುಂಬಗಳ ಮಹಿಳೆಯರು 6 ಕಿ.ಮೀ. ದೀರ್ಘದಂಡ ನಮಸ್ಕಾರ ಹಾಕಿ ಸರ್ಕಾರದ ಕಣ್ತೆರೆಸುವ ಪ್ರಯತ್ನ ಮಾಡಿದ್ದಾರೆ.ಗ್ರಾಪಂ ಎದುರೇ ಅಡುಗೆ ಮಾಡಿ, ವಾಸ್ತವ್ಯ ಹೂಡಿರೋ ಕುಟುಂಬಗಳು, ಹಗಲೂ ರಾತ್ರಿ ಎನ್ನದೆ ಪ್ರತಿಭಟನೆ ಕೈಗೊಂಡಿದ್ದು, ಜಿಲ್ಲಾಧಿಕಾರಿಗೆ ಮನವಿ ಕೂಡ ಸಲ್ಲಿಸಲಾಗಿದೆ. ಆದರೆ  ಧರಣಿ ಕುಳಿತು ವಾರವಾದ್ರೂ ಯಾವೊಬ್ಬ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

blank

ಇದನ್ನೂ ಓದಿ: ಬ್ಲ್ಯಾಕ್​​​ ಮೇಲ್​​​​ ಮಾಡಿ ಮಂತ್ರಿ ಸ್ಥಾನ ಕೇಳೋ ಮಗಾ ನಾನಲ್ಲ; ಯತ್ನಾಳ್​

 

Source: newsfirstlive.com Source link