ಆಕ್ವಾ ಬ್ಲೂ ಬಿಕಿನಿಯಲ್ಲಿ ಹಾಟ್‌ ಪೋಸ್‌ ಕೊಟ್ಟು ಪಡ್ಡೆ ಹುಡುಗರ ನಿದ್ದೆ ಕದ್ದ ಸನ್ನಿ

ಆಕ್ವಾ ಬ್ಲೂ ಬಿಕಿನಿಯಲ್ಲಿ ಹಾಟ್‌ ಪೋಸ್‌ ಕೊಟ್ಟು ಪಡ್ಡೆ ಹುಡುಗರ ನಿದ್ದೆ ಕದ್ದ ಸನ್ನಿ

ಬಾಲಿವುಡ್​ ಬೆಡಗಿ, ಪಡ್ಡೆ ಹುಡುಗರ ಫೆವ್​ರೇಟ್​ ಚೆಲುವೆ ಸನ್ನಿ ಲಿಯೋನ್​ ಆಗಾಗ ತನ್ನ ಪತಿ ಮತ್ತು ಮಕ್ಕಳ ಜೊತೆ ಫ್ಯಾಮಿಲಿ ಟ್ರಿಪ್​ ಹೊಗ್ತಾ ಇರ್ತಾರೆ. ಇದೇ ರೀತಿ ಈ ಬಾರಿಯು ಸನ್ನಿ ತಮ್ಮ ಕುಟುಂಬ ಸಮೇತ ಫ್ಯಾಮಸ್​ ಟೂರಿಸ್ಟ್​ ಸ್ಪಾಟ್​ ಮಾಲ್ಡೀವ್ಸ್​ಗೆ ಭೇಟಿ ನೀಡಿದ್ದಾರೆ.

ಹೌದು ಸನ್ನಿ ಲಿಯೋನ್​ ತಮ್ಮ ಪತಿ ಡೇನಿಯಲ್ ವೆಬರ್, ಪುತ್ರಿ ನಿಶಾ, ಮತ್ತು ಪುತ್ರರಾದ ಆಶರ್​ ನೋಹ್​ ಜೊತೆ ಜಾಲಿ ಫ್ಯಾಮಿಲಿ ಟ್ರಿಪ್​ಗಾಗಿ ಮಾಲ್ಡೀವ್ಸ್​ನ ಸನ್ಸಿಯಮೋಳುವೇಲಿ ರೇರ್ಸಾಟ್​ಗೆ ಭೇಟಿ ನೀಡಿದ್ದಾರೆ. ಇನ್ನು ಸನ್ನಿ ಲಿಯೋನ್​ ತಮ್ಮ ಮಾಲ್ಡೀವ್ಸ್​ ಟ್ರಿಪ್​ನ ಫೋಟೋಸ್​ ವಿಡಿಯೋಗಳನ್ನು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

 

View this post on Instagram

 

A post shared by Sunny Leone (@sunnyleone)

ಇನ್ನು ಸನ್ನಿ ಲಿಯೋನ್​ ಆಕ್ವಾ ಬ್ಲೂ ಬಣ್ಣದ ಬಿಕಿನಿಯನ್ನು ಧರಿಸಿ ಶಾಂಪೇನ್ ಬಾಟಲಿಯನ್ನು ತೆರೆಯುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದು ಸನ್ನಿ ಪಡ್ಡೆ ಫ್ಯಾನ್ಸ್​ ಫುಲ್​ ಫಿದಾ ಆಗಿದ್ದಾರೆ.

ಸದ್ಯ ಸನ್ನಿ ಲಿಯೋನ್​ ಇತ್ತೀಚೆಗಷ್ಟೇ ಬಹುಭಾಷಾ ಚಿತ್ರವಾದ ‘ಶೆರೋ’ ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ. ಇದೊಂದು ಸೈಕಾಲಾಜಿಕಲ್ ಥ್ರಿಲ್ಲರ್ ಕಥೆಯಾಗಿದ್ದು , ಮಲಯಾಳಂ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಅಲ್ಲದೆ ಬಾಲಿವುಡ್‌ನಲ್ಲಿ ಕ್ರಿಕೆಟಿಗ-ನಟ ಶ್ರೀಶಾಂತ್ ಅವರ ಚೊಚ್ಚಲ ಚಿತ್ರದಲ್ಲಿಯೂ ಸನ್ನಿ ಲಿಯೋನ್ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ.

Source: newsfirstlive.com Source link