ಮತ್ತೆ ಹೆಚ್ಚಳವಾಯ್ತು ಎಲ್​​​ಪಿಜಿ ಗ್ಯಾಸ್​​​​ ಸಿಲಿಂಡರ್​​​ ಬೆಲೆ.. ಗ್ರಾಹಕರಿಗೆ ಬಿಗ್​​ ಶಾಕ್​

ಮತ್ತೆ ಹೆಚ್ಚಳವಾಯ್ತು ಎಲ್​​​ಪಿಜಿ ಗ್ಯಾಸ್​​​​ ಸಿಲಿಂಡರ್​​​ ಬೆಲೆ.. ಗ್ರಾಹಕರಿಗೆ ಬಿಗ್​​ ಶಾಕ್​

ಗ್ಯಾಸ್​ ಸಿಲಿಂಡರ್​ ಬಳಕೆ ಮಾಡುವವರಿಗೆ ಸೆ.1ರಂತೆ ಬಿಗ್​ ಶಾಕ್​ ಲಭಿಸಿದ್ದು, ಗೃಹ ಬಳಕೆಯ ಎಲ್​ಪಿಜಿ ದರವನ್ನು ಆಯಿಲ್​ ಕಂಪನಿಗಳು 25 ರೂಪಾಯಿಯಷ್ಟು ಹೆಚ್ಚಳ ಮಾಡಿದೆ. ಇಂದಿನಿಂದಲೇ ನೂತನ ದರ ಜಾರಿ ಆಗಲಿದ್ದು, ಕಳೆದ 15 ದಿನಗಳಲ್ಲಿ ಎರಡನೇ ಬಾರಿಗೆ ಗ್ಯಾಸ್​ ಸಿಲಿಂಡರ್​ ದರ ಹೆಚ್ಚಳವಾಗಿದೆ. ಇದರೊಂದಿಗೆ 14.2 ಕೆಜಿ ಗ್ಯಾಸ್​ ಸಿಲಿಂಡರ್ ಬೆಲೆ ದೆಹಲಿಯಲ್ಲಿ 884.50 ರೂಪಾಯಿಗೆ ಹೆಚ್ಚಳವಾಗಿದೆ.

ಈ ವರ್ಷದ ಆರಂಭದಲ್ಲಿ 694 ರೂಪಾಯಿ ಇದ್ದ ಗ್ಯಾಸ್ ಸಿಲಿಂಡರ್ ಬೆಲೆ 844 ರೂಪಾಯಿಗಳಿಗೆ ತಲುಪಿದ್ದು, 19 ಕೆಜಿ ತೂಕದ ಕಮರ್ಷಿಯಲ್​ ಸಿಲಿಂಡರ್ ಬೆಲೆಯಲ್ಲೂ 75 ರೂಪಾಯಿ ಏರಿಕೆಯಾಗಿದೆ. ಇದರೊಂದಿಗೆ 19 ಕೆಜಿ ಸಿಲಿಂಡರ್ ಬೆಲೆ 1,693 ರೂಪಾಯಿಗೆ ಏರಿದೆ. ಕಳೆದ ಏಳು ವರ್ಷಗಳ ಕಾಲದಲ್ಲಿ ಗ್ಯಾಸ್​ ಸಿಲಿಂಡರ್​ ಬೆಲೆ ಡಬಲ್​ ಆಗಿದೆ. 2014ರ ಮಾರ್ಚ್​​​​ನಲ್ಲಿ ಗ್ಯಾಸ್​ ಸಿಲಿಂಡರ್ ಬೆಲೆ 410 ರೂಪಾಯಿ ಇತ್ತು. ಇನ್ನು ಬೆಂಗಳೂರಿನಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ 882.50 ರೂಪಾಯಿಗೆ ಏರಿಕೆಯಾಗಿದೆ.

Source: newsfirstlive.com Source link