15 ಆಟಗಾರರಿಗಷ್ಟೇ ಅವಕಾಶ ಕೊಟ್ಟ ICC; ಭಗ್ನವಾಗುತ್ತಾ ‘ಈ’ ಆಟಗಾರರ ಟಿ20 ವಿಶ್ವಕಪ್​ ಕನಸು?

15 ಆಟಗಾರರಿಗಷ್ಟೇ ಅವಕಾಶ ಕೊಟ್ಟ ICC; ಭಗ್ನವಾಗುತ್ತಾ ‘ಈ’ ಆಟಗಾರರ ಟಿ20 ವಿಶ್ವಕಪ್​ ಕನಸು?

ಅಕ್ಟೋಬರ್​​ 17ರಿಂದ ಟಿ20 ವಿಶ್ವಕಪ್​ ಆರಂಭವಾಗಲಿದೆ. ಅದಕ್ಕಾಗಿ ಬಿಸಿಸಿಐ ಭಾರೀ ಕಸರತ್ತು ನಡೆಸಿದ್ದು, ಶೀಘ್ರದಲ್ಲೇ 15 ಸದಸ್ಯರ ತಂಡವನ್ನ ಅನೌನ್ಸ್​ ಮಾಡಲಿದೆ. ಆದರೆ ಈ ಆಟಗಾರರಿಗೆ ಮಾತ್ರ, ವಿಶ್ವಕಪ್​ ಕನಸು ಬಹುತೇಕ ಭಗ್ನ ಎಂದು ಹೇಳಲಾಗ್ತಿದೆ.

ಬಹುನಿರೀಕ್ಷಿತ ಟಿ20 ವಿಶ್ವಕಪ್​​ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಈ ಪ್ರತಿಷ್ಠಿತ ಟೂರ್ನಿಗೆ ಬಲಿಷ್ಠ ತಂಡ ಕಟ್ಟೋಕೆ ಬಿಸಿಸಿಐ ಡೀಪ್ ​​​ಸ್ಟಡಿ ಮಾಡಿದೆ. ಬಲಿಷ್ಠ ಬೆಂಚ್​ ಸ್ಟ್ರೆಂಥ್​ ಹೊಂದಿರುವ ಭಾರತ ತಂಡದಲ್ಲಿ ಪ್ರತಿಭಾನ್ವಿತ ಆಟಗಾರರಿಗೆ ಕೊರತೆಯೇ ಇಲ್ಲ. ಆದ್ರೆ ICC, 15 ಸದಸ್ಯರ ಆಟಗಾರರನ್ನಷ್ಟೆ ಪ್ರಕಟಿಸುವಂತೆ ಆದೇಶ ಹೊರಡಿಸಿದೆ. ಇದು ಆಯ್ಕೆ ಸಮಿತಿಗೆ ಗೊಂದಲ ಹೆಚ್ಚಿಸಿದೆ. ಆದ್ರೆ ಸಿಕ್ಕ ಅವಕಾಶದಲ್ಲಿ ಸಾಮರ್ಥ್ಯ ಸಾಬೀತುಪಡಿಸದ ಕೆಲ ಆಟಗಾರರಿಗೆ ವಿಶ್ವಕಪ್​​​ ಟಿಕೆಟ್​ ಡೌಟ್​ ಎಂದೇ ಹೇಳಲಾಗ್ತಿದೆ.

blank

ಹೌದು.! ಪ್ರತಿಷ್ಠಿತ ಟೂರ್ನಿಯಲ್ಲಿ ಆಡುವ ಭಾಗ್ಯ ನಮಗೆ ಸಿಗುತ್ತಾ ಅನ್ನೋದ್ರ ಬಗ್ಗೆ ಆಟಗಾರರು ಎದುರು ನೋಡ್ತಿದ್ದಾರೆ. ಆದ್ರೆ ಬಿಸಿಸಿಐ ಬಿಡುಗಡೆ ಮಾಡುವ ಈ ಪಟ್ಟಿಯಲ್ಲಿ, ಓಪನರ್​​ ಪೃಥ್ವಿ ಶಾ ಸ್ಥಾನ ಗಿಟ್ಟಿಸಿಕೊಳ್ಳೋದು ಅನುಮಾನ. ಏಕೆಂದರೆ KL ರಾಹುಲ್​, ರೋಹಿತ್​ ಶರ್ಮಾ, ಶಿಖರ್​ ಧವನ್​ ಓಪನಿಂಗ್​ ಸ್ಲಾಟ್​​ಗೆ ಫಿಕ್ಸ್​ ಆಗಿದ್ದಾರೆ. ಹಾಗಾಗಿ ಪೃಥ್ವಿ ಶಾಗೆ ಅವಕಾಶ ಅನುಮಾನ ಎನ್ನಲಾಗ್ತಿದೆ.

ಇಂಜುರಿಯಿಂದ ಚೇತರಿಸಿಕೊಂಡಿರುವ ಶ್ರೇಯಸ್​ ಅಯ್ಯರ್​ ಕೂಡ ಚಾನ್ಸ್​ ಪಡೆದುಕೊಳ್ಳೋದು ಡೌಟ್​. ಅಯ್ಯರ್ ಗಾಯದಿಂದ ಚೇತರಿಸಿಕೊಂಡಿದ್ರೂ, ಇನ್ನು ಫಿಟ್​ ಆಗಿಲ್ಲ ಅಂತ ಡೆಲ್ಲಿ ಕ್ಯಾಪಿಟಲ್ಸ್​ ಹೇಳಿದೆ. ಇಶಾನ್​ ಕಿಶನ್, ಮನೀಶ್​ ಪಾಂಡೆಯದ್ದು ಇದೇ ಪರಿಸ್ಥಿತಿ. ಮಿಡಲ್​ ಆರ್ಡರ್​​​ನಲ್ಲಿ ವಿರಾಟ್​ ಕೊಹ್ಲಿ, ಸೂರ್ಯಕುಮಾರ್​ ಯಾದವ್, ರಿಷಭ್​ ಪಂತ್​ ಕಣಕ್ಕಿಳಿಯಲಿದ್ದಾರೆ. ಒಂದು ವೇಳೆ ರೋಹಿತ್​-ಧವನ್ ಓಪನಿಂಗ್​​​ನಲ್ಲಿ ಕಣಕ್ಕಿಳಿದ್ರೆ, ರಾಹುಲ್​​ ಮಧ್ಯಮ ಕ್ರಮಾಂಕದಲ್ಲಿ ಆಡೋ ಸಾಧ್ಯತೆ ಇದೆ. ಹಾಗಾಗಿ ಇಶಾನ್​​, ಮನೀಶ್​​​ಗೆ ಸ್ಥಾನ ಬಹುತೇಕ ಅನುಮಾನ.

blank

ಸ್ಪಿನ್​ ಕೋಟಾದಲ್ಲಿ ಕಾಂಪಿಟೇಷನ್​ ಜೋರಾಗಿದೆ. ಸದ್ಯ ವಾಷಿಂಗ್ಟನ್​​​ ಸುಂದರ್​​ ಇಂಜುರಿಗೆ ತುತ್ತಾಗಿದ್ದು, ಹಲವರ ದಾರಿ ಸುಲಭವಾಗಿದೆ. ಯಜುವೇಂದ್ರ ಚಹಲ್​, ರಾಹುಲ್​​ ಚಹರ್​​​​ಗೆ ಚಾನ್ಸ್​ ನೀಡುವ ಸಾಧ್ಯತೆ ಇದೆ. ಹಾಗಾಗಿ​​​ ಕುಲ್ದೀಪ್​​ ಯಾದವ್​​ ರೇಸ್​​ನಲ್ಲಿದ್ರೂ ಸ್ಥಾನ ಗಿಟ್ಟಿಸಿಕೊಳ್ಳೋದು ಬಹುತೇಕ ಕಡಿಮೆ. ಏಕೆಂದರೆ ರವೀಂದ್ರ ಜಡೇಜಾ ಸ್ಥಾನ ಪಡೆದುಕೊಳ್ಳಲಿದ್ದು, ಮೂವರು ಸ್ಪಿನ್ನರ್​ಗಳು ಸ್ಥಾನ ಪಡೆದುಕೊಂಡಂತಾಗಿರುತ್ತೆ. ಹಾಗೇ ಕೃನಾಲ್​ ಪಾಂಡ್ಯ, ವರುಣ್​ ಚಕ್ರವರ್ತಿಗೆ ಕೂಡ ವಿಶ್ವಕಪ್​ ಮಿಸ್​ ಆಗೋದು ಗ್ಯಾರಂಟಿ.

blank

ಇನ್ನು ಟೆಸ್ಟ್​​ನಲ್ಲಿ ಮಿಂಚ್ತಿರುವ ಮೊಹಮ್ಮದ್​ ಸಿರಾಜ್​, ಶಾರ್ದೂಲ್​ ಠಾಕೂರ್​ಗೆ ಅವಕಾಶ ಸಿಗೋದು ಬಹಳ ಕಡಿಮೆ. ಜಸ್​​ಪ್ರಿತ್​​ ಬೂಮ್ರಾ, ಭುವನೇಶ್ವರ್​ ಕುಮಾರ್​​, ದೀಪಕ್​ ಚಹರ್​, ಮೊಹಮದ್​ ಶಮಿ ಈಗಾಗಲೇ ಫಿಕ್ಸ್​ ಆಗಿದ್ದಾರೆ. ಜೊತೆಗೆ ಇವರಲ್ಲೇ ಒಬ್ಬರು ಬೆಂಚ್​ ಕಾಯೋ ಸಾಧ್ಯತೆ ಇದೆ. ಆದ್ದರಿಂದ ಸಿರಾಜ್​, ಶಾರ್ದೂಲ್​ಗೆ ನಿರಾಸೆಯಾಗೋದು ಪಕ್ಕಾ ಎನ್ನಲಾಗ್ತಿದೆ. ಮತ್ತೊಂದೆಡೆ ಎಡಗೈ ವೇಗಿ ಟಿ.ನಟರಾಜನ್,​ ಹೆಚ್ಚುವರಿ ವೇಗಿಯಾಗಿ ಆಯ್ಕೆಯಾದ್ರೂ ಅಚ್ಚರಿ ಇಲ್ಲ. ಒಟ್ಟಿನಲ್ಲಿ ಶೀಘ್ರದಲ್ಲೇ ಬಿಸಿಸಿಐ ಪ್ರಕಟಿಸುವ 15 ಸದಸ್ಯರ ಹೆಸರಲ್ಲಿ ಯಾರೆಲ್ಲಾ ಇನ್​ ಆಗ್ತಾರೋ, ಯಾರು ಔಟ್​​ ಆಗ್ತಾರೋ ಅನ್ನೋದನ್ನ ಕಾದು ನೋಡಬೇಕಿದೆ.

Source: newsfirstlive.com Source link