ಕೊರೊನಾ ರೂಲ್ಸ್​ಗೆ ಗೋಲಿ ಹೊಡೆದು ಮಡಿಕೆ ಒಡೆಯೋ ಸ್ಪರ್ಧೆ ಆಯೋಜನೆ

ಕೊರೊನಾ ರೂಲ್ಸ್​ಗೆ ಗೋಲಿ ಹೊಡೆದು ಮಡಿಕೆ ಒಡೆಯೋ ಸ್ಪರ್ಧೆ ಆಯೋಜನೆ

ವಿಜಯಪುರ : ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಆತಂಕವಿದ್ದರು ಕ್ಯಾರೆ ಎನ್ನದೆ ನಗರದ ಡೋಪಳೆ ಗಲ್ಲಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೋವಿಡ್​ ನಿಯಮಗಳನ್ನು ಉಲ್ಲಂಘಿಸಿ ಮಡಿಕೆ ಒಡೆಯೋ‌ ಸ್ಪರ್ಧೆ ಆಯೋಜಿಸಲಾಗಿದೆ.

blank

ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ನಿನ್ನೆ ತಡರಾತ್ರಿವರೆಗೂ ನಡೆದ ಮೊಸರು ಮಡಕೆ ಒಡೆಯೋ ಸ್ಪರ್ಧೆಯಲ್ಲಿ, ನೂರಾರು ಯುವಕರು ಕೋವಿಡ್​ ನಿಯಮಗಳನ್ನು ಮರೆತು ಗುಂಪಾಗಿ ಸೇರಿ ಸಂಭ್ರಮಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖಕ್ಕೆ ಮಾಸ್ಕ್​ ಇಲ್ಲ ಸಾಮಾಜಿಕ ಅಂತರವಂತೂ ಕೇಳೋ ಹಾಗೆ ಇಲ್ಲ. ಜಿಲ್ಲಾಡಳಿತದ ಆದೇಶ ಧಿಕ್ಕರಿಸಿ ಸ್ಪರ್ಧೆ ಆಯೋಜಿಸಿದ್ದರು ಕೂಡ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಮಾತ್ರ ಸೈಲೆಂಟ್​ ಆಗಿದ್ದಾರೆ.

ಕೊರೊನಾ ರೂಲ್ಸ್​ಗೆ ಗೋಲಿ ಹೊಡೆದು ಮಡಿಕೆ ಒಡೆಯೋ ಸ್ಪರ್ಧೆ ಆಯೋಜನೆ

ಇದನ್ನೂ ಓದಿ:  ಕೊರೊನಾ ನಿಯಮ ಉಲ್ಲಂಘಿಸಿ ಶಾಸಕ ರಾಜುಗೌಡ ತವರೂರಲ್ಲಿ ಅದ್ಧೂರಿ ಜಾತ್ರೆ

Source: newsfirstlive.com Source link