ಹಾಸನ ಪೊಲೀಸ್​ ಠಾಣೆ ಕೂಗಳತೆಯಲ್ಲೇ ಪುಡಿರೌಡಿಗಳ ಪುಂಡಾಟ.. ಯುವಕನಿಗೆ ಥಳಿತ

ಹಾಸನ ಪೊಲೀಸ್​ ಠಾಣೆ ಕೂಗಳತೆಯಲ್ಲೇ ಪುಡಿರೌಡಿಗಳ ಪುಂಡಾಟ.. ಯುವಕನಿಗೆ ಥಳಿತ

ಹಾಸನ: ಪೊಲೀಸ್ ಠಾಣೆ ಕೂಗಳತೆ ದೂರದಲ್ಲಿ ಪುಡಿರೌಡಿಗಳು ರಸ್ತೆಯಲ್ಲಿ ಮಚ್ಚು ಹಿಡಿದು ಗಲಾಟೆ ಎಬ್ಬಿಸಿದ ಘಟನೆ ನಗರದ ಕುವೆಂಪು ನಗರ ಬಡಾವಣೆಯಲ್ಲಿ ನಡೆದಿದೆ.

ಹಾಸನ ನಗರದ ಕುವೆಂಪುನಗರ ಬಡಾವಣೆಯ ಜೆಕೆ ಬಾರ್ ಌಂಡ್ ರೆಸ್ಟೋರೆಂಟ್ ಬಳಿ ನಿಂತಿದ್ದ ಯುವಕರ ಬಳಿ ಆಗಮಿಸಿದ ರೌಡಿಗಳ ಗುಂಪು, ಸುಖಾಸುಮ್ಮನೆ ಯುವಕರೊಂದಿಗೆ ಜಗಳ ತೆಗೆದು ಓರ್ವ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಪುಡಿ ರೌಡಿಗಳ ಪುಂಡಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ.

blank

ಇದನ್ನೂ ಓದಿ:  ಅಡ್ಡಾದಿಡ್ಡಿ ಬೈಕ್​ ಓಡಿಸಿ ಬಸ್​ಗೆ ದಾರಿ ಬಿಡದ ಯುವಕ; ಹಿಗ್ಗಾಮುಗ್ಗ ಥಳಿಸಿದ ಸಾರ್ವಜನಿಕರು

ಸುದ್ದಿ ತಿಳಿಯುತ್ತಿದ್ದಂತೆ ತಕ್ಷಣವೇ ಸ್ಥಳಕ್ಕೆ ಬಂದ ಬಡಾವಣೆ ಠಾಣೆ ಇನ್ಸ್​ಪೆಕ್ಟರ್ ಕೃಷ್ಣರಾಜ್, ಆಡುವಳ್ಳಿಯ ನಿತಿನ್‌ ಹಾಗೂ ಚೇತನ್ ಎಂಬುವವರನ್ನು ಬಂಧಿಸಿದ್ದು, ಉಳಿದವರಿಗಾಗಿ ಶೋಧ ನಡೆಸಿದ್ದಾಗಿ ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಮತ್ತೆ ಹೆಚ್ಚಳವಾಯ್ತು ಎಲ್​​​ಪಿಜಿ ಗ್ಯಾಸ್​​​​ ಸಿಲಿಂಡರ್​​​ ಬೆಲೆ.. ಗ್ರಾಹಕರಿಗೆ ಬಿಗ್​​ ಶಾಕ್​

Source: newsfirstlive.com Source link