ಹೆಲಿಕಾಪ್ಟರ್ ಗೆ ಮೃತ ದೇಹವನ್ನು ನೇತು ಹಾಕಿ ಹಾರಾಟ – ಮತ್ತೆ ಶುರುವಾಯ್ತು ಉಗ್ರರ ಅಟ್ಟಹಾಸ

ಕಾಬೂಲ್: ತಾಲಿಬಾನ್ ಉಗ್ರರು ಹೆಲಿಕಾಪ್ಟರ್ ಗೆ ಮೃತ ದೇಹವನ್ನು ನೇತು ಹಾಕಿ ಹಾರಿಸುವ ಮೂಲಕ ವಿಕೃತ ಸುಖ ಪಡೆದಿದ್ದಾರೆ.

ಅಮೆರಿಕ ಸೇನೆ ವಾಪಸ್ ಹೋದ ನಂತರ ತಾಲಿಬಾನ್ ಉಗ್ರರು ಮತ್ತೆ ಚಿಗುರಿಕೊಂಡಿದ್ದಾರೆ. ಈ ಉಗ್ರರು ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಗೆ ಮೃತ ದೇಹವನ್ನು ನೇತು ಹಾಕಿ ಅದನ್ನು ಹಾರಾಟ ಮಾಡುತ್ತಿರುವ ದೃಶ್ಯ ಸೆರೆಯಾಗಿದ್ದು, ನೋಡುಗರಿಗೆ ಮೈ ನಡುಕ ಹುಟ್ಟಿಸುವಂತಿದೆ.ಇದನ್ನೂ ಓದಿ:ದೋಹಾದಲ್ಲಿ ಭಾರತ-ತಾಲಿಬಾನಿಗಳ ಮೊದಲ ಔಪಚಾರಿಕ ಮಾತುಕತೆ

ಹೆಲಿಕಾಪ್ಟರ್ ಗೆ ಮೃತ ದೇಹವನ್ನು ನೇತು ಹಾಕಿ ಹಾರಾಟ ಮಾಡುತ್ತಿರುವ ವೀಡಿಯೋವನ್ನು ‘ಲಿಜ್ ವೀಲರ್’ ಎನ್ನುವವರು ತಮ್ಮ ಟ್ವೀಟರ್ ನಲ್ಲಿ ಹಾಕಿಕೊಂಡಿದ್ದು, ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.ಇದನ್ನೂ ಓದಿ:ಕಾಬೂಲ್ ತೊರೆಯುವ ಮುನ್ನ 73 ಏರ್​​ಕ್ರಾಫ್ಟ್ ನಿಷ್ಕ್ರಿಯಗೊಳಿಸಿದ ಅಮೆರಿಕ ಸೈನಿಕರು

ಈ ವೀಡಿಯೋವನ್ನು ಟ್ವೀಟ್ ಮಾಡಿದ ಅವರು, ಅಮೆರಿಕದ ಬ್ಲ್ಯಾಕ್ ಹಾಕ್ ನಿಂದ ತಾಲಿಬಾನ್‍ಗಳು ಯಾರನ್ನೋ ನೇಣು ಹಾಕಿದ್ದಾರೆ. ಇದನ್ನು ನೋಡಿದರೆ ನನಗೆ ವಾಂತಿ ಬರುತ್ತೆ. ಇದಕ್ಕೆಲ್ಲ ಜೋ ಬೈಡನ್ ಜವಾಬ್ದಾರರು ಎಂದು ಬರೆದಿದ್ದಾರೆ.ಇದನ್ನೂ ಓದಿ:ಕಾರು ಅಪಘಾತಕ್ಕೂ ಮುನ್ನ ಮದ್ಯ ಖರೀದಿಸಿದ್ದ ಇಷಿತಾ, ಬಿಂದು

Source: publictv.in Source link