ಅಫ್ಘಾನಿಸ್ತಾನದಲ್ಲಿ ಮತ್ತೊಂದು ಕ್ರೌರ್ಯ; ಪುರುಷನನ್ನೇ ಅತ್ಯಾಚಾರಗೈದ ತಾಲಿಬಾನಿಗಳು

ಅಫ್ಘಾನಿಸ್ತಾನದಲ್ಲಿ ಮತ್ತೊಂದು ಕ್ರೌರ್ಯ; ಪುರುಷನನ್ನೇ ಅತ್ಯಾಚಾರಗೈದ ತಾಲಿಬಾನಿಗಳು

ಅಫ್ಘಾನಿಸ್ತಾನವನ್ನ ತಾಲಿಬಾನಿಗಳು ವಶಪಡಿಸಿಕೊಂಡ ಬೆನ್ನಲ್ಲೇ ಇದೀಗ ಅಮೆರಿಕ ಸೇನೆ ಅಫ್ಘಾನಿಸ್ತಾನದಿಂದ ತನ್ನ ದೇಶಕ್ಕೆ ವಾಪಸ್ಸಾಗಿದೆ. ಈ ಮಧ್ಯೆ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಕ್ರೌರ್ಯ ಮುಂದುವರೆದಿದೆ.

ಇದನ್ನೂ ಓದಿ: ತಾಲಿಬಾನ್​ ನಾಯಕನೊಂದಿಗೆ ಭಾರತದ ಮೊದಲ ಸಭೆ -ಕೇಂದ್ರದ ವಿರುದ್ಧ ವಿಪಕ್ಷಗಳ ಟೀಕಾಸ್ತ್ರ

ತಾಲಿಬಾನಿಗಳ ಪೈಕಿ ಓರ್ವ ಸಲಿಂಗಕಾಮಿ ಆಫ್ಘನ್ ಪ್ರಜೆಯೋರ್ವನನ್ನ ಅತ್ಯಾಚಾರಗೈದು ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಅತ್ಯಾಚಾರಕ್ಕೊಳಗಾದ ವ್ಯಕ್ತಿಯನ್ನು ಇಬ್ಬರು ತಾಲಿಬಾನಿ ಫೈಟರ್​ಗಳು ದೇಶದಿಂದ ಹೊರಗೆ ಹೋಗಲು ನಿನಗೆ ಸಹಾಯ ಮಾಡುತ್ತೇವೆಂದು ಹೇಳಿ ಕರೆತಂದಿದ್ದರಂತೆ.. ನಂತರ ಆತನ ಮೇಲೆ ಹಲ್ಲೆ ನಡೆಸಿದ ಓರ್ವ ಫೈಟರ್ ನಂತರ ಅತ್ಯಾಚಾರಗೈದಿದ್ದಾರೆ ಎನ್ನಲಾಗಿದೆ. ಅಲ್ಲದೇ ಆ ವ್ಯಕ್ತಿಯ ತಂದೆಯ ನಂಬರ್ ಪಡೆದು ನಿಮ್ಮ ಪುತ್ರ ಸಲಿಂಗ ಕಾಮಿ ಎಂದು ಹೇಳಲು ಪ್ರಯತ್ನ ನಡೆಸಿದ್ದಾರಂತೆ.

ಇದನ್ನೂ ಓದಿ: ತಾಲಿಬಾನ್​ ನಾಯಕನೊಂದಿಗೆ ಭಾರತದ ಮೊದಲ ಸಭೆ -ಕೇಂದ್ರದ ವಿರುದ್ಧ ವಿಪಕ್ಷಗಳ ಟೀಕಾಸ್ತ್ರ

ಅತ್ಯಾಚಾರಕ್ಕೊಳಗಾದ ವ್ಯಕ್ತಿಯ ಸ್ನೇಹಿತ ಟರ್ಕಿಯಲ್ಲಿ ನೆಲೆಸಿರುವ ಆಪ್ಘನ್ ಹಕ್ಕುಗಳ ಹೋರಾಟಗಾರ ಈ ಶಾಕಿಂಗ್ ವಿಚಾರನ್ನ ಮಾಧ್ಯಮಗಳಿಗೆ ತಿಳಿಸಿದ್ದಾನೆ. ಅಲ್ಲದೇ ತಾಲಿಬಾನಿಗಳು ತಾವು ಬದಲಾಗಿದ್ದೇವೆ.. ಮಹಿಳೆಯರ ಹಕ್ಕುಗಳನ್ನು ಗೌರವಿಸುತ್ತೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಅವರು ಬದಲಾಗಿಲ್ಲ.. ಯಾಕಂದ್ರೆ ಅವರ ಸಿದ್ಧಾಂತವೂ ಬದಲಾಗಿಲ್ಲ ಎಂದು ಅತ್ಯಾಚಾರಕ್ಕೊಳಗಾದ ವ್ಯಕ್ತಿಯ ಸ್ನೇಹಿತ ಅರ್ಟೆಮಿಸ್ ಅಕ್ಬರಿ ಮಾಧ್ಯಮಗಳೆದುರು ಅಳಲು ತೋಡಿಕೊಂಡಿದ್ದಾನೆ.

Source: newsfirstlive.com Source link