ಐ ಫೋನ್​​ನಿಂದ ಕೇಕ್​​ ಕಟ್​​ ಮಾಡಿ ಬರ್ತ್​​​ಡೇ ಆಚರಿಸಿಕೊಂಡ ಬಿಜೆಪಿ ಶಾಸಕನ ಪುತ್ರ

ಐ ಫೋನ್​​ನಿಂದ ಕೇಕ್​​ ಕಟ್​​ ಮಾಡಿ ಬರ್ತ್​​​ಡೇ ಆಚರಿಸಿಕೊಂಡ ಬಿಜೆಪಿ ಶಾಸಕನ ಪುತ್ರ

ಕೊಪ್ಪಳ: ಐ ಫೋನ್​​ನಿಂದ ಕೇಕ್ ಕಟ್ ಮಾಡಿ ಬಿಜೆಪಿ ಶಾಸಕ ಬಸವರಾಜ ದಡೇಸೂಗೂರು ಅವರ ಪುತ್ರ ಸುರೇಶ್​​ ಬಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​​ ವೈರಲ್​ ಆಗಿದೆ.

ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೇಸೂಗೂರು ಅವರ ಪುತ್ರ ಮೊಬೈಲ್​ ಫೋನ್​​ನಿಂದ ಕೇಕ್​​ ಕಟ್​ ಮಾಡಿ ಹುಟ್ಟುಹಬ್ಬ ಆಚರಣೆ ಮಾಡಿದ್ದು, ಶಾಸಕರ ಪುತ್ರನ ಹೈಫೈ ಲೈಫ್ ಕಂಡು ಜನರು ನಿಬ್ಬೆರಗಾಗಿದ್ದಾರೆ.

ಬರ್ತ್​​ಡೇ ಆಚರಣೆಯ ವಿಡಿಯೋವನ್ನು ಇನ್​​ಸ್ಟಾಗ್ರಾಮ್​​ನಲ್ಲಿ ಪೋಸ್ಟ್​ ಮಾಡಲಾಗಿದೆ. ಅಂದಹಾಗೆ ಬಿಜೆಪಿ ಶಾಸಕ ಬಸವರಾಜ ದಡೇಸೂಗೂರು ಕಳೆದ ಚುನಾವಣೆಯಲ್ಲಿ ಕ್ಷೇತ್ರದ ಜನರ ಬಳಿ ದೇಣಿಗೆ ಪಡೆದು ಚುನಾವಣೆಗೆ ಸ್ಪರ್ಧೆ ಮಾಡಿದ್ದರಂತೆ. ನಾನು ಬಡವ ಎಂದು ಚುನಾವಣೆಯಲ್ಲಿ ಜನರಿಂದ ದೇಣಿಗೆ ನೀಡುವಂತೆ ಮನವಿ ಮಾಡಿದ್ದ ಶಾಸಕರಿಗೆ ಕ್ಷೇತ್ರದ ಜನರು ತಮ್ಮ ಮನೆಯಲ್ಲಿದ್ದ ಭತ್ತ, ಕುರಿ ಸೇರಿದಂತೆ ಹಣವನ್ನು ದೇಣಿಗೆಯಾಗಿ ನೀಡಿದ್ದರು.

Source: newsfirstlive.com Source link