ಬೆಲೆ ಏರಿಕೆ ಶಾಕ್ – ಮತ್ತೆ ಎಲ್‍ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ

ನವದೆಹಲಿ: ಬೆಲೆ ಏರಿಕೆಯ ಬಿಸಿ ಸದ್ಯಕ್ಕೆ ಸಾಮಾನ್ಯ ಜನರ ಬೆನ್ನು ಬಿಡುವಂತೆ ಕಾಣುತ್ತಿಲ್ಲ. ಒಂದಾದ ಮೇಲೆ ಒಂದರಂತೆ ಬೆಲೆ ಏರಿಕೆಯಾಗುತ್ತಿದ್ದು ಎಲ್‍ಪಿಜಿ ಸಿಲಿಂಡರ್ ಬೆಲೆ ಏರಿಕೆಯೂ ಬ್ರೇಕ್ ಬಿಳುತ್ತಿಲ್ಲ. ಇಂದೂ ಗೃಹ ಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆಯಲ್ಲಿ 25 ರೂ. ಏರಿಕೆಯಾಗಿದ್ದು ಸಬ್ಸಿಡಿ ರಹಿತ 14.2 ಕೆಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 884 ರೂ.ಗೆ ಏರಿಕೆಯಾಗಿದೆ.

ಇನ್ನು ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆಯೂ 75 ರೂ. ಹೆಚ್ಚಳವಾಗಿದ್ದು ದೆಹಲಿಯಲ್ಲಿ ಸಿಲಿಂಡರ್ ಬೆಲೆ 1,693 ರೂ.ಗೆ ಏರಿಕೆಯಾಗಿದೆ. ಬೆಲೆ ಏರಿಕೆಯಿಂದ ಬೆಂಗಳೂರಿನಲ್ಲಿ ಗೃಹ ಬಳಕೆಯ 14.2 ಕೆಜಿ ಸಿಲಿಂಡರ್ ಬೆಲೆ 887.50 ರೂ. ಹಾಗೂ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ 1760.50 ರೂ. ಏರಿಕೆಯಾಗಿದೆ. ಇದನ್ನೂ ಓದಿ : ನಾನು ಜೈಲಲ್ಲಿ ಇದ್ದೆ, ಒಂದು ಬೀಡಿಗೆ ಎಷ್ಟು ದುಡ್ಡು ಕೊಡ್ಬೇಕು ಗೊತ್ತು : ಆರಗ ಜ್ಞಾನೇಂದ್ರ

ದೇಶದಲ್ಲಿ ಸಿಲಿಂಡರ್ ಬೆಲೆ ಪದೇ ಪದೇ ಏರಿಕೆಯಾಗುತ್ತಿದೆ. ಮಾರ್ಚ್ 1, 2014ಕ್ಕೆ ಹೋಲಿಸಿಕೊಂಡರೇ ಎಲ್ಪಿಜಿ ಬೆಲೆ ದುಪ್ಪಟ್ಟಾಗಿದೆ. 2014 ರಲ್ಲಿ ಗೃಹ ಬಳಕೆಯ ಸಿಲಿಂಡರ್ ಬೆಲೆ 410.50. ಇತ್ತು ಇಂದು ಇದು 887.50 ರೂಪಾಯಿಗೆ ಏರಿಕೆಯಾಗಿದೆ. ಇದನ್ನೂ ಓದಿ : ಕಾರು ಅಪಘಾತಕ್ಕೂ ಮುನ್ನ ಮದ್ಯ ಖರೀದಿಸಿದ್ದ ಇಶಿತಾ, ಬಿಂದು 

ಕಳೆದ ಹದಿನೈದು ದಿನಗಳ ಹಿಂದೆಯಷ್ಟೇ 25 ರೂ. ಏರಿಕೆ ಮಾಡಲಾಗಿತ್ತು. ಇದಕ್ಕೂ ಮೊದಲು ಫೆಭ್ರವರಿ ಆರಂಭದಲ್ಲಿ 25 ರೂ., ಫೆಬ್ರವರಿ 15 ರಂದು 50 ರೂ., ಫೆಬ್ರವರಿ 25 ರಂದು 25 ರೂ., ಮಾರ್ಚ್ ಆರಂಭದಲ್ಲಿ 25 ರೂಪಾಯಿ ಏರಿಕೆಯಾಗಿತ್ತು.

ಅಗಸ್ಟ್ ನಲ್ಲಿ ಬೆಲೆ ಏರಿಕೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ 10 ರೂಪಾಯಿ ಬೆಲೆ ಇಳಿಕೆ ಮಾಡಲಾಗಿತ್ತು. 2021 ರಲ್ಲಿ ಗೃಹ ಬಳಕೆ ಎಲ್‍ಪಿಜಿ ಸಿಲಿಂಡರ್ ಮೇಲೆ 165.50 ರೂಪಾಯಿ ಬೆಲೆ ಏರಿಕೆಯಾಗಿದೆ.

Source: publictv.in Source link