ನಾನು MP ಆಗ್ತೀನಿ ಅಂತ ಕನಸಲ್ಲೂ ನೆನೆಸಿರಲಿಲ್ಲ.. ದೇವರು ಬರೆದಂತೆ ಭವಿಷ್ಯ- ಸುಮಲತಾ ಹೀಗಂದಿದ್ದೇಕೆ?

ನಾನು MP ಆಗ್ತೀನಿ ಅಂತ ಕನಸಲ್ಲೂ ನೆನೆಸಿರಲಿಲ್ಲ.. ದೇವರು ಬರೆದಂತೆ ಭವಿಷ್ಯ- ಸುಮಲತಾ ಹೀಗಂದಿದ್ದೇಕೆ?

ಮಂಡ್ಯ: ಜಿಲ್ಲೆಯ ಹನಕೆರೆ ಗ್ರಾಮದಲ್ಲಿ ಮನೆ ಭೂಮಿ ಪೂಜೆ ಬಳಿಕ ಸಂಸದೆ ಸುಮಲತಾ ಅಂಬರೀಶ್ ಹೇಳಿಕೆ ನೀಡಿ.. 2ವರ್ಷದ ಹುಡುಕಾಟ ಬಳಿಕ ಮನೆ ನಿರ್ಮಾಣಕ್ಕೆ ಉತ್ತಮ ಜಾಗ ಸಿಕ್ಕಿದೆ.. ಮಂಡ್ಯ ಹಾಗೂ ಮದ್ದೂರಿಗೆ ಹತ್ತಿರವಾಗುವ ಕಾರಣ ಹನಕೆರೆಯಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದೇವೆ. ಹೆದ್ದಾರಿಗೆ ಹತ್ತಿರವಿರುವ ಹಿನ್ನೆಲೆ ಜನ ಬರುವುದಕ್ಕೂ ಸಹಾಯ ಆಗುತ್ತೆ ಎಂದಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ಮನೆ ನಿರ್ಮಾಣಕ್ಕೆ ಮುಂದಾದ ಸುಮಲತಾ -ಇಂದು ಗುದ್ದಲಿ ಪೂಜೆ

ಅಭಿಷೇಕ್ ಅಂಬರೀಶ್​ಗೆ ರಾಜಕೀಯ ನೆಲೆ ಕಲ್ಪಿಸಲು ಹನಕೆರೆಯಲ್ಲಿ ಮನೆ ನಿರ್ಮಾಣ ಮಾಡಲಾಗ್ತಿದೆಯಾ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ.. ಯಾರ್ಯಾರ ಮನಸ್ಸಲ್ಲಿ ಏನೇನು ಇದೆಯೋ, ಅವರ ಊಹೆಗಳಿಗೆ ನಾನು ಪ್ರತಿಕ್ರಿಯೆ ನೀಡಲ್ಲ.. ಚುನಾವಣೆ ಸಂದರ್ಭದಲ್ಲಿ ಜನರಿಗೆ ನೀಡಿದ ಭರವಸೆಗಳನ್ನ ಈಡೇರಿಸುತ್ತಿದ್ದೇನೆ. ಮಂಡ್ಯದಲ್ಲೇ ಸ್ವಂತ ಮನೆ ಮಾಡುವ ಮಾತು ಕೊಟ್ಟಿದ್ದೆ ಅದರಂತೆ ಮನೆಯನ್ನು ಕಟ್ಟುತ್ತಿದ್ದೇನೆ.. ಮಂಡ್ಯ ಮಣ್ಣಿನ ತಿಲಕ ಹಚ್ಚಿ ಅಂಬರೀಶ್‌ರವರನ್ನ ಕಳುಹಿಸಿಕೊಟ್ಟಿದ್ದೇವೆ.. ಇಲ್ಲೇ ವಾಸಮಾಡುಬೇಕು ಎಂಬುದು ನನ್ನ ಹಾಗೂ ಅಭಿ ಆಸೆ. ಹಾಗಾಗಿ ಇವತ್ತು ಮನೆ ನಿರ್ಮಾಣಕ್ಕೆ ಚಾಲನೆ ಸಿಕ್ಕಿದೆ ಎಂದರು.

ಇದನ್ನೂ ಓದಿ: ‘ಸುಮಲತಾ ಸುತ್ತ ಗೂಂಡಾಗಳು, ಫ್ರಾಡ್​​ಗಳಿದ್ದಾರೆ’ -ರವೀಂದ್ರ ಶ್ರೀಕಂಠಯ್ಯ ಗಂಭೀರ ಆರೋಪ

ಜನ ಬಯಸಿದ್ರೆ ಅಭಿ ಸ್ಪರ್ಧೆನಾ ಎಂಬ ಪ್ರಶ್ನೆಗೆ ಅಭಿಯನ್ನೇ ಕೇಳಿ ಎಂದ ಸುಮಲತಾ.. ನನ್ನ ಒಪ್ಪಿಗೆ ಇದೆಯೋ ಇಲ್ವೋ.? *ಸಂದರ್ಭ, ಸಮಯ ಯಾವ ರೀತಿ ಇರುತ್ತೋ ನೋಡೋಣ. ಯಾವುದೂ ನಮ್ಮ ಕೈಲಿ ಇರೋದಿಲ್ಲ. ನಾನು ರಾಜಕೀಯಕ್ಕೆ ಬರ್ತೀನಿ, ಎಂಪಿ ಆಗ್ತೀನಿ ಅಂತ ಕನಸಲ್ಲೂ ನೆನಸಿರಲಿಲ್ಲ.. ದೇವರು ಬರೆದಂತೆ ಭವಿಷ್ಯ ಇರುತ್ತೆ, ನಮ್ಮ ಪ್ಲಾನಿಂಗ್ ಪ್ರಕಾರ ಯಾವುದೂ ನಡೆಯಲ್ಲ.. 9-10 ತಿಂಗಳಲ್ಲಿ ಮನೆ ನಿರ್ಮಾಣವಾಗಬಹುದು. ಜನರಿಗೆ ಉಪಯೋಗವಾಗುವಂತೆ ಸಿಂಪಲ್ ಆಗಿ ಮನೆ ನಿರ್ಮಾಣ ಮಾಡ್ತೇವೆ ಎಂದಿದ್ದಾರೆ.

Source: newsfirstlive.com Source link