ಮೈಸೂರು: ಸ್ನೇಹಿತರಿಬ್ಬರ ಜಗಳ ಕೊಲೆಯಲ್ಲಿ ಅಂತ್ಯ

ಮೈಸೂರು: ಸ್ನೇಹಿತರಿಬ್ಬರ ಜಗಳ ಕೊಲೆಯಲ್ಲಿ ಅಂತ್ಯ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಲ್ಲಿ ದಿನೇ ದಿನೆ ಕ್ರೈಂ ರೇಟ್ ಹೆಚ್ಚುತ್ತಿದೆ. ಶೂಟೌಟ್, ಗ್ಯಾಂಗ್‌ ರೇಪ್ ಪ್ರಕರಣದ ಬೆನ್ನಲ್ಲೇ ಮತ್ತೊಂದು ಕೊಲೆ ಪ್ರಕರಣ ಸದ್ಯ ನಗರದಲ್ಲಿ ಬೆಳಕಿಗೆ ಬಂದಿದ್ದು, ಸ್ನೇಹಿತರಿಬ್ಬರ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ವರದಿಯಾಗಿದೆ.

ಮೂರು ದಿನಗಳ ಹಿಂದೆ ನಗರದ ಬೋಗಾದಿ ರಸ್ತೆಯಲ್ಲಿ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಾರದಾ ದೇವಿ ನಗರದ ನಿವಾಸಿ ಉಮೇಶ್ ಅಲಿಯಾಸ್ ಬೋಸಿ ಮತ್ತು ಪೃಥ್ವಿ ಎಂಬ ಇಬ್ಬರ ಸ್ನೇಹಿತರ ನಡುವೆ ನಡೆದ ಜಗಳದಲ್ಲಿ ಪೃಥ್ವಿ, ಉಮೇಶ್ ಅಲಿಯಾಸ್ ಬೋಸಿ(30)ಎಂಬಾತನನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಸರಸ್ವತಿಪುರಂ ಠಾಣಾ ವ್ಯಾಪ್ತಿಯಲ್ಲಿ ಬೋಗಾದಿಯಲ್ಲಿ ಕೊಲೆ ನಡೆದಿದೆ ಎಂದು ದೂರು ದಾಖಲಿಸಲಾಗಿದ್ದು, ಪೊಲೀಸರು ಕೊಲೆ ಸಂಬಂಧ ಮೂವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:  ಮೈಸೂರು; ಚಿನ್ನಾಭರಣ ಅಂಗಡಿಯಲ್ಲಿ ಫೈರಿಂಗ್​ ಕೇಸ್.. ಪಾಕ್​​ ಗಡಿಯಲ್ಲಿ ಆರೋಪಿಗಳ ಬಂಧನ

Source: newsfirstlive.com Source link