ಸುಮಲತಾ ಸ್ವಂತ ಮನೆ ನಿರ್ಮಾಣ ಹಿಂದಿದೆಯಾ ಪುತ್ರನ ರಾಜಕೀಯ ಭವಿಷ್ಯ ಲೆಕ್ಕಾಚಾರ?

ಸುಮಲತಾ ಸ್ವಂತ ಮನೆ ನಿರ್ಮಾಣ ಹಿಂದಿದೆಯಾ ಪುತ್ರನ ರಾಜಕೀಯ ಭವಿಷ್ಯ ಲೆಕ್ಕಾಚಾರ?

ಮಂಡ್ಯ: 2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಜನರಿಗೆ ಮಾತು ಕೊಟ್ಟಂತೆ ಸಂಸದೆ ಸುಮಲತಾ ಅಂಬರೀಶ್ ಅವರು ಜಿಲ್ಲೆಯಲ್ಲಿ ಸ್ವತಃ ಮನೆ ನಿರ್ಮಾಣ ಮಾಡಲು ಇಂದು ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಇದೇ ವೇಳೆ ಸುಮಲತಾ ಅವರು ಸ್ವತಃ ನಿವಾಸ ನಿರ್ಮಿಸುವುದರ ಹಿಂದೆ ಪುತ್ರ ಅಭಿಷೇಕ್​ ಅವರ ರಾಜಕೀಯ ಭವಿಷ್ಯದ ಚಿಂತನೆ ದೂರದೃಷ್ಟಿ ಇದೆ ಎಂಬ ಮಾತು ಮಂಡ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

blank

ಸದ್ಯ ಸುಮಲತಾ ಅವರು ಮಂಡ್ಯ-ಮದ್ದೂರು ನಡುವಿನ ಹನಕೆರೆ ಗ್ರಾಮದಲ್ಲಿ ಸ್ವಂತ ಮನೆ ನಿರ್ಮಾಣ ಮಾಡಲು ಮುಂದಾಗಿದ್ದು, ತನ್ನ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹನಕೆರೆ ಶಶಿ ಎಂಬುವರಿಂದ ಸ್ಥಳ ಖರೀದಿ ಮಾಡಿದ್ದಾರೆ. ಅರ್ಧ ಎಕರೆ ಜಾಗದಲ್ಲಿ ಮನೆ ಮಾಡಲು ಇಂದು ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಮುಂದಿನ 6-7 ತಿಂಗಳಲ್ಲಿ ಮನೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆ ಇದೆ.

blank

ಸುಮ್ನಿರಣ್ಣಾ ಅದೆಲ್ಲ ಮಾತಾಡ್ಬೇಡಾ..

ಅಂದಹಾಗೇ, ಸುಮಲತಾ ನಿವಾಸ ಗುದ್ದಲಿ ಪೂಜೆ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಶುರುವಾಗಿರುವ ಚರ್ಚೆಗೆ ಅಭಿಷೇಕ್​​ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಮಾತು ಕಾರಣವಾಗಿದೆ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಭಿಷೇಕ್​, ಮಂಡ್ಯದಲ್ಲಿ ಮನೆ ಮಾಡೇ ಮಾಡ್ತೀವಿ ಅಂತಾ ಅಮ್ಮ ಮಾತು ಕೊಟ್ಟಿದ್ರು. ಎರಡು ವರ್ಷ ಬಾಡಿಗೆ ಮನೆಯಲ್ಲಿದ್ವೀ. ಈಗ ಶಶಿಯವರಿಂದ ಜಾಗ ತೆಗೆದುಕೊಂಡಿದ್ದೀವಿ, ಸರಳವಾಗಿ ಮನೆ ಮಾಡ್ತಿದ್ದೀವಿ. ಮದ್ದೂರು ಕ್ಷೇತ್ರದ ಚುನಾವಣೆಗೆ ಸ್ಪರ್ಧೆ ಮಾಡೋ ವಿಚಾರವಾಗಿ ಈಗಾಗಲೇ ಸ್ಪಷ್ಟನೆ ನೀಡಿದ್ದೀನಿ. ಅಭಿಮಾನಿಗಳಿಗೆ ನಾವು ಜೊತೆಯಲ್ಲಿರಬೇಕು, ಬೆಳೆಯಬೇಕು ಎಂಬ‌ ಆಸೆ. ಇಲ್ಲಿಯವರೆಗು ಬೆಳಸಿದ್ದಾರೆ, ಮುಂದಕ್ಕೂ ಬೆಳೆಸುತ್ತಾರೆ. ಚುನಾವಣೆಗೆ ಸ್ಪರ್ಧೆ ಮಾಡೋದು ನಮ್ಮ ಇಚ್ಛೆಯಲ್ಲ, ಅದು ಜನರ ಇಚ್ಛೆ. ಮುಂದಕ್ಕೆ ಎಲ್ಲವೂ ನಿಮಗೆ ಗೊತ್ತಾಗುತ್ತೆ ಎಂದು ಹೇಳಿದರು.

blank

Source: newsfirstlive.com Source link