ಮ್ಯಾಟ್ರಿಮೋನಿ ದೋಖಾ: ಮದುವೆಯಾಗುವುದಾಗಿ ಹೇಳಿ ಹಣ ಪಡೆದು ವಂಚಿಸ್ತಿದ್ದ ಆರೋಪಿ ಅಂದರ್​

ಮ್ಯಾಟ್ರಿಮೋನಿ ದೋಖಾ: ಮದುವೆಯಾಗುವುದಾಗಿ ಹೇಳಿ ಹಣ ಪಡೆದು ವಂಚಿಸ್ತಿದ್ದ ಆರೋಪಿ ಅಂದರ್​

ಬೆಂಗಳೂರು: ಮ್ಯಾಟ್ರಿಮೋನಿಯಲ್ಲಿ ನಕಲಿ ಖಾತೆ ಕ್ರಿಯೇಟ್ ಮಾಡಿ ಮದುವೆಯಾಗುವುದಾಗಿ ನಂಬಿಸಿ ವಂಚಿಸುತ್ತಿದ್ದ ಖತರ್ನಾಕ್​ ಕಿಲಾಡಿಯನ್ನು ಹೆಣ್ಣೂರು ಪೊಲೀಸರು ಬಂಧಸಿದ್ದು, ಅಪಾರ ಪ್ರಮಾಣದ ಚಿನ್ನಾಭರಣ ಸೇರಿದಂತೆ ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ

blank

ಜಗನ್ನಾಥ್ (34) ಬಂಧಿತ ಆರೋಪಿ. ಮೂಲತ: ಬಿಜಾಪುರದವನಾದ ಆರೋಪಿ ರಮೇಶ್, ವಿಜಯ್ ಹೀಗೆ ಬೇರೆ ಬೇರೆ ಹೆಸರಲ್ಲಿ ನಕಲಿ ಖಾತೆ ಕ್ರಿಯೇಟ್ ಮಾಡಿ, ಹಣ, ಆಭರಣ ಪಡೆದು ಮದುವೆಯಾಗದೇ ನಂಬರ್ ಬ್ಲಾಕ್ ಮಾಡಿ ವಂಚಿಸುತ್ತಿದ್ದ ಎಂಬ ಆರೋಪ ಕೇಳಿ ಬಂದಿದ್ದು, ಇದುವರೆಗೂ ಹತ್ತು ಮಂದಿ ಯುವತಿಯರಿಗೆ ವಂಚಿಸಿದ್ದಾನೆ ಎನ್ನಲಾಗಿದೆ.

ವಿಚ್ಛೇದನ ಆದ ಯುವತಿಯರೇ ಟಾರ್ಗೆಟ್​!

ಸಿವಿಲ್ ಎಂಜಿನಿಯರ್ ಅಂತ ಪರಿಚಯ ಮಾಡಿಕೊಳ್ಳುತ್ತಿದ್ದ ಆರೋಪಿ, 30 ವರ್ಷ ಮೇಲ್ಪಟ್ಟ ವಿಚ್ಛೇದನ ಆಗಿರುವ ಯುವತಿಯರನ್ನೇ ಟಾರ್ಗೆಟ್ ಮಾಡ್ತಿದ್ದನಂತೆ. ಮ್ಯಾಟ್ರಿಮೋನಿಯಲ್ಲಿ ಸಂಪರ್ಕ ಬೆಳೆಸಿ ನನಗೆ ಆಕ್ಸಿಡೆಂಟ್ ಆಗಿದೆ, ಕ್ರೆಡಿಟ್ ಕಾರ್ಡ್ ಬ್ಲಾಕ್ ಆಗಿದೆ, ಸೈಟ್ ಖರೀದಿ ಮಾಡಲಿಕ್ಕೆ ಹಣ ಬೇಕು ಅಂತ ಹೇಳಿ ಹಣ ವಸೂಲಿ ಮಾಡ್ತಿದ್ದ ಅಂತ ಹೇಳಲಾಗಿದೆ.

blank

ಈ ಹಿಂದೆ ಕಾರಿನಲ್ಲಿ ಆಕ್ಸಿಡೆಂಟ್ ಆಗಿದ್ದ ಪೊಟೊ ಬಳಸಿ ಹಣ ವಸೂಲಿ ಮಾಡ್ತಿದ್ದ ಆರೋಪಿ, ಸಂಪರ್ಕ ಬೆಳೆದ ನಂತರ ಮೊದಲೆರಡು ಬಾರಿ ಯುವತಿಯರನ್ನ ಭೇಟಿ ಆಗಿ ಮದುವೆಯಾಗುವುದಾಗಿ ನಂಬಿಸ್ತಿದ್ದ. ನಂತರ ಬೇರೆ ಬೇರೆ ಕಾರಣ ಹೇಳಿ ಹಣ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ:  ಆಕ್ವಾ ಬ್ಲೂ ಬಿಕಿನಿಯಲ್ಲಿ ಹಾಟ್‌ ಪೋಸ್‌ ಕೊಟ್ಟು ಪಡ್ಡೆ ಹುಡುಗರ ನಿದ್ದೆ ಕದ್ದ ಸನ್ನಿ

blank

ಸದ್ಯ ಆರೋಪಿ ವಿರುದ್ದ ಇದುವರೆಗೂ ಮೂರು ಯುವತಿಯರು ದೂರು ದಾಖಲಿಸಿದ್ದು, ಬನಶಂಕರಿ, ಹೆಣ್ಣೂರು, ಬಾಗಲೂರು ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಪ್ರಕರಣ ಸಂಬಂಧಿಸಿ ಹೆಣ್ಣೂರು ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಬರೋಬ್ಬರಿ 5 ಲಕ್ಷ 80 ಸಾವಿರ ಮೌಲ್ಯದ ಚಿನ್ನಾಭರಣ, ಒಂದು ರೆನಾಲ್ಟ್ ಕಿಟ್ಜ್ ಕಾರನ್ನು ವಶಕ್ಕೆ ಪಡೆದಿದ್ದಾರೆ ಎಂದು ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಏಕಾಏಕಿ ರಸ್ತೆ ಕುಸಿತವಾಗಿ ಟಿಪ್ಪರ್ ಪಲ್ಟಿ -ಅದೃಷ್ಟವಶಾತ್ ತಪ್ಪಿದ ಅನಾಹುತ

Source: newsfirstlive.com Source link