ಮೆಟ್ರೋ ಉದ್ಘಾಟನೆ ವೇಳೆ ‘ಕನ್ನಡ’ ಕಡೆಗಣನೆ; BMRCLಗೆ ಖಡಕ್ ಸೂಚನೆ ಕೊಟ್ಟ ಸಚಿವ ಸುನಿಲ್ ಕುಮಾರ್

ಮೆಟ್ರೋ ಉದ್ಘಾಟನೆ ವೇಳೆ ‘ಕನ್ನಡ’ ಕಡೆಗಣನೆ; BMRCLಗೆ ಖಡಕ್ ಸೂಚನೆ ಕೊಟ್ಟ ಸಚಿವ ಸುನಿಲ್ ಕುಮಾರ್

ಬೆಂಗಳೂರು: ಕೆಂಗೇರಿ ಮೆಟ್ರೋ ಉದ್ಘಾಟನೆ ಸಮಾರಂಭದ ವೇಳೆ ಕನ್ನಡ ಕಡಗಣನೆ ವಿಚಾರವಾಗಿ BMRCLಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಖಡಕ್ ಸೂಚನೆ ನೀಡಿದ್ದಾರೆ. ಆಡಳಿತ ಭಾಷೆ ಕನ್ನಡವನ್ನ ಕಡೆಗಣನೆ ಮಾಡಿದ ಅಧಿಕಾರಿ ಮೇಲೆ ಕೂಡಲೇ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಸಚಿವ ವಿ. ಸುನಿಲ್ ಕುಮಾರ್​ ಬಿಎಂಆರ್​ಸಿಎಲ್​ ಎಂಡಿಗೆ ಪತ್ರ ಬರೆದಿದ್ದಾರೆ.

ಕನ್ನಡ ಆಡಳಿತ ಭಾಷೆ ಅಧಿಕೃತ ಭಾಷೆ ಎಂದು ಸರ್ಕಾರ ಹೇಳಿದ್ರೂ ಕೂಡ.. ಅಧಿಕಾರಿಗಳ ನಿರ್ಲಕ್ಷ್ಯವನ್ನ ಸರ್ಕಾರ ಸಹಿಸೋಲ್ಲ. ಸರ್ಕಾರ ಇದನ್ನ ಗಂಭೀರವಾಗಿ ಸ್ವೀಕರಿಸಿದೆ. ಕಾರ್ಯಕ್ರಮ ಆಯೋಜನೆ ಮಾಡಿದ ಅಧಿಕಾರಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು.. ಸರ್ಕಾರಿ ಕಾರ್ಯಕ್ರಮದಲ್ಲೇ ಈ ರೀತಿಯ ನಿರ್ಲಕ್ಷ್ಯ ಖಂಡನೀಯ. ಯಾವುದೇ ಸರ್ಕಾರಿ ಕಾರ್ಯದಲ್ಲಿ ಕನ್ನಡ ಬಳಕೆ ಕಡ್ಡಾಯ. ಅಂದಿನ ಕಾರ್ಯಕ್ರಮದ ವೇದಿಕೆ ಮೇಲೆ ಹಾಕಿದ್ದ ಫಲಕದಲ್ಲಿ ಕನ್ನಡ ಬಳಕೆ ಮಾಡಿಲ್ಲ.

ಇದನ್ನೂ ಓದಿ: ‘ನಮ್ಮ ಮೆಟ್ರೋ’ ಕಾರ್ಯಕ್ರಮದಲ್ಲಿ ಕನ್ನಡ ಮರೆತ BMRCL; ವಾಟಾಳ್​​​​​, ಗುಂಡೂರಾವ್​​​​ ಆಕ್ರೋಶ

ಈಗಾಗಲೇ ಮೆಟ್ರೋ ಎಂಡಿಗೆ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ ಕುರಿತು ಸ್ಪಸ್ಟಿಕರಣ ನೀಡಲು ನೋಟಿಸ್ ನೀಡಲಾಗಿದೆ.. ಹೀಗಾಗಿ BMRCL ಮುಖ್ಯಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ ಚೌಹಾಣ್ ಅವರ ತಲೆದಂಡವಾಗುತ್ತಾ ಎಂಬ ಕುತೂಹಲ ಸೃಷ್ಟಿಯಾಗಿದೆ. ಕನ್ನಡ ಕಡೆಗಣನೆ ವಿಚಾರವಾಗಿ ತನ್ನದೇ ತಪ್ಪು ಇದನ್ನ ಮನ್ನಿಸಿ ಎಂದು ಯಶವಂತ ಚೌಹಾಣ್ ಈ ಹಿಂದೆ ಮನವಿ ಮಾಡಿದ್ದರು.

Source: newsfirstlive.com Source link