ಭಾರೀ ಮಳೆಗೆ ಕೆರೆಯಂತಾದ ದೆಹಲಿ ರಸ್ತೆಗಳು

ನವದೆಹಲಿ: ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ರಾಷ್ಟ್ರ ರಾಜಧಾನಿ ದೆಹಲಿ ಅಸ್ತವ್ಯಸ್ತವಾಗಿದೆ.

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ದೆಹಲಿ ಅಸ್ತವ್ಯಸ್ತವಾಗಿದೆ. ಈ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ರಸ್ತೆಗಳೆಲ್ಲ ಕೆರೆಗಳಾಗಿ ಬದಲಾಗಿವೆ. ಇಂದಿನಿಂದ ನಾಲ್ಕು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.ಇದನ್ನೂ ಓದಿ:ಸಾರ್ವಜನಿಕ ಗಣೇಶೋತ್ಸವ ಸೆಪ್ಟೆಂಬರ್ 5 ರಂದು ತೀರ್ಮಾನ : ಬೊಮ್ಮಾಯಿ

ಮಂಗಳವಾರ ಬೆಳಗ್ಗೆ ಅರ್ಧ ಗಂಟೆ ಸುರಿದ ಮಳೆಯಿಂದಾಗಿ ರಸ್ತೆಗಳ ಮೇಲೆ ನೀರು ನಿಂತಿತ್ತು. ಇಂದು ಬೆಳಗ್ಗೆಯಿಂದ ಸುರಿಯುತ್ತಿರುವ ಮಳೆಗೆ ರಸ್ತೆಗಳ ಮೇಲೆ ಎರಡರಿಂದ ಮೂರು ಅಡಿವರೆಗೂ ನೀರು ನಿಂತಿದ್ದು, ಸವಾರರು ವಾಹನ ಚಲಾಯಿಸಲು ಪರದಾಡುತ್ತಿದ್ದಾರೆ.

ಲೋಧಿ ರಸ್ತೆ, ಗ್ರೀನ್ ಪಾರ್ಕ್, ಸಬ್ದರ್‍ಜಂಗ್, ಅಶೋಕ್ ವಿಹಾರ್, ಮಯೂರ್ ವಿಹಾರ್, ಪಟೇಲ್ ನಗರ್ ಸೇರಿದಂತೆ ದೆಹಲಿಯ ನಗರ ಹಾಗೂ ಎನ್‍ಸಿಆರ್‍ನ ಗುರುಗ್ರಾಮ, ಮಾನೇಸರ್, ಫರಿದಾಬಾದ್, ನೋಯ್ಡಾ, ಗ್ರೇಟರ್ ನೋಯ್ಡಾ, ಇಂದಿರಪುರಂ, ಲೋನಿ ಡೆಹಾಟ್, ಹಿಂಡನ್ ಏರ್‍ಬೇಸ್, ಗಾಜಿಯಾಬಾದ್ ಮತ್ತು ದಾದ್ರಿಯಲ್ಲಿ ಮುಂದಿನ ಎರಡು ಗಂಟೆ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.ಇದನ್ನೂ ಓದಿ:ಹೆಲಿಕಾಪ್ಟರ್ ಗೆ ಮೃತ ದೇಹವನ್ನು ನೇತು ಹಾಕಿ ಹಾರಾಟ – ಮತ್ತೆ ಶುರುವಾಯ್ತು ಉಗ್ರರ ಅಟ್ಟಹಾಸ

ಜಂಗಪುರ ಎಕ್ಸ್‍ಟೆನ್ಷನ್, ಡಿಫೆನ್ಸ್ ಕಾಲೋನಿ, ಮಹಾರಾಣಿ ಬಾಗ್, ಮಾಳವೀಯ ನಗರ, ಗರ್ಹಿ ಗ್ರಾಮ, ಸಂಗಮ್ ವಿಹಾರ್, ವಿಜ್ಞಾನ ಲೋಕ್, ಮತ್ತು ಲಕ್ಷ್ಮಿ ನಗರಗಳಂತಹ ವಸತಿ ಪ್ರದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ನುಗ್ಗಿದೆ.

Source: publictv.in Source link