ಡಾ.ರಾಜ್​​ಕುಮಾರ್, ಶಂಕರ್​ನಾಗ್ ಪುತ್ಥಳಿ ತೆರವು ಮಾಡಲು BBMP ನಿರ್ಧಾರ? ಯಾಕೆ?

ಡಾ.ರಾಜ್​​ಕುಮಾರ್, ಶಂಕರ್​ನಾಗ್ ಪುತ್ಥಳಿ ತೆರವು ಮಾಡಲು BBMP ನಿರ್ಧಾರ? ಯಾಕೆ?

ಬೆಂಗಳೂರು : ನಗರದಲ್ಲಿ ಅನಧಿಕೃತವಾಗಿ ಸ್ಥಾಪನೆ ಮಾಡಿರುವ ಪುತ್ಥಳಿಗಳನ್ನು ತೆರವು ಮಾಡುವುದಕ್ಕೆ ಬಿಬಿಎಂಪಿ ಮುಂದಾಗಿದ್ದು, ಕನ್ನಡದ ಮೇರು ನಟರ ಪುತ್ಥಳಿಗಳು ಎತ್ತಂಗಡಿ ಆಗುವ ಸಾಧ್ಯತೆಗಳಿವೆ.

ಹೈಕೋರ್ಟ್ ಆದೇಶದಂತೆ ಪೊಲೀಸ್ ಇಲಾಖೆ ಮತ್ತು ಬಿಬಿಎಂಪಿಯಿಂದ ಅನಧಿಕೃತ ಪುತ್ಥಳಿಗಳ ತೆರವಿಗೆ ತಯಾರಿ ನಡೆಸಲಾಗಿದ್ದು, ಬಿಬಿಎಂಪಿ ಪರವಾನಗಿ ಪಡೆಯದೇ ಅನಧಿಕೃತವಾಗಿ ನಿರ್ಮಿಸಲಾದ ಧ್ವಜ ಕಂಬಗಳು, ಪುತ್ಥಳಿಗಳನ್ನು ತೆರವುಗೊಳಿಸಲು ಬಿಬಿಎಂಪಿ ಈಗಾಗಲೇ ಸರ್ವೇ ಆರಂಭಿಸಿದೆ.

ಇದನ್ನೂ ಓದಿ:ಸ್ಯಾಂಡಲ್‌ವುಡ್ ಡ್ರಗ್ ಡೀಲ್: 1 ವರ್ಷದಿಂದ ತಲೆ ಮರೆಸಿಕೊಂಡಿದ್ದ ಆರೋಪಿಯ ಹೆಡೆಮುರಿ ಕಟ್ಟಿದ CCB 

ನಗರದಲ್ಲಿರೋ ಕನ್ನಡದ ಮೇರು ನಟರಾದ ರಾಜ್ ಕುಮಾರ್, ಶಂಕರ್ ನಾಗ್, ವಿಷ್ಣುವರ್ಧನ್ ಸೇರಿದಂತೆ ಮಹಾನ್ ನಾಯಕರ ಪುತ್ಥಳಿಗಳನ್ನು ಬಿಬಿಎಂಪಿ ಗುರುತಿಸಲಾಗಿದ್ದು, ಅವುಗಳನ್ನು ಶೀಘ್ರದಲ್ಲೇ ತೆರವುಗೊಳಿಸುವುದಾಗಿ ಮಾಹಿತಿ ಲಭ್ಯವಾಗಿದೆ.
ಹೈಕೋರ್ಟ್ ಆದೇಶದಂತೆ ಗುರುತು ಮಾಡಿರುವ ಪುತ್ಥಳಿಗಳನ್ನು ಶೀಘ್ರದಲ್ಲೇ ತೆರವು ಮಾಡಲು ಬಿಬಿಎಂಪಿ ತೀರ್ಮಾನ ಕೈಗೊಂಡಿದ್ದು ನಟರ ಪುತ್ಥಳಿಗಳಿಗೂ ಕುತ್ತು ಬರುವ ಸಾಧ್ಯತೆಗಳಿದ್ದು ಪಾಲಿಕೆಯ ಈ ತೀರ್ಮಾನ ವಿವಾದಗಳಿಗೆ ಎಡೆ ಮಾಡಿಕೊಡುವ ಸಾಧ್ಯತೆಗಳು ದಟ್ಟವಾಗಿವೆ.

ಇದನ್ನೂ ಓದಿ: ನಾನು MP ಆಗ್ತೀನಿ ಅಂತ ಕನಸಲ್ಲೂ ನೆನೆಸಿರಲಿಲ್ಲ.. ದೇವರು ಬರೆದಂತೆ ಭವಿಷ್ಯ- ಸುಮಲತಾ ಹೀಗಂದಿದ್ದೇಕೆ?

Source: newsfirstlive.com Source link