‘ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್ ಕೇಂದ್ರ ಸರ್ಕಾರದ ದಲ್ಲಾಳಿ’-ಹೆಚ್​ಡಿಕೆ ವಾಗ್ದಾಳಿ

‘ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್ ಕೇಂದ್ರ ಸರ್ಕಾರದ ದಲ್ಲಾಳಿ’-ಹೆಚ್​ಡಿಕೆ ವಾಗ್ದಾಳಿ

ಮೈಸೂರು : ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್​ಸಿಂಗ್​ ಮೊದಲು ಕನ್ನಡನಾಡಿನ ಸಮಸ್ಯೆಗಳ ಆಲಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿ, ಅದು ಅವರ ಕರ್ತವ್ಯ, ಅದು ಬಿಟ್ಟು ಕೇವಲ ಸೂಟ್​ಕೇಸ್ ತೆಗೆದುಕೊಂಡು ಹೋದ್ರೆ ಆಗಲ್ಲ ಎಂದು ಮಾಜಿ ಸಿಎಂ ಹೆಚ್​​.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ನಾನು MP ಆಗ್ತೀನಿ ಅಂತ ಕನಸಲ್ಲೂ ನೆನೆಸಿರಲಿಲ್ಲ.. ದೇವರು ಬರೆದಂತೆ ಭವಿಷ್ಯ- ಸುಮಲತಾ ಹೀಗಂದಿದ್ದೇಕೆ?

ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅರುಣ್‌ಸಿಂಗ್ ಕೇಂದ್ರ ಸರ್ಕಾರದ ದಲ್ಲಾಳಿ, ಅವರಿಗೆ ಇಲ್ಲಿಯ ರಾಜಕಾರಣ ಗೊತ್ತಿಲ್ಲ. ಅವರು ಇಲ್ಲಿಗೆ ಬಂದಿರೋದು ದುಡ್ಡು ಕಲೆಕ್ಷನ್​ಗಾಗಿ ಮಾತ್ರ. ಜೆಡಿಎಸ್‌ನ ಮುಳುಗುತ್ತಿರುವ ಹಡಗು ಎಂದಿದ್ದಾರೆ. ಅವರಿಗೆ ಗೊತ್ತಿಲ್ಲ, ಮುಳುಗುತ್ತಿರುವುದು ಬಿಜೆಪಿ ಪಕ್ಷ ಎಂದು. ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಬೇಡಿ, ರಾಜ್ಯಕ್ಕೆ ಬರುವ ಇಂತಹ ದಲ್ಲಾಳಿಗಳಿಗೆ ಇಲ್ಲಿನ ವಾಸ್ತವವನ್ನ ರಾಜ್ಯ ಬಿಜೆಪಿ ನಾಯಕರುಗಳು ತಿಳಿ ಹೇಳಬೇಕು ಎಂದು ಕಿಡಿಕಾರಿದ್ದಾರೆ.

ನಾವೇನು ನಿಮ್ಮ ಮನೆ ಬಾಗಿಲಿಗೆ ಬಂದಿದ್ವಾ? ಪಾಲಿಕೆ ಮೇಯರ್​ ವಿಚಾರವಾಗಿ ಅರ್ಧ ರಾತ್ರಿಯಲ್ಲಿ ಮೈಸೂರಿನ ಸಾ.ರಾ.ಮಹೇಶ್‌ ಮನೆಗೆ ಬಂದಿದ್ದು ಯಾರು? ಜೆಡಿಎಸ್ ಬಗ್ಗೆ ಮಾತನಾಡಿದವರು ಯಾರ್ಯಾರು ಏನೇನಾಗಿದ್ದಾರೆ ಅಂತ ಇತಿಹಾಸ ಇದೆ. ಜೆಡಿಎಸ್‌ನ ಫ್ಯೂಸ್ ಕೀಳಲು ಯಾರಿಂದಲೂ ಸಾಧ್ಯವಿಲ್ಲ. ಜೆಡಿಎಸ್‌ ಗ್ರೌಂಡಿಂಗ್ ಬಹಳ ಭದ್ರವಾಗಿದೆ ಎಂದರು.

ಇದನ್ನೂ ಓದಿ: ಸುಮಲತಾ ಸ್ವಂತ ಮನೆ ನಿರ್ಮಾಣ ಹಿಂದಿದೆಯಾ ಪುತ್ರನ ರಾಜಕೀಯ ಭವಿಷ್ಯ ಲೆಕ್ಕಾಚಾರ?

Source: newsfirstlive.com Source link