ದೆವ್ವದ ವೇಷ ಧರಿಸಿ ಕೆಲಸ ಮಾಡ್ತಿದ್ದ ಹೋಟೆಲ್​ನಲ್ಲೇ ಕಳ್ಳತನ ಮಾಡಿದ ಸರ್ವರ್

ದೆವ್ವದ ವೇಷ ಧರಿಸಿ ಕೆಲಸ ಮಾಡ್ತಿದ್ದ ಹೋಟೆಲ್​ನಲ್ಲೇ ಕಳ್ಳತನ ಮಾಡಿದ ಸರ್ವರ್

ಬೆಂಗಳೂರು: ವ್ಯಕ್ತಿಯೋರ್ವ ತಾನು ಕೆಲಸ ಮಾಡುತ್ತಿದ್ದ ಹೋಟೆಲ್​ನಲ್ಲೇ ದೆವ್ವದ ವೇಷ ಹಾಕಿಕೊಂಡು ಕಳ್ಳತನ ಮಾಡಿರುವ ಘಟನೆ ಆನೇಕಲ್​ನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿರುವ ಶ್ರೀನಿಧಿ ಉಪಚಾರ ಹೋಟೆಲ್​ನಲ್ಲಿ ನಿನ್ನೆ ನಡೆದಿದೆ.

ಹಳೇ ಸಿನಿಮಾದ ಕಳ್ಳರ ರೀತಿ ಸರ್ವರ್ ಅಪ್ಪಣ್ಣ ಶೆಟ್ಟಿ ಮೈತುಂಬಾ ಬಿಳಿ ಬಣ್ಣದ ಬಟ್ಟೆ ಮುಚ್ಚಿಕೊಂಡು ಬಂದು ಕೃತ್ಯ ಎಸಗಿದ್ದಾನೆ. ಸರ್ವರ್ ಅಪ್ಪಣ್ಣ ಕಳ್ಳತನ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈತ 25 ದಿನಗಳ ಹಿಂದೆ ಹೋಟೆಲ್​ನಲ್ಲಿ ಕೆಲಸಕ್ಕೆ ಸೇರಿದ್ದ ಆಗಿನಿಂದಲೇ ಕಳ್ಳತನಕ್ಕೆ ಪ್ಲಾನ್ ಮಾಡಿದ್ದ ಎನ್ನಲಾಗಿದೆ.

 

ಹೋಟೆಲ್ ಮೈನ್ ಡೋರ್ ಬೀಗವನ್ನ ಎಕ್ಸೈಲ್ ಬ್ಲೇಡ್​ನಲ್ಲಿ ಕಟ್ ಮಾಡಿ ಆನಂತರ ಬೇರೆ ಹುಡುಗರು ಹೊರಬರದಂತೆ ರೂಂ ಲಾಕ್ ಮಾಡಿದ್ದಾನೆ. ಎಲ್ಲರನ್ನ ರೂಂಗಳಲ್ಲಿ ಕೂಡಿಹಾಕಿ ಕ್ಯಾಷ್ ಟೇಬಲ್​ನಲ್ಲಿದ್ದ 1.5 ಲಕ್ಷ ಹಣವನ್ನ ದೋಚಿದ್ದಾನೆ.. ಜೊತೆಗೆ ಹೋಟೆಲ್​ನಲ್ಲಿ ಕೆಲಸ ಮಾಡ್ತಿದ್ದ ಇಬ್ಬರ ಮೊಬೈಲ್ ಕಳ್ಳತನ ಮಾಡಿದ್ದಾನೆ.

blank
ಸರ್ವರ್ ಅಪ್ಪಣ್ಣ ಶೆಟ್ಟಿ

ಇನ್ನು ಅಪ್ಪಣ್ಣ ಶೆಟ್ಟಿ ವಿರುದ್ಧ ಹೋಟೆಲ್ ಮಾಲೀಕ ದಿನಕರ್ ದೂರು ನೀಡಿದ್ದು ಪೊಲೀಸರು ಕೇಸ್ ದಾಖಲಿಸಿಕೊಂಡು ಹೆಬ್ಬಗೋಡಿ ಠಾಣೆ ಪೊಲೀಸರಿಂದ ಅಪ್ಪಣ್ಣಶೆಟ್ಟಿಗಾಗಿ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ.

Source: newsfirstlive.com Source link