ಕಿಚ್ಚನಿಗಾಗಿ ಓಡಿ ಬಂತು ಶಂಕರ್ ಟೀಮ್ -‘ರೋಬೋ’ ಡೈರೆಕ್ಟರ್ ಸೃಷ್ಟಿಸಿದ ಕಥೆ ಕೇಳಿ ಕಿಚ್ಚ ಏನಂದ್ರು?

ಕಿಚ್ಚನಿಗಾಗಿ ಓಡಿ ಬಂತು ಶಂಕರ್ ಟೀಮ್ -‘ರೋಬೋ’ ಡೈರೆಕ್ಟರ್ ಸೃಷ್ಟಿಸಿದ ಕಥೆ ಕೇಳಿ ಕಿಚ್ಚ ಏನಂದ್ರು?

ಕಿಚ್ಚ ಸುದೀಪ ಅವರ ಶಾಂತಿ ನಿವಾಸದಲ್ಲಿ ಒಂದು ರಹಸ್ಯ ಸಭೆ ನಡೆದಿದೆ. ಆ ರಹಸ್ಯ ಸಭೆಗೆ ಕಾರಣವೇನು ಗೊತ್ತೇನು? ಕಾಲಿವುಡ್​​​​ ಸಿನಿ ಲೋಕದ ಧೈತ್ಯ ಪ್ರತಿಭೆ ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿ ಮೆಚ್ಚಿರುವ ನಿರ್ದೇಶಕ ಮೋಡಿಗಾರರೊಬ್ಬರು ಸುದೀಪ್​​ ಹಿಂದೆ ಬಿದ್ದಿದ್ದಾರೆ. ನೀವು ನಮ್ಮ ಸಿನಿಮಾದಲ್ಲಿ ಇದ್ರೇನೆ ನಮ್ಮ ಸಿನಿಮಾಕ್ಕೆ ಶಕ್ತಿ. ಒಂದ್ಸಲ ಕಥೆ ಕೇಳಿ ಬಿಡಿ ಅಂತ ಕುಂತೌವ್ರಂತೆ. ಹಾಗಾದ್ರೆ ಯಾರು ಆ ಡೈರೆಕ್ಟರು? ಕಿಚ್ಚನದ್ದು ಆ ಸಿನಿಮಾದಲ್ಲಿ ಏನ್ ಕ್ಯಾರೆಕ್ಟರು? ನಾವ್​ ಹೇಳ್ತೀವಿ ಓದಿ.

ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯ ಯಾರಿಗೆ ಬೇಡ ಹೇಳಿ. ಅವರಿದ್ರೆನೆ ಕ್ರೇಜು, ಕಿಚ್ಚ ಅನ್ನೋ ಹೆಸರಿಗೆ ಇದೆ ಗೇಜು​​​. ಹಿಂಗಾಗಿ ಅಕ್ಕ ಪಕ್ಕದ ಸಿನಿಮಾ ಇಂಡಸ್ಟ್ರಿಯವರು ಸುದೀಪ್ ಅವರನ್ನ ಹುಡ್ಕೊಂಡು ಆಗಾಗ ಶಾಂತಿ ನಿವಾಸಕ್ಕೆ ಬರ್ತಿತ್ತಾರೆ. ಈಗ ತಮಿಳಿನ ಸ್ಟಾರ್ ನಿರ್ದೇಶಕರೊಬ್ಬರಿಂದ ‘‘ಸರ್ ಏ ಪಡತ್ತ್‌ಲ್‌ ನೀಂಗಲ್ ಇರ್‌ಂದಾ ನಲ್ಲಾ ಇರುಕ್‌ ಸರ್‌’’. ಅಂತ ಬೆನ್ನು ಬಿದಿದ್ದಾರೆ. ಒಂದನೇ ಲಾಕ್​ಡೌನ್​​ನಲ್ಲಿ ಅಪ್ರೌಚ್ ಮಾಡಿದ್ರು. ಎರಡನೇ ಲಾಕ್​ ಮುಗಿದ ಕೂಡಲೇ ಕಥೆಯನ್ನ ಶಾಂತಿ ನಿವಾಸಕ್ಕೆ ಬಂದು ಹೇಳಿದ್ದಾರೆ. ಅಷ್ಟಕ್ಕೂ ಯಾರು ಆ ನಿರ್ದೇಶಕ? ಯಾವುದು ಆ ಸಿನಿಮಾ? ಅನ್ನೋ ಪ್ರಶ್ನೆಗೆ ಉತ್ತರ Rc-15 ಸಿನಿಮಾ.

blank

ಮಲ್ಟಿ ಸ್ಟಾರರ್​​​​​ ಚಿತ್ರದಲ್ಲಿ ಅಭಿನಯ ಚಕ್ರವರ್ತಿ

ಟಾಲಿವುಡ್​​ನ ಜೂನಿಯರ್ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರ 15ನೇ ಸಿನಿಮಾವನ್ನ ರೋಬೋ ಖ್ಯಾತಿಯ ಎಸ್​​.ಶಂಕರ್ ನಿರ್ದೇಶನ ಮಾಡ್ತಿದ್ದಾರೆ ಅನ್ನೋ ವಿಚಾರ ಈಗಾಗಲೇ ಅಧಿಕೃತವಾಗಿದೆ. ಈ ಸಿನಿಮಾದ ಹೀರೋಯಿನ್ ಕಿಯಾರಾ ಅಡ್ವಾಣಿ ಎಂದು ಫೈನಲ್ ಕೂಡ ಆಗಿದೆ. ಇನೇನಿದ್ರು ಆರ್.ಶಂಕರ್ ಶೂಟಿಂಗ್ ಸ್ಪಾಟ್​​​ಗೆ ರಾಮ್ ಚರಣ್ ಅವರನ್ನ ಕರೆಸಬೇಕು ಅಷ್ಟೇ. ಜೂನ್ ತಿಂಗಳಿನಿಂದಲೇ ಶಂಕರ್​-ರಾಮ್​ಚರಣ್ ಸಿನಿಮಾ ಕಾಂಬೋ ಶುರು ಆಗಬೇಕಿತ್ತು. ಇಷ್ಟು ದಿನ ಥ್ರಿಬಲ್ ಆರ್ ಸಿನಿಮಾದ ಶೂಟಿಂಗ್​​ನಲ್ಲಿ ರಾಮ್ ಚರಣ್ ಬ್ಯುಸಿ ಯಾಗಿದ್ರ ಕಾರಣ ಶೂಟಿಂಗ್ ಶುರು ಆಗಿಲ್ಲ. ಈಗ ಮತ್ತೆ ಆರ್.ಸಿ​-15 ಸಿನಿಮಾದ ಸಮಾಚಾರಗಳು ಪ್ರಗತಿಗೆ ಬಂದಿವೆ. ಆರ್.ಸಿ 15ನಲ್ಲಿ ನಮ್ಮ ಕಿಚ್ಚನ ರಂಜನೆಯ ಕಿಚ್ಚು ಇರೋ ಸೂಚನೆ ಚಿತ್ರಪ್ರೇಮಿಗಳೇ ತಂಡಕ್ಕೆ ಸಿಕ್ಕಿದೆ.

blank

ಶಂಕರ್ ಟೀಮ್​​ನಿಂದ ಕಿಚ್ಚನಿಗೆ ಸ್ಟೋರಿ ರೀಡಿಂಗ್

23ನೇ ತಾರೀಖ್ ಏಪ್ರಿಲ್ ತಿಂಗಳು ಇದೇ ವರ್ಷ 2021 ರಂದು ನಾವು ನಿಮ್ಮ ಮುಂದೆ ಇದೇ ವಿಚಾರವನ್ನ ಹೇಳಿದ್ವಿ. ಇಂದಿರನ್ ಖ್ಯಾತಿಯ ಎಸ್​.ಶಂಕರ್ ನಿರ್ದೇಶನದಲ್ಲಿ ನಮ್ಮ ಸುದೀಪ್ ಅವರ ನಟಿಸೋ ಸಾಧ್ಯತೆ ಇದೆ. ಲಾಕ್ ಡೌನ್ ಟೈಮ್​​ನಲ್ಲಿ ಶಂಕರ್ ಅವರು ಕಿಚ್ಚನಿಗೆ ಅಪ್ರೌಚ್ ಮಾಡಿದ್ದಾರೆ ಅನ್ನೋ ಸುದ್ದಿ ನಮಗೆ ಸಿಕ್ಕಿತ್ತು. ಈಗ ಅದರ ಮುಂದುವರೆದ ಭಾಗ. ಆರ್​.ಸಿ 15 ಸಿನಿಮಾ ಸೆಟ್ಟೇರಲು ಪೂರ್ವ ಸಿದ್ಧತೆಗಳು ನಡೆಯುತ್ತಿವೆ. ಪ್ಯಾನ್ ಇಂಡಿಯ ಮೂವಿಯಾಗಿ ಈ ಸಿನಿಮಾವನ್ನ ತೆರೆಗೆ ತರೋ ಯೋಜನೆಯಲ್ಲಿರೋ ಶಂಕರ್​ ದಕ್ಷಿಣದ ನಾಲ್ಕು ಭಾಷೆಯ ಸ್ಟಾರ್ ಕಲಾವಿದರನ್ನ ಒಟ್ಟು ಗುಡಿಸಿ ಸಿನಿಮಾ ಮಾಡುವ ಗುರಿಯಲ್ಲಿದ್ದಾರೆ.

ಸುದೀಪ್ ಅವ್ರವನ್ನ ಅಪ್ರೌಚ್ ಮಾಡಿರೋ ಶಂಕರ್ ಟೀಮ್ ಅಸೋಸಿಯೆಟ್ ಡೈರೆಕ್ಟರ್ ಕಮ್ ಕಥೆಗಾರ ಸಾಯಿ ಅವರನ್ನ ಸುದೀಪ್ ಅವರ ಮನೆಗೆ ಬಂದು ಕಥೆ ಮತ್ತು ಪಾತ್ರದ ವೈಶಿಷ್ಠತೆಯನ್ನ ಕಳೆದ ಸೋಮವಾರ ಹೇಳಿದ್ದಾರೆ.

ಸದ್ಯ ಕಿಚ್ಚ ಸುದೀಪ್ ಕೋಟಿಗೊಬ್ಬ 3 ಮತ್ತು ವಿಕ್ರಾಂತ್ ರೋಣ ಸಿನಿಮಾದ ರಿಲೀಸ್ ಅನ್ನ ಎದುರು ನೋಡ್ತಿದ್ದಾರೆ. ಆರ್​.ಚಂದ್ರು ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜ ಸಿನಿಮಾ ಶೂಟಿಂಗ್​ನಲ್ಲಿಯೂ ಕಿಚ್ಚ ಬ್ಯುಸಿ ಇದ್ದಾರೆ. ಈ ಗ್ಯಾಪ್​ನಲ್ಲಿ ತಮಿಳಿನ ವೆಂಕಟೇಶ್ ಪ್ರಭು ಅವರ ಹತ್ತಿರ ಒಂದು ಕಥೆಯನ್ನ ಕೇಳಿದ್ದಾರೆ. ಇವುಗಳ ನಡುವೆ ರೋಬೋ ಶಂಕರ್ ಅವರ ಕನಸಿನ ಸಿನಿಮಾದ ಬುಲಾವ್ ಕೂಡ ಬಂದಿದೆ. ಕಿಚ್ಚನ ನಡೆ ಯಾವ ಕಡೆ ಅನ್ನೋದನ್ನ ಕಾದು ನೋಡಬೇಕು. ಒಂದುವೇಳೆ ಶಂಕರ್ ನಿರ್ದೇಶನದ ಚಿತ್ರದಲ್ಲಿ ಸುದೀಪ್ ಇದ್ರೆ ಪಕ್ಕಾ ರಗಡ್​ ರಂಜನೆ ಯೂನಿವರ್ಸೆಲ್ ಪ್ರೇಕ್ಷಕರಿಗೆ ಸಿಕ್ಕೇ ಸಿಗುತ್ತೆ.

Source: newsfirstlive.com Source link